KB

16 ಮತ್ತು 17ರಂದು ಮ್ಯಾನುಯಲ್ ಸ್ಕ್ಯಾವೆಂಜರ್ ನಿರ್ಮೂಲನೆಗೆ ನಗರಸಭೆಯಲ್ಲಿ ಸಮೀಕ್ಷೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 15- ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಅಕ್ಟೋಬರ್ 16 ಮತ್ತು ಅ.17ರಂದು ಬೆಳಿಗ್ಗೆ ೮:೩೦ ರಿಂದ ಮಧ್ಯಾಹ್ನ ೦೧:೩೦ರ ವರೆಗೆ ನಗರಸಭೆ ಕಾರ್ಯಾಲಯದಲ್ಲಿ ಮ್ಯಾನುವೆಲ್ ಸ್ಕ್ಯಾವೆಂಜರ್ ಪದ್ಧತಿಯ ಅನಿಷ್ಠ ಪದ್ಧತಿಯ ನಿರ್ಮೂಲನೆಗಾಗಿ ಎರಡು ದಿನಗಳ ಸಮೀಕ್ಷೆಯನ್ನು ಹಮ್ಮಿಕೊಳ್ಳಲಾಗಿದೆ.

ನಗರಸಭೆ ವ್ಯಾಪ್ತಿಯಲ್ಲಿನ ಮ್ಯಾನುವೆಲ್ ಸ್ಕ್ಯಾವೆಂಜರ್ ಪದ್ಧತಿ ಅಂದರೆ (ಮಲ ಹೊರವುದು, ಮಲ ಗುಂಡಿಗಳನ್ನು ಕೈಯಿಂದ ಸ್ವಚ್ಛಗೊಳಿಸುವುದು, ಅಂತಹ ವೃತ್ತಿಯಲ್ಲಿ ತೊಡಗಿರುವರುವಂತಹ ವ್ಯಕ್ತಿಗಳನ್ನು ಮ್ಯಾನುವೆಲ್ ಸ್ಕ್ಯಾವೆಂಜರ್ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿ ವೃತ್ತಿಯಿಂದ ಮುಕ್ತಿಗೊಳಿಸಿ ಸ್ವಾವಲಂಭಿಗಳಾಗಿ ಬದುಕನ್ನು ಸಾಗಿಸಲು ಸರ್ಕಾರದಿಂದ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ.

ಈ ವೃತ್ತಿಯಲ್ಲಿ ತೊಡಗಿರುವವರು ಸದವಕಾಶವನ್ನು ಬಳಸಿಕೊಂಡು ತಮ್ಮ ಹೆಸರನ್ನು ತಪ್ಪದೇ ನೋಂದಾಯಿಸಿಕೊಳ್ಳಲು ಅಗತ್ಯ ದಾಖಲೆಗಳಾದ ಒಂದು ಪಾಸ್ ಪೋರ್ಟ್ ಸೈಜ್ ಪೋಟೊ, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್(ಮೂಲಪ್ರತಿ), ಆಧಾರ್ ಕಾರ್ಡ್ ಜರಾಕ್ಸ್ (ಮೂಲಪ್ರತಿ), ಚುನಾವಣಾ ಗುರುತಿನಿ ಚೀಟಿ ಅಥವಾ ರೇಷನಾ ಕಾರ್ಡ್ (ಮೂಲಪ್ರತಿ), ಸಫಾಯಿ ಕರ್ಮಚಾರಿಗಳೆಂದು ಗುರುತಿಸಲು ಯಾವುದಾದರೂ ದಾಖಲೆಗಳು ಇದ್ದಲ್ಲಿ ತರಬೇಕು. ಕುಟುಂಬದ ಭಾವಚಿತ್ರ ಹಾಗೂ ಸಫಾಯಿ ಕರ್ಮಚಾರಿಗಳೆಂದು ಗುರುತಿಸಲು ಯಾವುದಾದರೂ ಪ್ರಮಾಣ ಪತ್ರ, ಈ ಎಲ್ಲ ದಾಖಲೆಗಳೊಂದಿಗೆ ಹೆಸರನ್ನು ನೋಂದಾಯಿಸಿಕೊಳ್ಳುವAತೆ ನಗರಸಭೆಯ ಪೌರಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!