2c136fae-be38-4577-97e1-318669006cc9

ಕುಕನೂರು : ಜೂ. 27ರಂದು ಶಿಶುಕ್ಷು ತರಬೇತಿಗಾಗಿ ಕ್ಯಾಂಪಸ್ ಸಂದರ್ಶನ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 24- ಕುಕನೂರಿನ (ಗುದ್ನೆಪ್ಪನ ಮಠ) ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಶಿಶುಕ್ಷು ತರಬೇತಿಗಾಗಿ ಜೂನ್ 27ರಂದು ಬೆಳಿಗ್ಗೆ 10 ಗಂಟೆಗೆ ಕ್ಯಾಂಪಸ್ ಸಂದರ್ಶನವನ್ನು ಏರ್ಪಡಿಸಲಾಗಿದೆ.

ಈ ಸಂದರ್ಶನದಲ್ಲಿ ಟೊಯೋಟಾಸ್ ಇಂಡಿಯನ್ ಪ್ರೆöÊ.ಲಿ.ಬೆಂಗಳೂರು, ಟೊಯೋಟಾ ಇಂಡಸ್ಟಿçÃಸ್ ಇಂಜಿನ್ ಇಂಡಿಯಾ ಪ್ರೆöÊ.ಲಿ., ಸ್ನೆöÊಡೇರ್ ಎಲೆಕ್ಟಿçಕ್ ಇಂಡಿಯಾ ಪ್ರೆöÊ.ಲಿ., ಶಿಂಡ್‌ಜಿನ್ ಇಂಡಿಯಾ ಪ್ರೆöÊ.ಲಿ. ಹಾಗೂ ಅಟೋಲಿವ್ ಇಂಡಿಯನ್ ಪ್ರೆöÊ.ಲಿ.ದೇವನಹಳ್ಳಿ ಮತ್ತು ಬೆಂಗಳೂರು ಇವರು ಭಾಗವಹಿಸಿ, ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಐಟಿಐ ತರಬೇತಿ ಪಡೆದ ಅಭ್ಯರ್ಥಿಗಳನ್ನು ಶಿಶುಕ್ಷು ತರಬೇತಿಗಾಗಿ ಆಯ್ಕೆ ಮಾಡಿಕೊಳ್ಳಲಿದ್ದಾರೆ. ರೂ. 16,000 ರಿಂದ ರೂ. 18,333 ರವರಿಗೆ ಸ್ಟೆöÊಫಂಡ್ ನೀಡಲಾಗುತ್ತದೆ.

ಕ್ಯಾಂಪಸ್ ಸಂದರ್ಶನದಲ್ಲಿ 18 ರಿಂದ 24 ವರ್ಷ ವಯೋಮಿತಿಯಲ್ಲಿರುವ ಐಟಿಐನ ಎಲೆಕ್ಟಿçಷಿಯನ್, ಫಿಟ್ಟರ್, ವೆಲ್ಡರ್, ಟರ್ನರ್, ಮಶಿನಿಸ್ಟ್, ಎಮ್.ಎಮ್.ವಿ., ಅಡ್ವಾನ್ಸ್ ಸಿ.ಎನ್.ಸಿ, ಡೀಸೆಲ್ ಮೆಕಾನಿಕ್ ಹಾಗೂ ಎಲೆಕ್ಟಿçಕಲ್ ಮೆಕಾನಿಕ್ ವೃತ್ತಿಗಳಲ್ಲಿ ಉತ್ತೀರ್ಣರಾದ ಹಾಗೂ ಅಂತಿಮ ವರ್ಷದಲ್ಲಿ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳು ಭಾಗವಹಿಸಬಹುದು.

ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಸಂಬAಧಿಸಿದ ಎಲ್ಲಾ ಪ್ರಮಾಣ ಪತ್ರಗಳ ಮೂಲ ದಾಖಲಾತಿ ಹಾಗೂ 1 ಸೆಟ್ ಝರಾಕ್ಸ್ ಪ್ರತಿಗಳು ಮತ್ತು 2 ಫೋಟೋ, ಬಯೋಡೆಟಾದೊಂದಿಗೆ ಹಾಜರಾಗಬೇಕು.

ಹೆಚ್ಚಿನ ಮಾಹಿತಿಗಾಗಿ ಮೊಸಂ: 9164198246, 861895296, 9964247098, 9945789400 ಮತ್ತು 9964247098 ಗೆ ಸಂಪರ್ಕಿಸಬಹುದಾಗಿದೆ ಎಂದು ಕುಕನೂರು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!