ಜೀವನದ ಮೌಲ್ಯ ಹಿಡಿಯುವ ಶಕ್ತಿ ಶರಣರ ವಚನ ಸಾಹಿತ್ಯಕ್ಕೆ ಇದೆ : ಬಿಇಓ ಹೆಚ್ ಗುರಪ್ಪ
ಕರುನಾಡ ಬೆ ಸುದ್ದಿ
ಸಿರುಗುಪ್ಪ, 9- ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಶರಣರ ವಚನ ಸಾಹಿತ್ಯಕ್ಕೆ ಇದೆ ಎಂದು ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ಗುರಪ್ಪ ಅವರು ಅಭಿಪ್ರಾಯ ಪಟ್ಟರು.
ತಾಲೂಕಿನ ಅರಳಿಗನೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಎಸ್ ಡಬ್ಲ್ಯೂ ಎಸ್ ಶಾಲಾ ಆವರಣದಲ್ಲಿ ಆಯೋಜಿಸಿದ 39ನೇ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮೈಸೂರು ಹಾಗೂ ಸಿರುಗುಪ್ಪ ತಾಲೂಕ ಘಟಕ ಲಿಂಗೈಕ್ಯ ಶ್ರೀ ಜೆ ಭದ್ರೆಗೌಡ ಪತ್ನಿ ಶ್ರೀಮತಿ ಜೆ ನೀಲಮ್ಮ ದತ್ತಿ ದಾಸೋಹಿಗಳು ಶ್ರೀ ಜೆ ನಾಗೇಂದ್ರ ಗೌಡ ಶ್ರೀಮತಿ ಜೆ ವಸುಂದರಮ್ಮ ಅವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ ಶರಣರು ನುಡಿದಂತೆ ನಡೆದವರು ನಾವು ಆ ಮಾರ್ಗದಲ್ಲಿ ನಡೆಯಬೇಕು ಎಂದು ಕರೆ ಕೊಟ್ಟರು.
ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕಗಳು ಪೆನ್ನು ಪೆನ್ಸಿಲ್ ಸ್ಲೇಟ್ ರಬ್ಬರ್ ಮೆಂಡರ್ ಹಾಗೂ ಕಾಪಿ ಬರಹ ಪುಸ್ತಕಗಳನ್ನು ವಿತರಿಸಲಾಯಿತು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷರಾದ ಜೆ ನಾಗೇಂದ್ರ ಗೌಡ ಅವರು ಮಾತನಾಡಿ ವಚನ ಸಂಸ್ಕೃತಿ ಅಂದರೆ ಮಾನವೀಯ ಸಂಸ್ಕೃತಿ, ಮಾನವೀಯ ಬದಲಾವಣೆಯನ್ನು ಸಮಾಜದಲ್ಲಿ ತರಲು ಶರಣರು ಮೇಲು ಕೀಳಿನ ಜಾತಿ ತರತರಹದ ವ್ಯವಸ್ಥೆಯನ್ನು ಅಳಸಿ, ಮನುಷ್ಯರಾಗಿ ಬಾಳುವುದೇ ಅತ್ಯುನ್ನತ ಧರ್ಮ ಎಂದು ಸಾರಿದ್ದಾರೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಲಾ ಮುಖ್ಯ ಗುರುಗಳಾದ ದೇವೇಂದ್ರ ಗೌಡ ವ್ಯವಸ್ಥಾಪಕ ವೆಂಕಟೇಶ ನಾಯಕ ಗ್ರಾಮ ಪಂಚಾಯತ್ ಸದಸ್ಯರಾದ ಬಸವರಾಜ ತಂದೆ ನಾಗೇಂದ್ರ ಗೌಡ ಶಾಲೆಯ ಎಲ್ಲಾ ಶಿಕ್ಷಕರು ಪಾಲ ಪೋಷಕರು ಮತ್ತಿತರರ ಗಣ್ಯರು ಇದ್ದರು .
