36ನೇ ವಿಶ್ವ ಜನಸಂಖ್ಯಾ ದಿನ ಜನಸಂಖ್ಯೆ ಶಾಪವಲ್ಲ ಸಂಪತ್ತು : ಅಬ್ದುಲ್ ನಬಿ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ -ಪ್ರಪಂಚದಲ್ಲೆ ಫಸ್ಟ್ ಭಾರತ 144 ಕೋಟಿ ಜನ ಸಂಖ್ಯೆ ಹೊಂದಿದೆ ಸೆಕೇಂಡ್ ಚೀನಾ 143 ಕೋಟಿ ಜನಸಂಖ್ಯೆ ಹೊಂದಿದ್ದು 2075ರ ವೇಳೆಗೆ ಭಾರತ ಜನಸಂಖ್ಯೆ 175ಕೋಟಿ ಮೀರಲಿದೆ ನಂತರ ಭಾರತದ ಜನಸಂಖ್ಯೆ ಇಳಿಕೆಯ ಹಾದಿಯಲ್ಲಿ ಸಾಗಲಿದೆ ತಜ್ಞರ ಅಭಿಪ್ರಾಯ ಎಂದು ರಾಷ್ಟ್ರೀಯ ಸಾಕ್ಷರತಾ ಜನಾಭಿಪ್ರಾಯ ಮುಖಂಡ ಸಮಾಜ ಸುಧಾರಕ ಎ ಅಬ್ದುಲ್ ನಬಿ ಅವರು ಹೇಳಿದರು ಸಿರುಗುಪ್ಪ ನಗರದ ಇಬ್ರಾಹಿಂ ಮಂಜಿಲ್ ನಲ್ಲಿ ಅವರು 36ನೇ ವಿಶ್ವ ಜನಸಂಖ್ಯಾ ದಿನವನ್ನು ನೆನಪಿಸಿ ಮಾತನಾಡುತ್ತಾ ಜುಲೈ 11ರಂದು ವಿಶ್ವ ಜನಸಂಖ್ಯಾ ದಿನ ಆಚರಿಸಲಾಗುತ್ತಿದೆ ಯಾವುದೇ ದೇಶಕ್ಕೆ ಆ ದೇಶದಲ್ಲಿರುವ ಜನಸಂಖ್ಯೆಯೇ ಮುಖ್ಯವಾದ ಸಂಪತ್ತು ಒಂದೆಡೆ ಜನಸಂಖ್ಯೆ ಹೆಚ್ಚಳವಾಗುತ್ತಿದೆ ಎನ್ನುವ ಆತಂಕ ಇನ್ನೊಂದೆಡೆ ಜನಸಂಖ್ಯೆ ಇಳಿಕೆ ಯಾಗುತ್ತಿದೆ ಈ ಎಲ್ಲಾ ಕಳವಳ ಸವಾಲು ಕುರಿತಂತೆ ಅವಲೋಕಿಸಿದ್ದಾರೆ ತಜ್ಞರು .
810 ಕೋಟಿ ಜನಸಂಖ್ಯೆ : ವರ್ಷದಿಂದ ವರ್ಷಕ್ಕೆ ಏರು ಗತಿಯಲ್ಲಿ ಸಾಗಿರುವ ವಿಶ್ವದ ಜನಸಂಖ್ಯೆ ಪ್ರಸ್ತುತ 810 ಕೋಟಿ ದಾಟಿದೆ 2023ರ ಸೆಪ್ಟಂಬರ್ ನಲ್ಲಿ 8 ಶತಕೋಟಿ ತಲುಪಿದ್ದ ಜಾಗತಿಕ ಜನಸಂಖ್ಯೆ ಕೇವಲ 10 ತಿಂಗಳಲ್ಲಿ 10 ಕೋಟಿ ಏರಿಕೆಯಾಗಿದೆ ಈ ಪ್ರಮಾಣದ ಜನಸಂಖ್ಯೆಯಲ್ಲಿ ಭಾರತದ ಶೇಖಡ 18.1 ಮತ್ತು ಚೀನಾ ಶೇಕಡ 17 .55 ರಷ್ಟು ಪಾಲಿದೆ 1804ರಲ್ಲಿ ಒಂದು ಶತ ಕೋಟಿ ಯಷ್ಟಿದ್ದ ವಿಶ್ವದ ಜನಸಂಖ್ಯೆ 2024ರ ಜುಲೈ 1ರವರೆಗೆ 810 ಕೋಟಿಯಷ್ಟಾಗಿದೆ 2011ರಲ್ಲಿ ಜಾಗತಿಕ ಜನಸಂಖ್ಯೆ 7 ಶತಕೋಟಿ ಮುಟ್ಟಿತ್ತು 2030ರಲ್ಲಿ ಅಂದಾಜು 8.5 ಶತಕೋಟಿ ಇದ್ದರೆ 2050 ರ ವೇಳೆಗೆ ಇದು 9.7 ಶತ ಕೋಟಿಗೆ ಏರಿಕೆಯಾಗಲಿದೆ 2100ರ ಹೊತ್ತಿಗೆ10.9 ಶತ ಕೋಟಿಗೆ ಮುಟ್ಟಲಿದೆ .
ಆಚರಣೆ ಉದ್ದೇಶ: ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಜುಲೈ 11ರಂದು ವಿಶ್ವ ಜನಸಂಖ್ಯಾ ದಿನ ಆಚರಿಸಲಾಗುತ್ತದೆ ವಿಶ್ವ ಸಂಸ್ಥೆಯ ಅಂಗ ಸಂಸ್ಥೆಯಾದ ವಿಶ್ವ ಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ ಮಂಡಳಿಯು 1989ರ ಜುಲೈ 11ರಂದು ಮೊದಲ ಬಾರಿ ಈ ದಿನವನ್ನು ಆಚರಿಸಿತು ಅಂದಿನಿಂದ ಜಗತ್ತಿನಾದ್ಯಂತ 200 ದೇಶಗಳು ಈ ದಿನವನ್ನು ಆಚರಿಸಿಕೊಂಡು ಬರುತ್ತಿವೆ .
ಜನಸಂಖ್ಯೆಯ ಟಾಪ್ 10 ರಾಷ್ಟ್ರಗಳು ಭಾರತ ಜನಸಂಖ್ಯೆ 144 ಕೋಟಿ, ಚೀನಾ 143 , ಅಮೇರಿಕಾ 34, ಇಂಡೋನೇಷ್ಯಾ 28, ಪಾಕಿಸ್ತಾನ 24, ನೈಜೇರಿಯಾ 23, ಬ್ರೆಜಿಲ್ 21, ಬಾಂಗ್ಲಾದೇಶ 17, ರಷ್ಯಾ 14, ಮೆಕ್ಸಿಕೋ 13 ಕೋಟಿಗಳು
ಮಿತಿಮೀರಿದ ಜನಸಂಖ್ಯೆ : 23.89ಕೋಟಿ ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶ ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ ಬಿಹಾರ್ 12.7 ಮಹಾರಾಷ್ಟ್ರ 12.6 ಪಶ್ಚಿಮ ಬಂಗಾಳ 10 , ಮಧ್ಯಪ್ರದೇಶ 9 ಕೋಟಿ ಜನಸಂಖ್ಯೆ ಹೊಂದಿದೆ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳುಳ್ಳ ಭಾರತದಲ್ಲಿ ಕೇವಲ 5 ರಾಜ್ಯಗಳೆ ಸುಮಾರು 50ರಷ್ಟು ಜನಸಂಖ್ಯೆ ಹೊಂದಿದೆ .
ದಕ್ಷಿಣ ರಾಜ್ಯಗಳಲ್ಲಿ ಕಡಿವಾಣ : ತಮಿಳುನಾಡು 7.7 ಕೋಟಿ ಜನಸಂಖ್ಯೆ ಹೊಂದಿದೆ ಕರ್ನಾಟಕ 6.8 ಆಂಧ್ರಪ್ರದೇಶ 5.3 ತೆಲಂಗಾಣ 3.8 ಕೇರಳ 3.5 ಕೋಟಿ ಗೋವಾ 1.5 ಲಕ್ಷ ಕೇಂದ್ರಾಡಳಿತ ಪ್ರದೇಶ ಪಾಂಡಿಚೆರಿ 1.6 ಲಕ್ಷ ರಾಜ್ಯಗಳ ಒಟ್ಟು ಜನಸಂಖ್ಯೆ ಕೇವಲ 23. 06 ಕೋಟಿ ಈ ಆರು ರಾಜ್ಯಗಳ ಜನಸಂಖ್ಯೆ ಉತ್ತರ ಪ್ರದೇಶದ ಜನಸಂಖ್ಯೆಗಿಂತಲೂ ಕಡಿಮೆ ಇದೆ .
ಜನಸಂಖ್ಯೆ ಹೆಚ್ಚಳಕ್ಕೆ ಕಸರತ್ತು : ಬಹುತೇಕ ದೇಶಗಳಲ್ಲಿ ಜನಸಂಖ್ಯಾ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ ಇದು ಒಟ್ಟಾರೆ ಜಾಗತಿಕ ಜನಸಂಖ್ಯೆಗೆ ಹೋಲಿಸಿದರೆ ಒಳ್ಳೆಯದೇ ಆದರು ಆಯಾ ದೇಶಗಳ ಭೂ ವಿಸ್ತೀರ್ಣ ಮತ್ತು ಇನ್ನಿತರ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಕೆಲ ದೇಶಗಳು ಜನಸಂಖ್ಯೆ ಹೆಚ್ಚಳಕ್ಕೆ ಇನ್ನಿಲ್ಲದ ಕಸರತ್ತು ನಡೆಸುತ್ತಿವೆ ಉದಾಹರಣೆಗೆ ಸ್ಪೇನ್ ಜಪಾನ್ ನೈಜೀರಿಯಾ ಯುರೋಪಿಯನ್ ದೇಶಗಳಲ್ಲಿ ಅಲ್ಲಿಯ ಸರ್ಕಾರಗಳು ಜನಸಂಖ್ಯಾ ಹೆಚ್ಚಳಕ್ಕಾಗಿ ಧನ ಸಹಾಯ ಮತ್ತು ಭವಿಷ್ಯದ ಭದ್ರತೆಗಾಗಿ ಭರವಸೆಯ ಉತ್ತೇಜನ ನೀಡುತ್ತಿವೆ ಆದರೂ ಜನರಲ್ಲಿ ಮಕ್ಕಳು ಹೊಂದುವ ಆಸಕ್ತಿ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ
ಗಂಭೀರ ಸಮಸ್ಯೆ : ಮಿತಿಮೀರಿದ ಜನಸಂಖ್ಯೆ ಮನುಕುಲಕ್ಕೆ ಗಂಭೀರ ಸಮಸ್ಯೆಯಾಗಿ ಪರಿಣಾಮಿಸಲಿದೆ ಜನಸಂಖ್ಯೆ ಜಾಸ್ತಿ ಯಾದಂತೆ ಪರಿಹರಿಸಲಾಗದ ಹಲವಾರು ತೊಂದರೆಗಳು ವಿಶ್ವಕ್ಕೆ ಎದುರಾಗುತ್ತವೆ ಹೀಗಾಗಿ ಜಗತ್ತಿನ ಎಲ್ಲಾ ದೇಶಗಳು ಈಗಾಗಲೇ ಎಚ್ಚೆತ್ತುಕೊಂಡು ತಮ್ಮ ಜನಸಂಖ್ಯೆಯನ್ನು ನಿಯಂತ್ರಿಸಲು ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲೇ ಬೇಕಾಗಿದೆ ಜನಸಂಖ್ಯೆಯನ್ನು ನಿಯಂತ್ರಣದಲ್ಲಿಡಲು ಆಯಾ ಸರ್ಕಾರಗಳು ಕೈಗೊಂಡ ಕ್ರಮಗಳನ್ನು ಅನುಸರಿಸುವ ಮೂಲಕ ನಾಗರಿಕರು ಕೂಡ ಸಹಕರಿಸಬೇಕಾಗಿರುವುದು ಇಂದಿನ ತುರ್ತು ಲಿಂಗ ಜನಾಂಗ ವರ್ಗ ಧರ್ಮ ಮತ್ತು ಅಂಗ ವೈಕಲ್ಯಾ ಇತ್ಯಾದಿ ಕಾರಣಗಳಿಂದ ಎಲ್ಲರಿಗೂ ಸಮನಾದ ಹಕ್ಕುಗಳು ಸಿಗುತ್ತಿಲ್ಲ ಅತಿ ಜನಸಂಖ್ಯೆಯಿಂದಾಗಿ ಲಿಂಗ ಅಸಮಾನತೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚುತ್ತಿದೆ .
ಜೀವಿತಾವಧಿ ಹೆಚ್ಚಳ : ಇತ್ತೀಚಿನ ದಿನಗಳಲ್ಲಿ ಫಲವತ್ತತೆ ಮತ್ತು ಜೀವಿತಾವಧಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ 1970ರ ದಶಕದಲ್ಲಿ ಮಹಿಳೆಯರು ಸರಾಸರಿ 4.5 ಮಕ್ಕಳನ್ನು ಹೊಂದಿದ್ದರು 2015ರ ವೇಳೆಗೆ ಫಲವತ್ತತೆ ಪ್ರತಿ ಮಹಿಳೆಗೆ ಸರಾಸರಿ 2.5ಕ್ಕಿಂತ ಕಡಿಮೆಯಾಗಿದೆ ಜಾಗತಿಕ ಜೀವಿತಾವಧಿ 1990ರ ದಶಕದ ಆರಂಭದಲ್ಲಿದ್ದ 64.6 ವರ್ಷಗಳಿಂದ 2019ರಲ್ಲಿ 72.6 ವರ್ಷಗಳಿಗೆ ಏರಿದೆ .
ಯುವ ಭಾರತ : ಭಾರತದ ಜನಸಂಖ್ಯೆಯಲ್ಲಿ ಶೇಕಡ 50ಕ್ಕೂ ಹೆಚ್ಚಿನ ಜನರ ವಯಸ್ಸು 25ಕ್ಕೂ ಕಡಿಮೆ ಇದನ್ನು 35ರ ವರೆಗೆ ಏರಿಸಿದರೆ ನಮ್ಮ ಜನಸಂಖ್ಯೆಯ 65 ಪ್ರತಿಶತ ಜನರು ಇದರ ಅಡಿ ಬರುತ್ತಾರೆ ಅಂದರೆ ಹತ್ತಿರತ್ತಿರ 85 ಕೋಟಿ ಜನರು 35 ವಯೋಮಾನ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರು ಶೇಕಡ 36. 8ರಷ್ಟು ಭಾರತೀಯರು ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದು ಉಳಿದ ಶೇಕಡ 73.2ರಷ್ಟು ಭಾರತೀಯರು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಜನಾಭಿಪ್ರಾಯ ಮುಖಂಡ ಅಬ್ದುಲ್ ನಬಿಯವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಸರ್ವರಿಗೂ ವಿಶ್ವ ಜನಸಂಖ್ಯೆ ದಿನದ ಪ್ರೀತಿಯ ಶುಭಾಶಯವನ್ನು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಅವರು ಹಾರೈಸಿದರು.
