IMG-20240228-WA0040

ರಾಷ್ಟ್ರೀಯ ಪಲ್ಸ್ ಪೋಲಿಯೋ ದಿನಾಚರಣೆ ಸಭೆ 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿ ತಹಶೀಲ್ದಾರ್ ಶಂಶೇ ಆಲಂ

ಕರುನಾಡ ಬೆಳಗು ಸುದ್ದಿ 

 

ಸಿರುಗುಪ್ಪ,28- ಕರ್ನಾಟಕ ಸರ್ಕಾರ ತಾಲೂಕ ಆಡಳಿತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತಾಹಸಿಲ್ದಾರ್ ಕಚೇರಿಯಲ್ಲಿ ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿ ತಹಸಿಲ್ದಾರ್ ಶಂಶೇ ಆಲಂ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಮಾರ್ಚ್ 3ರಿಂದ ಮಾರ್ಚ್ 6ರವರೆಗೆ ನಡೆಯುವ ಕಾರ್ಯಕ್ರಮದ ಎರಡನೇ ಸುತ್ತಿನ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ತಾಲೂಕ ಆರೋಗ್ಯ ವೈದ್ಯಾಧಿಕಾರಿ ಡಾ ಈರಣ್ಣ ಅವರು ಮಾತನಾಡಿ 5 ವರ್ಷದ ಮಕ್ಕಳಿಗೆ ಹಿಂದೆ ಎಷ್ಟೋ ಬಾರಿ ಪೋಲಿಯೋ ಲಸಿಕೆ ಹಾಕಿಸಿದರೂ 3ನೇ ಮಾರ್ಚ್ ರಂದು ಎರಡು ಹನಿ ಪೋಲಿಯೋ ಲಸಿಕೆ ಹಾಕಿಸುವಂತೆ ತಿಳಿಸಿದರು.

 

ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಇಲಾಖೆಯಿಂದ ಅಂಗನವಾಡಿಗಳಲ್ಲಿ ಬೂತ್ ನಡೆಸಲು ಅಂಗನವಾಡಿ ಕಾರ್ಯಕರ್ತೆಯರು ತಂಡದಲ್ಲಿ ಭಾಗವಹಿಸಿ ಎಲ್ಲಾ 0ದಿಂದ 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಲು ಸೂಚಿಸುವುದು ಅಂಗನವಾಡಿಗಳಲ್ಲಿ ಬೂತ್ ನಡೆಸಲು ಅನುವು ಮಾಡಿಕೊಡುವುದು ಅದೇ ರೀತಿ ಶಿಕ್ಷಣ ಇಲಾಖೆಯಿಂದ ಶಾಲಾ ಮಕ್ಕಳಿಂದ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳುವುದು ಆಯ್ದ ಶಾಲೆಗಳಲ್ಲಿ ಲಸಿಕೆ ಬೂತ್ ಗಳನ್ನು ತೆರೆಯುವದು ಶಿಕ್ಷಕರು ಶಾಲೆಯ ಮಕ್ಕಳಿಂದ ಲಸಿಕೆ ಹಾಕಿಸಿಕೊಳ್ಳುವ ಮಕ್ಕಳನ್ನು ಬೂತ್ ಗಳಿಗೆ ಕರೆ ತರಲು ಸೂಚಿಸಲು ತಿಳಿಸಿದರು.

ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪವನ್ ಕುಮಾರ್ ಎಸ್ ದಂಡಪ್ಪನವರ್ ಎಲ್ಲ ಗ್ರಾಮ ಪಂಚಾಯತ್ ಗಳಲ್ಲಿ ಗ್ರಾಮಗಳಲ್ಲಿ ಲಸಿಕೆ ಹಾಕುವುದರ ಬಗ್ಗೆ ಟಾಂಮ್ ಟಾಂಮ್ ಹಾಕಿಸುವುದು ಸಾರ್ವಜನಿಕರಿಗೆ ಪಲ್ಸ್ ಪೋಲಿಯೋ ಹೊಸ ವಿಲೇವಾರಿ ವಾಹನದಲ್ಲಿ ಜಿಂಗಲ್ಸ್ ಹಾಕುವುದರ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳುವುದು ಕಾರ್ಯಕ್ರಮದಲ್ಲಿ ಭಾಗವಹಿಸಿದ ಸದಸ್ಯರಿಗೆ ಊಟದ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು.

ಪೌರಾಯುಕ್ತರು ನಗರಸಭೆ ಹಾಗೂ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪ್ರದೇಶದಲ್ಲಿ ಕಸ ವಿಲೇವಾರಿ ವಾಹನದ ಮೂಲಕ ಜಿಂಗಲ್ಸ್ ಹಾಕುವುದು ವ್ಯಾಪಕ ಪ್ರಚಾರ ಕೈಗೊಳ್ಳುವುದು ವಿವಿಧ ಇಲಾಖೆ ವಾಹನ ಚಾಲಕರೊಂದಿಗೆ ವಾಹನಗಳನ್ನು ಬೂತ್ ಗಳಿಗೆ ವ್ಯಾಕ್ಸಿನ್ ತಲುಪಿಸಲು ಮೇಲ್ವಿಚಾರಣೆ ನಡೆಸಲು ವಾಹನ ನೀಡಲು ಕೋರಲಾಯಿತು.

ಸಿರುಗುಪ್ಪ ತಾಲೂಕಿನಲ್ಲಿ308868 ಜನಸಂಖ್ಯೆ ಹೊಂದಿದ್ದು58248 ಮನೆಗಳಿದ್ದು 36,326 ಹುಟ್ಟಿನಿಂದ 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಲು ಗುರಿ ಹೊಂದಲಾಗಿದೆ ಸಿರುಗುಪ್ಪ ತಾಲೂಕಿನಾದ್ಯಂತ 176 ಬೂತ್ ಗಳನ್ನು ರಚಿಸಿ ಮನೆಮನೆ ಭೇಟಿ ನೀಡಲು 167 ತಂಡಗಳನ್ನು ರಚಿಸಲಾಗಿದೆ ಡಾ ಈರಣ್ಣ ಅವರು ವಿವರಿಸಿ ಹೇಳಿದರು ಎಲ್ಲಾ ಇಲಾಖೆಯ ಮುಖ್ಯಸ್ಥರ ಸಹಾಯ ಕೋರಿ ಪೋಲಿಯೋ ಪಿಡುಗು ಬಾರದಂತೆ ಪಣ ತೋಡೋಣ ಎಂದರು ಉಪಾ ತಹಸಿಲ್ದಾರ್ ಸಿದ್ದಾರ್ಥ ಕಾರಂಜಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಸದಸ್ಯರು ರಾಷ್ಟ್ರೀಯ ಸಾಕ್ಷರತಾ ಅಬ್ದುಲ್ ನಬಿ ತಾಲೂಕ ಪಂಚಾಯತ್ ಅಧಿಕಾರಿಗಳು ಕೋರಿ ಸುಜಾತ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಸಂಯೋಜಕ ಬಸವರಾಜ ಸ್ವಾಮಿ ವಿವಿಧ ಇಲಾಖೆಯ ಅಧಿಕಾರಿಗಳು ಆರೋಗ್ಯ ಸಿಬ್ಬಂದಿ ವರ್ಗದವರು ತಾಲೂಕ್ ಕಚೇರಿಯ ಸಿಬ್ಬಂದಿ ವರ್ಗದವರು ಇದ್ದರು.

Leave a Reply

Your email address will not be published. Required fields are marked *

error: Content is protected !!