6

ಸೆ. 15 ರಂದು ಗಾಣಿಗರ ಎರಡನೇ ಅಂತರ್ ವಧು – ವರರ ಸಮಾವೇಶ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 25- ನಗರದಲ್ಲಿ ಸೆ.15ರಂದು ಸಮಸ್ತ ಗಾಣಿಗ ಜಾತಿ, ಜನಾಂಗಗಳ ಎರಡನೇ ಅಂತರ್ ರಾಜ್ಯ ವಧು-ವರರ ಸಮಾಗಮ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಗಾಣಿಗ ಸಂಘದ ಗೌರವಾಧ್ಯಕ್ಷ ರುದ್ರಮುನಿ ಗಾಳಿ ತಿಳಿಸಿದರು.

ಅವರು ಭಾನವಾರದಂದು ನಗರದ ಮೀಡಿಯಾ ಕ್ಲಬ್‌ನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ನಗರದ ಮಧುಶ್ರೀ ಗಾರ್ಡನ್‌ನಲ್ಲಿ ಆಯೋಜಿಸಲಾಗಿದೆ ಎಂದು ಇತ್ತೀಚಿನ ದಿನಗಳಲ್ಲಿ ಪೋಷಕರಿಗೆ ತಮ್ಮ ಮಕ್ಕಳಿಗೆ ವಧ-ವರರನ್ನು ಹುಡುವುದು ಸವಾಲಿನ ಕೆಲಸವಾಗಿದೆ ಸಮಾಜದ ಎಲ್ಲರಿಗೂ ಅನುಕೂಲ ವಾಗುವ ದೃಷ್ಟಿಯಿಂದ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ .

ನೋಂದಣಿ : ಈ ಸಮಾವೇಶದಲ್ಲಿ ಭಾಗವಹಿಸಲು ಈಗಾಗಲೇ ಕರ್ನಾಟಕ, ಆಂಧ್ರ, ತೆಲಂಗಾಣ, ಗೋವಾ, ಮಹಾರಾಷ್ಟ್ರದಿಂದ 161 ವಧು-ವರರು ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿಗೆ ಆ.30 ಕೊನೆ ದಿನವಾಗಿದ್ದು, 300ಕ್ಕೂ ಹೆಚ್ಚು ವಧು-ವರರು ನೋಂದಣಿ ಮಾಡಿಕೊಳ್ಳುವ ನಿರೀಕ್ಷೆ ಇದೆ.

ಇತ್ತೀಚಿನ ದಿನಗಳಲ್ಲಿ ಸರಕಾರಿ ನೌಕರಿ ಇರುವವರಿಗೆ ತಮ್ಮ ಮಗಳನ್ನು ಕೊಡಬೇಕೆನ್ನುವ ಪೋಷಕರ ಹುಚ್ಚು ಹವ್ಯಾಸವನ್ನು ಕೈಬಿಡಬೇಕು. ಹಣವಂತರು ಹಣ ತಿಂದು ಬದುಕುತ್ತಿಲ್ಲ. ಕೋಟ್ಯಾಧೀಶರೇ ಇದ್ದರೂ ರೈತರು ಬೆಳೆದ ಆಹಾರವನ್ನೇ ತಿನ್ನಬೇಕು. ಸಮಾಜದವರಿಗೆ ಕೃಷಿಕರ ಬಗ್ಗೆ ತಾತ್ಸಾರ ತೋರದಂತೆ ಪೋಷಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಶೈಕ್ಷಣಿಕ ಅರ್ಹತೆ, ಸದುಣ, ಸನ್ನಡತೆ, ಕ್ರಿಯಾಶೀಲ ವರನಿಗೆ ತಮ್ಮ ಮಗಳನ್ನು ಕೊಟ್ಟು ಮದುವೆ ಮಾಡಲು ಸಮಾಜ ಮುಂ ದಾಗ ಬೇಕೆಂದು ಮನವಿಯನ್ನು ಮಾಡಲಾಗುತ್ತಿದೆ. ಮತ್ತು ಸಮಸ್ತ ಲಿಂಗಾಯತ ಸಮುದಾಯದಲ್ಲಿ ಯಾವುದೇ ಜನಾಂಗಗಳ ವಧು-ವರರ ಪರಸ್ಪರ ಕೊಡುಕಳ್ಳುವಿಕೆ ಪ್ರಕ್ರಿಯೆ ನಡೆದರೆ ನಾವು ಬದ್ಧರಿದ್ದೇವೆ ಎಂಬುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ವಧು-ವರರ ವೇದಿಕೆಯ ಡಾ.ಕೇಶವ ಕಾಬಾ, ಉಮಾಪತಿ ಚೌದ್ರಿ, ಗಾಣಿಗ ಸಂಘದ ಜಿಲ್ಲಾಧ್ಯಕ್ಷ ತೋಟಪ್ಪ ಕಾಮನೂರು, ಮುಖಂಡ ಮಹೇಶ ಹಳ್ಳಿ ಇದ್ದರು.

Leave a Reply

Your email address will not be published. Required fields are marked *

error: Content is protected !!