6

ಸರಕಾರಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ ಪಾಲಕರ ಸಭೆ

ಕರುನಾಡ ಬೆಳಗು ಸುದ್ದಿ

ಕುಕನೂರು, 12- ಜಿಲ್ಲಾ ಪಂಚಾಯಿತಿ ಕೊಪ್ಪಳ, ತಾಲ್ಲೂಕು ಪಂಚಾಯಿತಿ ಕುಕನೂರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕೊಪ್ಪಳ ಹಾಗೂ ಕುಕನೂರ ಸರ್ಕಾರಿ ಪ್ರೌಢಶಾಲೆಯ ಸಯುಕ್ತ ಆಶ್ರಯದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ ಪಾಲಕರ ಸಭೆ ಹಮ್ಮಿಕೊಳ್ಳಲಾಗಿತ್ತು.

ಸಭೆ ಉದ್ದೇಶಿಸಿ ಶಾಲಾ ಮುಖ್ಯೋಪಾದ್ಯಾಯ ಮುತ್ತಣ್ಣ ಎ ಎಚ್ ಮಾತನಾಡಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ೨೦೨೫ರ ಪರೀಕ್ಷೆ-೧ಕ್ಕೆ ನೋಂದಣಿ ಅರ್ಜಿಗೆ ಪರಿಶೀಲೆನೆಗಾಗಿ ಪಾಲಕರ ಸಭೆ ಕರೆಯಲಾಗಿದೆ. ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿಯಮದಂತೆ ಶೇ.೭೫ರಷ್ಟು ಹಾಜರಾತಿ ಕಡ್ಡಾಯ ಮಾನ್ಯ ಸಿಇಓ ಜಿ.ಪಂ.ಕೊಪ್ಪಳ ಇವರು ನೀಡಿರುವ ೨೦ ಅಂಶಗಳ ಕಾರ್ಯಕ್ರಮದ ಅನುಷ್ಠಾನ.

ಎಸ್‌ಎಸ್‌ಎಲ್‌ಸಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಮಾಹಿತಿ, ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ಹಾಕಿಕೊಂಡ ಕ್ರಿಯಾಯೋಜನೆ, 5.FA- 1 , FA-2 ರ ವಿಷಯವಾರು ಫಲಿತಾಂಶ ಹಾಗೂ ಫಲಿತಾಂಶ ವಿಶ್ಲೇಷಣೆ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ A B C D ಮಕ್ಕಳ ಪಟ್ಟಿ,

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ನಾವಿನ್ಯಯುತ ಕಾರ್ಯಕ್ರಮಗಳು. (Innovative activities).

ದಿನಕ್ಕೊಂದು ಪ್ರಶ್ನೆ ವಾರಕ್ಕೊಂದು ಪರೀಕ್ಷೆ, ಪ್ರಾರ್ಥನಾ ಅವಧಿಯಲ್ಲಿ ಒಂದೊAದು ಪ್ರಶ್ನೋತ್ತರ ಹೇಳಿಸುವುದು, ವಾರಕ್ಕೊಂದು ರಸಪ್ರಶ್ನೆ, ದಸರಾ ರಜೆಯಲ್ಲಿ ಪ್ರತಿ ವಿಷಯದಲ್ಲಿ ೧೫ ಪ್ರಶ್ನೆಗಳನ್ನು ಮನೆ ಗೆಲಸ ನೀಡುವುದು, ಮೊಬೈಲ್ ಬಳಕೆ ಕಡಿಮೆ ಮಾಡಿ ಹೆಚ್ಚು ಅಭ್ಯಾಸ ಮಾಡುವುದು, ವಿದ್ಯಾರ್ಥಿಗಳು ಮನೆಯಲ್ಲಿ ಓದುವ ವೇಳಾಪಟ್ಟಿ ವೈಯಕ್ತಿಕವಾಗಿ ತಯಾರಿಸಿ ಅದರಂತೆ ಅಭ್ಯಾಸ ಮಾಡುವುದು, ಪ್ರತಿದಿನ ಬೆಳಿಗ್ಗೆ ವಿಶೇಷ ತರಗತಿ ಹಾಗೂ ಸಾಯಂಕಾಲ ಗುಂಪು ಅಧ್ಯಯನ ನಡೆಸುವುದು, ಮಕ್ಕಳನ್ನು ದತ್ತು ನೀಡುವುದು, ಪ್ರತಿದಿನ ಬೆಳಿಗ್ಗೆ WAKE UP CALL ಮಾಡುವುದು, ಗೈರು ಹಾಜರಾಗುವ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಮನೆ ಭೇಟಿ ಮಾಡುವುದು, ಪ್ರತಿ ೧೫ ದಿನಕ್ಕೊಮ್ಮೆ ಪಾಲಕರ ಸಭೆ ನಡೆಸಲಾಗುವುದು ಇನ್ನೂ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲಾಗುವುದು.

ಮಕ್ಕಳ ಫಲಿತಾಂಶ ಸುಧಾರಣೆಗಾಗಿ ಎಲ್ಲಾ ಪಾಲಕರು ಸಹಕಾರ ನೀಡಲು ಒಮ್ಮತದ ಅಭಿಪ್ರಾಯ ನೀಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳ ಪಾಲಕರು, ಶಾಲಾ ಶಿಕ್ಷಕರು, ಹಾಗೂ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!