WhatsApp Image 2024-07-04 at 5.04.37 PM

5ರಂದು ಹಕ್ಕು ಪತ್ರ ವಿತರಣೆಗೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ

ಕರುನಾಡ ಬೆಳಗು ಸುದ್ದಿ

ವಿಜಯನಗರ, 4- ಇಂದು ನಗರದ ಹೊರ ಹೊಲಯದಲ್ಲಿರುವ ಜಂಬುನಾಥಹಳ್ಳಿಯಲ್ಲಿ ಅರಣ್ಯ ಉಪಭಾಗ ವಿಜಯನಗರ, ಹೊಸಪೇಟೆ ಉಪ ವಿಭಾಗ ಪ್ರಾದೇಶಿಕ ಅರಣ್ಯ ವಲಯ ಹೊಸಪೇಟೆ ಇವರು ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಎಚ್.ಆರ್ ಗವಿ ಯಪ್ಪನವರು ಭಾಗಿಯಾಗಿದ್ದರು.

ನಂತರ ಕ್ಯಾಂಪ್ ಗೆ ಭೇಟಿ ನೀಡಿ ಇಲ್ಲಿನ ಕಾದಿಟ್ಟ ಅರಣ್ಯ ಪ್ರದೇಶಗದಲ್ಲಿ ವಾಸವಿರುವ ಕುಟುಂಬಗಳಿಗೆ 1.35 ಎಕರೆಯಲ್ಲಿ 51 ಜನ ಮತ್ತು ಕೆ.ಎಂ.ಎಂ. ಐ ಕ್ಯಾಂಪ್- ಕಾದಿಟ್ಟ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದ ಕುಟುಂಬಗಳಿಗೆ ನಿವೇಶನಕ್ಕಾಗಿ ಕಾಯ್ದಿರಿಸಲಾದ 3.5 ಎಕರೆ ಜಾಗದಲ್ಲಿ 97ಜನ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ನಾಳೆ ಬೆಳಿಗ್ಗೆ 10:00ಗೆ ನಡೆಯಲಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲೆಯ ಯೋಜನಾ ನಿರ್ದೇಶಕರು ಹಾಗೂ ಹೊಸಪೇಟೆ ನಗರ ಸಭೆಯ ಮೇಲುಸ್ತುವಾರಿ ಮನೋಹರ್ , ಅರಣ್ಯ ಅಧಿಕಾರಿಗಳು ಮತ್ತು ಎನ್ ಜಿ ಓ ಸದಸ್ಯರು ಹಾಗೂ ಸ್ಥಳೀಯರು ಇದ್ದರು.

Leave a Reply

Your email address will not be published. Required fields are marked *

error: Content is protected !!