
ವಿಜಯನಗರ ( ಹೊಸಪೇಟೆ) ಶಾಸಕರ ಜನ ಸಂಪರ್ಕ ಕಚೇರಿಗೆ ಚಾಲನೆ
- ಕರುನಾಡ ಬೆಳಗು ಸುದ್ದಿ
- ಹೊಸಪೇಟೆ, 26 – ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ತಮ್ಮ ಕುಂದು ಕೊರತೆ ಅಳಲನ್ನು ತೋಡಿಕೊಳ್ಳಲು ಅವಕಾಶವಾಗುವಂತೆ ಜನ ಸಂಪರ್ಕ ಕಚೇರಿಯನ್ನು ಪ್ರಾರಂಭಿಸಲಾಗಿದೆ ಎಂದು ಶಾಸಕ ಹೆಚ್ಆರ್. ಗವಿಯಪ್ಪ ತಿಳಿಸಿದರು.
ಅವರು ನಗರದ ಡ್ಯಾಮ್ ರಸ್ತೆಯ ಸಾಯಿಬಾಬಾ ದೇವಸ್ಥಾನ ಶಾಸಕರ ನೂತನ ಕಚೇರಿಗೆ ಚಾಲನ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ನಗರದ ಸಮಸ್ಯೆಗಳು ಹಾಲಿಸುವುದು ಹಂತ ಹಂತವಾಗಿ ವಾರ್ಡ್ಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಅರಿಯುವುದು ಮುಖ್ಯವಾಗಿದೆ. ಈವರೆಗೂ ಮನೆಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದು, ಜನರ ಅನುಕೂಲಕ್ಕಾಗಿ ಈ ಕಚೇರಿಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ಸಕ್ಕರೆ ಕಾರ್ಖಾನೆ ಆರಂಭಕ್ಕೆ ಶೀಘ್ರವೇ ಚಾಲನೆ.
ಈ ಭಾಗದ ರೈತರ ಪ್ರಮುಖ ಬೇಡಿಕೆ ಸಕ್ಕರೆ ಕಾರ್ಖಾನೆ ಆರಂಭ ಈಗಾಗಲೇ ಜಾಗವನ್ನು ಬಹುತೇಕ ಅಂತಿಮ ಗೊಳಿಸಲಾಗಿದ್ದು ಎಲ್ಲಾ ಹಂತದ ರೈತರಿಗೆ ಅನುಕೂಲವಾಗುವಂತೆ ಸ್ಥಳೀಯ ಕೈಗಾರಿಕೋದ್ಯಮವನ್ನು ಮನವರಿಸುವ ಮೂಲಕ ನೂತನ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಆರಂಭಿಸಲು ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದರು ಸದ್ಯ ನಾವು ನೋಡಿರುವ ಪ್ರದೇಶ ಹಂಪಿ ವಿಶ್ವ ಪರಂಪರ ವ್ಯಾಪ್ತಿಯಲ್ಲಿ ಬರುವದರಿಂದ ತಾಂತ್ರಿಕ ತೊಂದರೆಯು ಆಗಬಹುದು ಎಂಬುದು ಅರಿವಿದ್ದು ಅದನ್ನು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಿಂದ ಹೊರ ತಂದು ನಿಯಮಸಡಲಿಕೆಯೊಂದಿಗೆ ಕಾರ್ಖಾನೆ ಪ್ರಾರಂಭಕ್ಕೆ ಬೇಕಾಗುವ ತಯಾರಿ ಮಾಡಿಕೊಳ್ಳಲಾಗುವುದು ಎಂದರು.
ಸಚಿವ ನಾಗೇಂದ್ರ ಹೇಳಿಕೆಗೆ ಅಕ್ಷೇಪ.
ವಿಜಯನಗರ ಜಿಲ್ಲೆಯನ್ನು ಮತ್ತೆ ಬಳ್ಳಾರಿಯಲಿ ವಿಲೀನ ಮಾಡಲಾಗುವುದು ಎಂಬ ಸಚಿವ ನಾಗೇಂದ್ರ ಅವರು ಹೇಳಿಕೆಗೆ ನಯವಾಗಿ ಆಕ್ಷೇಪ ವ್ಯಕ್ತಪಡಿಸಿದರು. ಎಲ್ಲರೂ ಒಟ್ಟಾಗಿರಬೇಕು ಎಂಬುದು ಎಲ್ಲರ ಅಪೇಕ್ಷೆ ಆದರೆ ಅದು ಇಂದು ವಿಜಯನಗರ ಜಿಲ್ಲಾ ರಚನೆ ಅನೇಕ ವರ್ಷಗಳ ಹೋರಾಟದ ಬಲವಾಗಿ ಲಭ್ಯವಾಗಿದೆ ಈ ಕಾರಣದಿಂದ ಅನೇಕ ಅಭಿವೃದ್ಧಿಗೂ ಕಾರಣವಾಗಿದ್ದು ಅದನ್ನು ಮುಂದುವರಿಸುವ ಮೂಲಕ ಮಾದರಿ ಜಿಲ್ಲೆಯಲ್ಲಿ ರೂಪುಗೊಳ್ಳಲು ಎಲ್ಲಾ ಹಂತದ ಪ್ರಯತ್ನ ಮಾಡುವುದಾಗಿ ಹೇಳಿದರು.