FB_IMG_1731378414855

ರಾಜ್ಯ ಸರ್ಕಾರಿ ನೌಕರರ ಚುನಾವಣೆ
ಹಾಲಿ ಅಧ್ಯಕ್ಷ ಜುಮ್ಮನ್ನವರ ಸೇರಿ 44 ಜನ ಅವಿರೋಧ ಆಯ್ಕೆ

ಕರುನಾಡ ಬೆಳಗು‌ ಸುದ್ದಿ

ಕೊಪ್ಪಳ, 11- ತೀವ್ರ ಕುತೂಹಲ ಕೆರಳಿಸಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಕಾರ್ಯಕಾರಣಿ 65 ಸ್ಥಾನಗಳಿಗೆ ಜರುಗುತ್ತಿರುವ ಚುನಾವಣೆ ಬಿರುಸಿನಿಂದ ಜರುಗುತ್ತಿದೆ.
ಅವರಿರೋದ ಆಯ್ಕೆ ; ಚುನಾವಣೆಯಲ್ಲಿ ಕಾರ್ಯಕಾರಿ ಸಮಿತಿಯ ಚುನಾವಣೆಯಲ್ಲಿ ಸಂಘದ ಹಾಲಿ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ ಸೇರಿದಂತೆ ಒಟ್ಟು 44 ಜನ ನೌಕರರು ಅವಿರೋಧವಾಗಿ ಆಯ್ಕೆಯಾಗಿದ್ದು ಉಳಿದ ಸ್ಥಾನಗಳಿಗೆ ಚುನಾವಣೆ ಜರುಗಲಿದೆ.

ಅವಿರೋಧ ಆಯ್ಕೆಯಾದವರು: ಸಹದೇವ ಯರಗೊಪ್ಪ (ಕೃಷಿ ಇಲಾಖೆ), ಶಿವಪುತ್ರಪ್ಪ ವಟಗಲ್‌, ಮುಹಮ್ಮದ್‌ ಆಸೀಫ್‌ ಅಲಿ, ಮಹಾವೀರ ಕುಮಾರ (ಕಂದಾಯ), ಮಹಮ್ಮದ್‌ ರಫಿ, ಪಿ.ಎಸ್‌. ಅಮರದೀಪ (ಆಹಾರ ನಾಗರಿಕರ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ), ಮಂಜುನಾಥ ಎನ್‌. (ಆರ್ಥಿಕ ಮತ್ತು ಸಾಂಖ್ಯಿಕ), ಶಿವಾನಂದ, ಹುಸೇನಸಾಬ (ವಾಣಿಜ್ಯ ತೆರಿಗೆ), ಅನಿಲ ಕುಮಾರ (ಸಹಕಾರ), ಖಾಜಾ ಹುಸೇನ್ (ಲೋಕೋಪಯೋಗಿ), ಬಿ. ಶಿವರಾಜ (ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಹಾಗೂ ಗ್ರಾಮೀಣ ಕುಡಿಯುವ ನೀರು, ನೈರ್ಮಲೀಕರಣ),
ಜಯತೀರ್ಥ ದೇಸಾಯಿ (ಜಲಸಂಪನ್ಮೂಲ), ಗೋಪಾಲಕೃಷ್ಣ ಮುಂಡರಗಿ (ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ), ಆರ್‌.ಎಚ್‌. ನದಾಫ್‌, ದೊಡ್ಡನಗೌಡ ಪೊಲೀಸ್‌ ಪಾಟೀಲ (ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್‌), ಹುಸೇನ ಬಾಷಾ (ಅಬಕಾರಿ), ವಿಜಯಲಕ್ಷ್ಮಿ (ಸಮಾಜ ಕಲ್ಯಾಣ), ಶ್ರೀನಿವಾಸ ಕುಲಕರ್ಣಿ (ಮೀನುಗಾರಿಕೆ), ಶಂಶುನ್ನಿಸಾ (ಅರಣ್ಯ).

ನಾಗರಾಜ ಆರ್‌. ಜುಮ್ಮನ್ನವರ, ಸರೋಜಾಬಾಯಿ, ಸಂಜೀವಕುಮಾರ, ಸುನೀಲ ಮಳಗಿ, ಕಾಶಪ್ಪ ಹಳ್ಳಿ, ನೂತನ ದಿವಾಟೆ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ), ಪ್ರಕಾಶ, ಶ್ವೇತಾ ಕಟ್ಟಿಮನಿ (ವೈದ್ಯಕೀಯ ಶಿಕ್ಷಣ ಮತ್ತು ಜಿಲ್ಲಾಸ್ಪತ್ರೆ), ಡಾ. ಕವಿತಾ ಎಚ್‌.ಎಫ್‌. (ಆಯುಷ್‌), ಸುರೇಶ ಮೋರಗೇರಿ (ಔಷಧ ನಿಯಂತ್ರಣ ಮತ್ತು ಸರ್ಕಾರಿ ಕಾರ್ಮಿಕ ವಿಮಾ ಇಲಾಖೆ, ಕೆಎಸ್‌ಎಂಸಿಎಲ್‌), ಕೃಷ್ಣ ಸಿ. ಉಕ್ಕುಂದ (ತೋಟಗಾರಿಕೆ), ಪ್ರಕಾಶ ಎಸ್‌. ಬಿಸೆರೊಟ್ಟಿ (ಕೈಗಾರಿಕೆಗಳು, ವಾಣಿಜ್ಯ, ಕಾರ್ಮಿಕ, ಕಾರ್ಖಾನೆಗಳು ಮತ್ತು ಬಾಯ್ಲರಗಳ ವಿದ್ಯುತ್‌ ಪರಿವೀಕ್ಷಕರ ಇಲಾಖೆ), ಅರುಣಾ ಭೋಗಿ (ವಾರ್ತಾ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಕ್ರೀಡಾ ಇಲಾಖೆ), ಸಿದ್ದಪ್ಪ ವೀರಪ್ಪ ಮೇಳಿ (ಸರ್ಕಾರಿ ಪಿಯು ಕಾಲೇಜುಗಳು ಹಾಗೂ ಆಡಳಿತ ಕಚೇರಿಗಳು).

ಕಮ್ಮಾರ ಮಲ್ಲಿಕಾರ್ಜುನಪ್ಪ (ಗಣಿ ಮತ್ತು ಭೂವಿಜ್ಞಾನ), ವೀರಭದ್ರಪ್ಪ (ಮುದ್ರಾಂಕಗಳ ನೋಂದಣಿ ಮತ್ತು ಸಣ್ಣ ಉಳಿತಾಯ), ಮೃತ್ಯುಂಜಯ ಹೊಣಕೇರಿ (ಸಾರಿಗೆ), ವಿವೇಕಾನಂದ ಎಸ್‌. ಕುರಿ (ಪೊಲೀಸ್‌, ಗೃಹ ರಕ್ಷಕ, ಅಗ್ನಿಶಾಮಕ ಇಲಾಖೆಗಳ ಸಿಬ್ಬಂದಿ), ರಾಜಶೇಖರ ಎಸ್‌. ಅವಟಿ (ರೇಷ್ಮೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ), ಶರಣಯ್ಯ (ಭೂ ಮಾಪನ, ಕಂದಾಯ ವ್ಯವಸ್ಥೆ ಹಾಗೂ ಭೂ ದಾಖಲೆ), ಸುರೇಶ (ಖಜಾನೆ), ಮಾಧವಿ ಬಿ. (ನಗರ/ಗ್ರಾಮಾಂತರ ಯೋಜನಾ ಮತ್ತು ನಗರಾಭಿವೃದ್ಧಿ ಇಲಾಖೆ), ಗವಿಶಂಕರ ಕೆ. (ಉದ್ಯೋಗ ಮತ್ತು ತರಬೇತಿ, ಕೌಶಲಾಭಿವೃದ್ಧಿ) ಮತ್ತು ಕೃಷ್ಣಮೂರ್ತಿ ದೇಸಾಯಿ (ಧಾರ್ಮಿಕ ದತ್ತಿ, ಕಾನೂನು ಮಾಪನ ಹಾಗೂ ಜಿಲ್ಲಾ ತರಬೇತಿ ಕೇಂದ್ರ)‌ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಳಿದ 21 ಸ್ಥಾನಗಳಿಗೆ ಇದೇ ನ, 16ರಂದು ಚುನಾವಣೆ ಜರುಗಲಿದೆ.

 

Leave a Reply

Your email address will not be published. Required fields are marked *

error: Content is protected !!