WhatsApp Image 2024-02-12 at 2.41.52 PM

393ನೇ ಗಡ್ಡೆ ಖಾದರ್ ಭಾಷಾ ಬಗ್ದಾದಿ ಉರುಸ್ ಮುಬಾರಕ್

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ,12- ತಾಲೂಕು ತುಂಗಭದ್ರ ನದಿ ನಡುಗಡ್ಡೆ ವಿಶಾಲವಾದ ಐತಿಹಾಸಿಕ ಪವಿತ್ರ ಕ್ಷೇತ್ರ ಸಿಂಧನೂರು ತಾಲೂಕು ಮುಕುಂದ ಗ್ರಾಮದ ಖುತುಬುಲ್ ಅಖ್ತಾಬ್ ಹಜರತ್ ಷಾ ಅಬ್ದುಲ್ ಖಾದರ್ ಖಾದ್ರಿ ಬಗ್ದಾದಿ ಉರುಫ್ ಗಡ್ಡೆ ಖಾದರ್ ಭಾಷಾ ಖಾದ್ರಿ ರಹಮತುಲ್ಲಾ ಅಲೈಹಿ ಹಜರತ್ ಸೈಯದ್ ಶಾ ಚಾ ಹುಸೇನ್ ಪೀರ್ ಖಾದ್ರಿ ರ.ಅ ರವರ 393ನೇ ಉರುಸ್ ಮುಬಾರಕ್ ಅಂಗವಾಗಿ ಫೆ.26 ಗಂಧ ಮಹೋತ್ಸವ ಫೆ. 27 ಉರುಸ್ ಮುಬಾರಕ್ ಫೆ.28 ಜಿಯಾರತ್ ಶರೀಫ್ ಎಂದು ಸೈಯದ್ ಶಾ ಹಾಶಿಂ ತಿಳಿಸಿದರು.

ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ, ಮಹೆಫಿಲೆ ಸಮಾರಂಭ ಕಾರ್ಯಕ್ರಮಗಳು ಹಜರತ್ ಸೈಯದ್ ಶಾ ಹಾಶಿಂ, ಪೀರ್ ಖಾದ್ರಿ ಸೈಯದ್ ಶಾ, ಹಸನ್ ಬಸರಿ, ಖಾದ್ರಿ ಮೌಲ್ವಿ, ಫಾಜೀಲ್ ಬಿನ್, ಸೈಯದ್ ಶಾ, ಗೌಸ್ ಪೀರ್ ಖಾದ್ರಿ, ಸಾಹೇಬ್ ಸಜ್ಜಾದ, ನಶೀನ್ ಮತ್ತು ಅನುವಂಶ ಮುತವಲ್ಲಿ, ದರ್ಗಾ ಮುಕುಂದ, ಶರೀಫ್ ಬಿರಾದರ್, ಸಜ್ಜಾದ ಗಾನೆ ಮುಕ್ಕುಂದ, ಹಜರತ್ ಸೈಯದ್ ಶಾ ಖಾದರ್ ವಲಿ, ಪೀರ್ ಖಾದ್ರಿ, ಉರುಫ್ ಭಾಷಾ, ಪೀರಸಾಹೇಬ್ ನಾಯಬ್, ಮುತವಲ್ಲಿ ಸೈಯದ್, ಖಾಜಾ ಪೀರ್ ಖಾದ್ರಿ ಬಿನ್, ಖಾದರ್ ಭಾಷಾ, ಖಾದ್ರಿ ಮುಕ್ಕುಂದ, ಗ್ರಾಮ ಪಂಚಾಯತ್ ಮಾಜಿ ಸದಸ್ಯರು, ಇವರ ಸಮ್ಮುಖದಲ್ಲಿ ಜರುಗುತ್ತವೆ ಮುಖ್ಯ ಅತಿಥಿಗಳು, ಶಾಸಕರು, ಸಂಸದರು, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್, ನಗರಸಭಾ, ಪುರಸಭಾ ಅಧ್ಯಕ್ಷರು, ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮುಖ್ಯ ಅತಿಥಿಗಳಾಗಿ ಆಗಮಿಸುವರು.

ಹೈದರಾಬಾದ್, ಗುಲ್ಬರ್ಗ, ರಾಯಚೂರು, ಕೊಪ್ಪಳ, ಬಳ್ಳಾರಿ, ಹೊಸಪೇಟೆ, ಅನಂತಪುರ, ಗುಂತಕಲ್, ಆದೋನಿ, ಸಂಡೂರು ಮಾರ್ಗಗಳಿಂದ ಬರುವ ಭಕ್ತಾದಿಗಳು ಸಿರುಗುಪ್ಪ ಅಥವಾ ಸಿಂಧನೂರ್ ಮಾರ್ಗವಾಗಿ ಮಹಾತ್ಮರ ಜಿಯಾರತ್ ದರ್ಶನ ಪಡೆಯಬೇಕೆಂದು ವಿನಂತಿಸಿ ಕೊಂಡರು.

Leave a Reply

Your email address will not be published. Required fields are marked *

error: Content is protected !!