IMG-20240207-WA0027

ಸಚಿವ ಎಚ್ ಸಿ ಮಹದೇವಪ್ಪ ಕೇಂದ್ರಕ್ಕೆ ಕಳುಹಿಸಲು ಆಕ್ಷೇಪ ಸಿಎಂ, ಡಿಸಿಎಂ ಮನೆ ಮುಂದೆ ಪ್ರತಿಭಟನೆ : ಸೋಮಶೇಖರ್ ಬಣ್ಣದ ಮನೆ

ಕರುನಾಡ ಬೆಳಗು ಸುದ್ದಿ 

ವಿಜಯನಗರ,7- ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಅವರ ಸಚಿವ ಸಂಪುಟದಿಂದ ಕೈಬಿಟ್ಟು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರ ಒತ್ತಡ ಹೇರುತ್ತಿದೆ. ಇದನ್ನು ದಲಿತ ಸಮುದಾಯವು ಖಂಡಿಸುತ್ತಾ. ಈ ನಿಲುವುಬಿಡದೇ ಹೋದರೆ ರಾಜ್ಯದ ಎಲ್ಲಾ ದಲಿತ ಸಮುದಾಯದ ನಿಯೋಗದೊಂದಿಗೆ ಸಿಎಂ, ಡಿಸಿಎಂ ಮನೆ ಮುಂದೆ ಧರಣಿ ಕೂರಲು, ಧರಣಿ ಕೂರುವ ದಿನಾಂಕವನ್ನು ಮೂರು ದಿನಗಳಲ್ಲಿ ತಿಳಿಸುವ ಸಮಾಜದ ಮುಖಂಡ ಸೋಮಶೇಖರ್ ಬಣ್ಣದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ನಗರದ ಕರ್ನಾಟಕ ಪತ್ರಕರ್ತರ ಸಂಘದ ಪತ್ರಿಕಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಚ್ ಸಿ ಮಹದೇವಪ್ಪನವರು ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಖಾತೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಎಸ್‌ಎಸ್‌ಸಿ ಎಸ್‌ಟಿ ಗುತ್ತಿಗೆದಾರರಿಗೆ ಸರ್ಕಾರದಿಂದ ಆರ್ಥಿಕವಾಗಿ ಅನುಕೂಲವಾಗಲು ಟೆಂಡರ್‌ಗಳನ್ನು ಐವತ್ತು ಸಾವಿರದಿಂದ ಪ್ರಾರಂಭಿಸಲು ಒಂದು ಕೋಟಿ ವರೆಗೆ ಹೆಚ್ಚಿಸಲಾಗಿದೆ ಮತ್ತು ಕಾಮಗಾರಿಯನ್ನು ಮುಂದುವರಿಸಲು ಬ್ಯಾಂಕ್‌ನಿಂದ ಲೋನ್‌ಗಳನ್ನು ಒದಗಿಸಿಕೊಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಇಂತಹ ಕೆಲಸ ಮಾಡುವವರನ್ನ ಮತ್ತು ಸಂವಿಧಾನದ ಆಶಯಗಳಿಗೆ ಬೆಲೆ ಕೊಟ್ಟು ಸಂವಿಧಾನ ಪೀಠಿಕೆಯನ್ನು, ಸಂವಿಧಾನದ ಉದ್ದೇಶಗಳನ್ನು ಪ್ರತಿ ಮನೆ ಮನೆಗೂ ರಾಜ್ಯಾದ್ಯಂತ ತಲುಪಿಸಲಾಗುತ್ತಿದೆ. ಇವರನ್ನು ಮತ್ತು ಸಂವಿಧಾನದ ಪರವಾಗಿ ಕೆಲಸ ಮಾಡುತ್ತಿರುವುದನ್ನು ಮತ್ತು ರಾಜ್ಯದಲ್ಲಿ ಕೆಳ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅಂತಹವರಿಗೆ ಧ್ವನಿಯಾಗಿ ನಿಂತಿರುವುದನ್ನು ಸಹಿಸದ ಕೆಲವು ಕಾಂಗ್ರೆಸ್ಸಿಗರು, ಇವರನ್ನು ಕೇಂದ್ರಕ್ಕೆ ಕಳುಹಿಸಿ ಅಧಿಕಾರ ವಂಚಿತ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ರಾಜ್ಯದ್ಯಂತ ದಲಿತ ಸಮುದಾಯದ ವಿರುದ್ಧ ಆಕ್ಷೇಪಣೆಗಳು ಕಂಡುಬಂದಿವೆ. ಕಾಂಗ್ರೆಸ್ ಮುಖಂಡರ ಈ ನಡೆಯನ್ನು ಇಲ್ಲಿ ಕೈಬಿಡಬೇಕು. ಒಂದು ವೇಳೆ ಅವರನ್ನು ಕಳಿಸುವ ಪ್ರಯತ್ನದಲ್ಲಿ ರಾಜ್ಯದಲ್ಲಿರುವ ದಲಿತರು ಮತ್ತು ಇತರ ವರ್ಗದವರು ಸೇರಿ ಫ್ರೀಡಂ ಮಾಡಿ ಧರಣಿ ಕೂರುವ ವೇಳೆ ಕೇಂದ್ರದಲ್ಲಿ ಧರಣಿ ಕೂರಲಿದ್ದಾರೆ ಎಂದು ಎಚ್ಚರಿಸಿದರು.

ಮಲ್ಲಿಕಾರ್ಜುನ ಖರ್ಗೆಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಸಂಧರ್ಭದಲ್ಲಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತಪ್ಪಿಸುವುದಕ್ಕಾಗಿ ಅವರನ್ನು ಲೋಕಸಭಾ ಚುನಾವಣೆಗೆ ಆಯ್ಕೆ ಮಾಡಿಕೊಳ್ಳಿ ಎಂದು ಹೇಳಿ ಅವರನ್ನು ರಾಜ್ಯದಿಂದ ಹೊರಗಿಡುವಂತೆ ಮಾಡಲು ಆಪಾದನೆ ಪಕ್ಷದ ಮೇಲೆ ಇತ್ತು. ರಾಜ್ಯ ರಾಜಕಾರಣದಿಂದ ಹೊರಹಾಕುವ ರಾಜಕೀಯ ಪಿತೂರಿ ನಡೆಯುತ್ತಿರುವುದು , ಮಹದೇವಪ್ಪ ಅವರು ಸಚಿವ ಸಂಪುಟದಿಂದ ಕೈಬಿಟ್ಟು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಆದರೆ ಕಾಂಗ್ರೆಸ್ ಪಕ್ಷವು ರಾಜ್ಯದ 28 ಕ್ಷೇತ್ರಗಳಲ್ಲಿ ದಲಿತ ಮತಗಳ ಛಾಯಾಗ್ರಹಣ ಪಕ್ಷಕ್ಕೆ ನಷ್ಟ ಅನುಭವಿಸುವ ಸಂಭವವಿದೆ. ಈ ಕುತಂತ್ರದ ವಿರುದ್ಧ ರಾಜ್ಯದ ಎಲ್ಲಾ ದಲಿತರು ಬೀದಿಗಿಳಿದು ಹೋರಾಟ ನಡೆಸುತ್ತಾರೆ ಎಂದು ಎಚ್ಚರಿಕೆ ನೀಡಲಾಗಿದೆ.

ಸುದ್ದಿಗೋಷ್ಟಿಯಲ್ಲಿ ಅಲೆಮಾರಿ ಸಮುದಾಯದ ಮುಖಂಡ ಸಣ್ಣ ಮಾರೆಪ್ಪ, ಜಿಲ್ಲಾಧ್ಯಕ್ಷ ವಾಸುದೇವ, ಜಯಣ್ಣ, ಯರಿಸ್ವಾಮಿ, ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!