42c7ac32-d774-4595-992e-7bbc1d73b28b

ಸ್ತ್ರೀ ಬದಲಾವಣೆ

 

ಬದಲಾವಣೆಯನ್ನು ಬಯಸುತ್ತಿದ್ದ ಜ್ಯೋತಿಬಾರವರ ಕೈಹಿಡಿದರು..
ಅಜ್ಞಾನವನ್ನು ಅಳಿಸಲು ಶಿಕ್ಷಣದ ಹಾದಿಹಿಡಿದರು..
ಕ್ರಾಂತಿಯಕಿಡಿಯ ಹೊತ್ತಿಸಲು ದಿಟ್ಟ ಹೆಜ್ಜೆಯನ್ನಿಟ್ಟರು‌..
ಎಲ್ಲಾ ಹೆಣ್ಣುಮಕ್ಕಳು ತನ್ನಂತೆ ಅಂದುಕೊಂಡರು..

ಜ್ಞಾನದೀವಿಗೆಯಾಗಿ ಹೊಸಯುಗಕ್ಕೆ ನಾಂದಿ ಹಾಡಿದರು..
ಶಿಕ್ಷಣ ಸಂಘಟನೆ ಹೋರಾಟ ಪ್ರಾರಂಬಿಸಿದರು..
ಅವಹೇಳನ, ಸಗಣಿ, ತಾರತಮ್ಯಗಳನ್ನು ಕಡೆಗಾಣಿಸಿದರು..
ಹೆಣ್ಣಿಗೂ ಶಿಕ್ಷಣ ಸಮಾನತೆ ಬೇಕೆಂದರು..

ಮೂಢನಂಬಿಕೆ ಆಚರಣೆಗಳನ್ನು ಕಟುವಾಗಿ ಟೀಕಿಸಿದರು..
ಗಂಡು-ಹೆಣ್ಣು, ಮೇಲುಕೀಳು, ಜಾತಿಪ್ರಜ್ಞೆ ನಾಶವಾಗಬೇಕೆಂದರು..
ಮನುಷ್ಯನನ್ನು ಮನುಷ್ಯನನ್ನಾಗಷ್ಟೇ ಕಂಡು ಶ್ರೇಷ್ಠರಾದರು..
ಮಾನವೀಯತೆ, ಮಮಕಾರಗಳನ್ನು ಮನಸ್ಸಿನಲ್ಲಿ ತುಂಬಿಕೊಂಡರು..

ಮೂರ್ತಿಪೂಜೆ ವಿರೊದ್ದಿಸಿದ್ದರು ಬ್ರಾಹ್ಮಣ್ಯವನ್ನು ಧಿಕ್ಕರಿಸಿದರು..
ಬ್ರಾಹ್ಮಣ ವಿಧವೆಯರಿಗೆ ಆಶ್ರಯ ನಿಡಿದರು..
ಬಾಲ್ಯವಿವಾಹಕ್ಕೆ ಪೂರ್ಣವಿರಾಮ, ಸರಳವಿವಾಹಕ್ಕೆ ಸೈಯೆಂದರು..
‘ಸತ್ಯಶೋಧಕ ಸಮಾಜ’ ಹುಟ್ಟು ಹಾಕಿದರು..

ಜ್ಯೋತಿಬಾರವರ ಕೊನೆ ಆಸೆಗಳನ್ನು ಪೂರೈಸಿಯದರು..
ಜ್ಞಾನವನ್ನು ಆಭರಣವಾಗಿಸಿಕೊಂಡು, ದೌರ್ಬಲ್ಯಗಳನ್ನು ಮೆಟ್ಟಿನಿಂತರು..
ಪ್ರಾಮಾಣಿಕತೆಯನ್ನು ಎತ್ತಿಹಿಡಿದು, ಆದರ್ಶಕ್ಕೆ ಮಾದರಿಯಾದರು..
ನಿರಾಭರಣ ಸುಂದರಿ, ಸಾವಿಲ್ಲದ ಸಾವಿತ್ರಿಬಾಯಿಯವರು.

ಡಾ. ಕವಿತಾ ಹ್ಯಾಟಿ
ವೈದ್ಯರು, ಕೊಪ್ಪಳ

Leave a Reply

Your email address will not be published. Required fields are marked *

error: Content is protected !!