26ನೇ ಅಂತರರಾಷ್ಟ್ರೀಯ ಮಾತೃಭಾಷೆ ದಿನ ಭಾಷೆಗಳ ಉಳಿವಿಗೆ ಜಾಗತಿಕ ಪ್ರಯತ್ನ : ಅಬ್ದುಲ್ ನಬಿ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,21- ಮಾತೃ ಭಾಷೆಗಳ ಉಳಿವಿಗೆ ಜಾಗತಿಕ ಮಟ್ಟದಲ್ಲಿ ಗಂಭೀರ ಪ್ರಯತ್ನಗಳು ನಡೆಯುತ್ತಿವೆ ಈ ಪ್ರಯತ್ನಗಳ ಒಂದು ಭಾಗವೇ ಅಂತರರಾಷ್ಟ್ರೀಯ ಮಾತೃ ಭಾಷಾ ದಿನ ಆಗಿದೆ ಫೆ. 21 ರಂದು ವಿಶ್ವದಾದ್ಯಂತ ಅಂತರರಾಷ್ಟ್ರೀಯ ಮಾತೃ ಭಾಷಾ ದಿನ ಎಂದು ಆಚರಿಸಲಾಗುತ್ತದೆ ಪ್ರಥಮ ಬಾರಿಗೆ ಯುನೆಸ್ಕೋ 1999ರಲ್ಲಿ ಈ ದಿನಾಚರಣೆಯನ್ನು ಅಧಿಕೃತವಾಗಿ ಘೋಷಿಸಿತು ಎಂದು ರಾಷ್ಟ್ರೀಯ ವಯಸ್ಕರ ಶಿಕ್ಷಣ ಸಾಕ್ಷರತಾ ಸದಸ್ಯರು ಸಮಾಜ ಸುಧಾರಕರು ಅಬ್ದುಲ್ ನಬಿ ಅವರು ಅಭಿಪ್ರಾಯಪಟ್ಟರು.
ನಗರದ ಇಬ್ರಾಹಿಂ ಮಂಜಿಲ್ ನಲ್ಲಿ ಅವರು ಅಂತರರಾಷ್ಟ್ರೀಯ ಮಾತೃಭಾಷೆ ದಿನ 26ನೇ ದಿನವನ್ನು ನೆನಪಿಸಿ ಗೌರವಿಸಿ ಅವರು ಮಾತನಾಡುತ್ತಾ ಕನ್ನಡವನ್ನು ಅನ್ನದ ಭಾಷೆಯನ್ನಾಗಿ ಮಾಡಿ ಉದ್ಧಾರ ಆಗಬೇಕು ಮಾತೃಭಾಷೆಯನ್ನು ಆಡಳಿತ ಭಾಷೆಯೆನ್ನಾಗಿಸಿದ ದಿನದ ಸ್ಮ ರಣಾರ್ಥವಾಗಿ ಮಾತೃ ಭಾಷಾ ದಿನವನ್ನು ವಿಶ್ವಸಂಸ್ಥೆ ಆಚರಿಸುತ್ತಿದೆ 1947ರಲ್ಲಿ ಅಖಂಡ ಭಾರತ ವಿಭಜನೆಯಾಗಿ ಭಾರತ ಪೂರ್ವ ಪಾಕಿಸ್ತಾನ್ ಮತ್ತು ಪಶ್ಚಿಮ ಪಾಕಿಸ್ತಾನಗಳು ಸೃಷ್ಟಿಯಾದವು ಪೂರ್ವ ಪಾಕಿಸ್ತಾನ ಇಂದಿನ ಬಾಂಗ್ಲಾದೇಶದ ಮೇಲೆ 1948ರಲ್ಲಿ ಪಶ್ಚಿಮ ಪಾಕಿಸ್ತಾನದಿಂದ ಉರ್ದು ಭಾಷೆಯನ್ನು ಹೇರಲಾಯಿತು.
ಭಾರತದಲ್ಲಿ 234 ಅಧಿಕೃತ ಭಾಷೆಗಳು ಎಂದು ಘೋಷಿಸಿದೆ 22 ಭಾಷೆಗಳನ್ನು ಮಾನ್ಯ ಮಾಡಿದೆ ನಾಗಲ್ಯಾಂಡ್ ಇಂಗ್ಲಿಷ್ ಅಧಿಕೃತ ಭಾಷೆ ಗೋವಾ ಕೊಂಕಣಿ ಜಮ್ಮು ಮತ್ತು ಕಾಶ್ಮೀರ್ ಉರ್ದು ಅಂಡಮಾನ್ ನಿಕೋಬಾರ್ ಲಕ್ಷದ್ವೀಪ ಜೆಸೇರಿ ನೆರೆಯ ತೆಲಗು ಭಾಷೆಯನ್ನು ಆಂಧ್ರ ಮತ್ತು ತೆಲಂಗಾಣ ಕರ್ನಾಟಕ ಕನ್ನಡ ಭಾಷೆ ಬಿಹಾರ್ ಮೈಥಿಲಿ ಗುಜರಾತ್ ರಾಜಸ್ಥಾನ್ ಮಹಾರಾಷ್ಟ್ರ ಭಾಗಗಳಲ್ಲಿ ಸಿಂಧಿ ಮಾತನಾಡುತ್ತಾರೆ ವಿಶ್ವ ಮಾತೃಭಾಷೆ ದಿನ ನುಡಿ ಸಮಾನತೆಯ ಮಹತ್ವ ಸಂಸತ್ತಿಗೆ ಅರ್ಥವಾಗಲಿ ಭಾಷಾ ನೀತಿ ಬದಲಾಗಲಿ ಎಂದು ಅಬ್ದುಲ್ ನಬಿ ಅವರು ತಿಳಿಸಿದರು.
