26 ರಂದು ವಿಕಲಚೇತನರ ತೈಮಾಸಿಕ ಕುಂದುಕೊರತೆ ಸಭೆ
ಕರುನಾಡ ಬೆಳಗು ಸುದ್ದಿ
ವಿಜಯನಗರ, 24- ವಿಕಲಚೇತನರು ಇಲಾಖಾವಾರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ದೊರಕಿಸಕೊಬೇಕು ಹಾಗೂ ತ್ರೆöÊಮಾಸಿಕ ಕುಂದು ಕೊರತೆಗಳ ಸಭೆಯನ್ನು ಕರೆಯಬೇಕೆಂದು ಹೊಸಪೇಟೆ ನಗರ ವಿಕಲಚೇತನರ ಸಂಘದ ಅಧ್ಯಕ್ಷರು ಮನವಿ ಸಲ್ಲಿಸಿರುವುದರಿಂದ ವಿಕಚೇತನರ ಕುಂದುಕೊರತೆಗಳ ಬಗ್ಗೆ ಚರ್ಚಿಸಲು ಜುಲೈ 26ರಂದು ಬೆಳಗ್ಗೆ 11 ಗಂಟೆಗೆ ತಹಶೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಸಭೆ ನಡೆಯಲಿದೆ.
ಹೊಸಪೇಟೆ ತಾಲೂಕುಮಟ್ಟದ ಅಧಿಕಾರಿಗಳು ತಮ್ಮ ಇಲಾಖೆಯಿಂದ ವಿಕಲಚೇತನರಿಗೆ ನೀಡಿದ ಸೌಲಭ್ಯಗಳ ವಿವರವಾದ ವರದಿಯೊಂದಿಗೆ ಸಭೆಗೆ ಯಾವುದೇ ಪ್ರತಿನಿಧಿಗಳನ್ನು ನಿಯೋಜಿಸದೆ ತಾವೇ ಖುದ್ದಾಗಿ ಹಾಜರಾಗಬೇಕು ಎಂದು ತಹಶೀಲ್ದಾರರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
