WhatsApp Image 2024-02-09 at 6.34.02 PM

8, 9,10ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಶಿಬಿರಕ್ಕೆ ಕವಿತಾ ಈಶ್ವರ್ ಸಿಂಗ್ ಚಾಲನೆ

ಕರುನಅಡ ಬೆಳಗು ಸುದ್ದಿ

ವಿಜಯನಗರ,9- ಗ್ರಾಮೀಣ ಭಾಗದ ವಿದ್ಯಾರ್ಥಿ ಗಳಿಗೆ ಮುಂದಿನ ದಿನಗಳಲ್ಲಿ ಅರಂಭವಾಗುವ ಪರೀಕ್ಷೆ ಗಳನ್ನು ಗಮನದಲ್ಲಿಟ್ಟುಕೊಂಡು .ತಾಯಮ್ಮ ಶಕ್ತಿ ಸಂಸ್ಥೆ ಕಾಕುಬಾಳಿನ ಗ್ರಾಮ ಹಾಗು ಅಲ್ಲಿನ ಸುತ್ತ ಮುತ್ತ ಇರುವ ಹಳ್ಳಿಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪ್ರಾಮುಖ್ಯತೆ ನೀಡಲು ಪುನಿತ ರಾಜಕುಮಾರ್ ಸ್ಮರಣಾರ್ಥವಾಗಿ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸಿಸುತ್ತಿರುವ 8, 9,10ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಶಿಬಿರಕ್ಕೆ ಕವಿತಾ ಈಶ್ವರ್ ಸಿಂಗ್ ಚಾಲನೆ ನೀಡಿದರು .

ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಾಲೆಯ ಪ್ರಾಚಾರ್ಯ ಟಿ.ಅರ್.ರಾಮಚಂದ್ರ ಕವಿತಾ ಸಿಂಗ್ ಸಮಾಜದ ಎಲ್ಲ ವರ್ಗಗಳ ಜೊತೆ ಸೇರಿ ವಿವಿದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಗ್ರಾಮಗಳಿಗೆ ಬರುವಿಕೆಯು ಮಳೆಯ ಮುನ್ಸೂಚನೆ ಗೆ ಬರುವ ” ಕಾಮನ ಬಿಲ್ಲಿನ” ನಂತೆ ಏಳು ಬಣ್ಣಗಳಲ್ಲಿ ಕಂಗೊಳಿಸುವರು. ಇವರಿಂದ ವಿದ್ಯಾರ್ಥಿಗಳಲ್ಲಿ ಹೊಸಾ ಉತ್ಸಾಹ ಬಂದಿದ್ದು , ಮುಂದೆಯೂ ಈ ಸೇವೆ ಮುಂದುವರಿಸಲಿ ಎಂದರು ಕಾಕುಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾಳಮ್ಮ ಮಾತನಾಡಿ ಒಬ್ಬ ಮಹಿಳೆ‌ ನಮ್ಮ‌ಹಳ್ಳಿಗಳ ಮಕ್ಕಳ ವಿದ್ಯಾಬ್ಯಾಸಕ್ಕೆ ಇಷ್ಟು ಆದ್ಯತೆ ನೀಡುತ್ತಾರೆ ಎಂದರೆ ಅವರ ನಿಸ್ವಾರ್ಥ ಸೇವೆ ಶ್ಲಾಘನೀಯ ಎಂದರು.

ಈ ಸಂಧರ್ಭದಲ್ಲಿ ತಾಯಮ್ಮ ಶಕ್ತಿ ಸಂಸ್ಥೆ ಸಂಸ್ಥಾಪಕಿ ಕವಿತಾ ಈಶ್ವರ್ ಸಿಂಗ್ , ನಿರ್ದೇಶಕಿ ಲಲಿತಾ, ಪುನೀತ್ ರಾಜಕುಮಾರ್ ಸಂಘದ ಅಧ್ಯಕ್ಷ ರಘು ನಾಯಕ, ಅಂಬರೀಷ್, ಮಂಜುನಾಥ ಹಾಗೂ ಕಾಕುಬಾಳಿನ ತಾಯಮ್ಮ ಶಕ್ತಿ ಸಂಘದ ಮಹಿಳಾ ಸದಸ್ಯರು ಭಾಗಿಯಾಗಿ ವಿಶೇಷ ವಿದ್ಯಾಭ್ಯಾಸ ತರಬೇತಿಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!