80ಸಾವಿರ ಹೆಕ್ಟರ್ ನಲ್ಲಿ ಕೃಷಿ ಭತ್ತದ ನಾಡಲ್ಲಿ ಬಿತ್ತನೆಗೆ ರೈತರು ಸಜ್ಜು
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 24- ತಾಲೂಕಿನಲ್ಲಿ ಉತ್ತಮ ಮುಂಗಾರು ಮಳೆ ನಿರೀಕ್ಷೆಯಲ್ಲಿರುವ ರೈತರು ಖುಷಿ ಯಲ್ಲಿದ್ದಾರೆ ನಿರಂತರ ಮೂರು ನಾಕು ದಿನ ಮಳೆ ಸುರಿದ ಹಿನ್ನೆಲೆಯಲ್ಲಿ ಕೃಷಿ ಭೂಮಿ ಹದಾ ಮಾಡುವಲ್ಲಿ ತಲ್ಲಿನರಾಗಿದ್ದಾರೆ.
ಜನವರಿಯಿಂದ ಮೇ ವರೆಗೆ 73.8 ಮಿಲಿಮೀಟರ್ ಮಳೆ ಬರಬೇಕಾಗಿದೆ ಆದರೆ ಕೇವಲ 13 ಮಿಲಿ ಮೀಟರ್ ಮಳೆಯಾಗಿದೆ ರೈತರು ಕೃಷಿ ಚಟುವಟಿಕೆ ಆರಂಭಿಸಿರಲಿಲ್ಲ ಮೂರು ನಾಕು ದಿನಗಳಿಂದ ಮಳೆ ಸುರಿದ ಕಾರಣ ಜಮೀನು ಸ್ವಚ್ಚಗೊಳಿಸಲು ಮುಂದಾಗಿದ್ದಾರೆ ರೈತರಿಗೆ ಬೇಕಾದ ರಸಗೊಬ್ಬರ ಬಿತ್ತನೆ ಬೀಜ ಮುಂತಾದ ಕೃಷಿ ಪರಿಕರಗಳ ಸರಬರಾಜಿಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಳ್ಳಾರಿ ಡಾ ಕೆ ಎಂ ತಿರುಮಲೇಶ ರಸಗೊಬ್ಬರ ಬಿತ್ತನೆ ಬೀಜ ಹಾಗೂ ಕೃಷಿ ಪರಿಕರಗಳ ಮಾರಾಟಗಾರರ ಸಭೆ ನಡೆಸಲಾಗಿದೆ ರೈತರಿಗೆ ಎಂ ಆರ್ ಪಿ ಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದು ಮತ್ತು ರೈತರು ಖರೀದಿಸಿದ ಪ್ರತಿ ವಸ್ತುವಿಗೂ ತಪ್ಪದೇ ರಶೀದಿ ಕೊಡಬೇಕೆಂದು ಸೂಚನೆ ನೀಡಲಾಗಿದೆ.
ಸಿರುಗುಪ್ಪ ಸಹಾಯಕ ಕೃಷಿ ನಿರ್ದೇಶಕ ಎಸ್ ಬಿ ಪಾಟೀಲ್ ಅವರು ಈ ವರ್ಷ ಉತ್ತಮ ಮುಂಗಾರು ಮಳೆ ಯಾಗುವ ಬಗ್ಗೆ ಹವಾಮಾನ ತಜ್ಞರು ತಿಳಿಸಿದ್ದು ರೈತರಿಗೆ ಬೇಕಾದ ಬಿತ್ತನೆ ಬೀಜ ಮತ್ತು ರಸಗೊಬ್ಬರ ಕೊರತೆಯಾಗದಂತೆ ಕ್ರಮ ವಹಿಸಲಾಗುವುದು ಪ್ರಸ್ತುತ ರಸಗೊಬ್ಬರ ದಾಸ್ತಾನು ಇದ್ದು ಬಿತ್ತನೆ ಬೀಜ ಶೀಘ್ರ ಬರಲಿದೆ ಈಗಾಗಲೇ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಂದ ರಸ ಗೊಬ್ಬರ ಮತ್ತು ಬಿತ್ತನೆ ಬೀಜ ಮಾರಾಟಗಾರರ ಸಭೆ ಕರೆದು ಸೂಚನೆ ನೀಡಿದ್ದಾರೆ ಸಿರುಗುಪ್ಪ ತಾಲೂಕಿನಲ್ಲಿ ಒಟ್ಟು 1.04 ಲಕ್ಷ ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣ ವಿದ್ದು 80ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಕೃಷಿ ಮಾಡುತ್ತಿದ್ದಾರೆ 35 ಸಾವಿರ ಹೆಕ್ಟೇರ್ ಮಳೆಯಾಶ್ರಿತ ಪ್ರದೇಶವಿದ್ದರೆ 45ಸಾವಿರ ಹೆಕ್ಟೇರ್ ನೀರಾವರಿ ನದಿ ಕಾಲುವೆ ಹಳ್ಳ ಬೋರ್ವೆಲ್ ನೀರನ್ನು ನಂಬಿ ವಿವಿಧ ಬೆಳೆ ಬೆಳೆಯಲಾಗುತ್ತದೆ ಈ ಭಾಗದಲ್ಲಿ ಹೆಚ್ಚಾಗಿ ಭತ್ತ ಬೆಳೆಯಲಾಗುತ್ತದೆ.
ಉಳಿದಂತೆ ಹತ್ತಿ ಮೆಣಸಿನಕಾಯಿ ಜೋಳ ಸಜ್ಜೆ ನವಣೆ ಇತರ ಬೆಳೆಗಳನ್ನು ಬೆಳೆಯಲಾಗುತ್ತದೆ ಮೂರು ಕೃಷಿ ಯಂತ್ರಧಾರೆ ಬಂದ್: ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಸರ್ಕಾರ ರಿಯಾಯಿತಿ ದರದಲ್ಲಿ ಕೃಷಿ ಪರಿಕರಗಳನ್ನು ವಿತರಿಸಲು ಹೋಬಳಿಗೆ ಒಂದರಂತೆ ನಾಲ್ಕು ಕೃಷಿ ಯಂತ್ರಧಾರೆ ಕೇಂದ್ರಗಳನ್ನು ತೆರೆದಿತ್ತು ತೆಕ್ಕಲಕೋಟೆ ಹೋಬಳಿಯ ಮುದ್ದಟನೂರು ಸಿರುಗುಪ್ಪ ನಗರ ಕರೂರು ಹಾಗೂ ಹಚ್ಚೋಳ್ಳಿ ಗ್ರಾಮದಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಆರಂಭಿಸಲಾಗಿತ್ತು.
ಹಚ್ಚೋಳ್ಳಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಸಂಸ್ಥೆಯಿಂದ ನಡೆಸುತ್ತಿರುವ ಕೃಷಿ ಯಂತ್ರಧಾರೆ ಸೇವೆ ಮುಂದುವರೆದಿದೆ ಉಳಿದ ಮೂರು ಕಡೆ ಗುತ್ತಿಗೆ ಅವಧಿ ಮುಗಿದಿರುವುದರಿಂದ ಕೇಂದ್ರಗಳು ಮುಚ್ಚಿದ್ದು ರೈತರಿಗೆ ರಿಯಾಯಿತಿ ದರದಲ್ಲಿ ಕೃಷಿ ಪರಿಕರಗಳು ಸಿಗದಂತಾಗಿದೆ ನೆರೆಯ ಆಂಧ್ರಪ್ರದೇಶದಿಂದ ತೆಲಂಗಾಣದಿಂದ ಕಳಪೆ ಬೀಜಗಳು ಸಿರುಗುಪ್ಪ ತಾಲೂಕಿಗೆ ಪೂರೈಕೆ ಯಾಗುತ್ತಿವೆ ಎಂದು ರೈತರು ದೂರುತ್ತಾರೆ.
ಈ ಬಗ್ಗೆ ಈಗಾಗಲೇ ಅಂಗಡಿಗಳ ಮಾಲೀಕರಿಗೆ ಎಚ್ಚರಿಕೆಯನ್ನು ನೀಡಲಾಗಿದೆ ಆದರೂ ರೈತರಿಗೆ ಕಳಪೆ ಬಿತ್ತನೆ ಬೀಜಗಳನ್ನು ಖರೀದಿಸದಂತೆ ಮತ್ತು ಖರೀದಿಸಿದ ಬೀಜಕ್ಕೆ ಸಂಬಂಧಿಸಿದಂತೆ ರಶೀದಿ ಪಡೆಯುವಂತೆ ಕೃಷಿ ಸಂಜೀವಿನಿ ವಾಹನ ಮತ್ತು ರೈತ ಸಂಪರ್ಕ ಕೇಂದ್ರಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ರಿಯಾಯಿತಿ ದರದಲ್ಲಿ ಬೀಜ ವಿತರಣೆ ಸಿರುಗುಪ್ಪ ತಾಲೂಕಿನಲ್ಲಿ ಐದು ರೈತ ಸಂಪರ್ಕ ಕೇಂದ್ರಗಳಿವೆ ಅಗತ್ಯ ರಸಗೊಬ್ಬರ ದಾಸ್ತಾನು ಇದೆ ಬಿತ್ತನೆ ಬೀಜಗಳು ಬರಬೇಕಿದೆ ಸಾಮಾನ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ರಿಯಾಯಿತಿ ದರದಲ್ಲಿ ಬೀಜ ನೀಡಲಾಗುತ್ತಿದ್ದು ಭತ್ತದ ತಳಿಯ ಆಧಾರದ ಮೇಲೆ ರಿಯಾಯಿತಿ ವಿತರಿಸಲಾಗುತ್ತದೆ.
ಸೋನಾ ಮಸೂರಿ ಒಂದು ಕೆಜಿ 56.25 ರೂಪಾಯಿಗಳಿದ್ದು ಸಾಮಾನ್ಯ ವರ್ಗದ ಜನರಿಗೆ ಒಂದು ಕೆಜಿಗೆ ಎಂಟು ರೂಪಾಯಿ ರಿಯಾಯಿತಿ ನೀಡಿದರೆ ಎಸ್ ಸಿ ಎಸ್ ಟಿ ಅವರಿಗೆ 12 ರೂಪಾಯಿ ನೀಡಲಾಗುತ್ತದೆ ಅದೇ ರೀತಿ ತೊಗರಿ ಸಾಮಾನ್ಯರಿಗೆ 25 ರೂ ಎಸ್ ಸಿ ಎಸ್ ಟಿ ಗೆ 37 ರೂ ಸಜ್ಜೆ ಸಾಮಾನ್ಯ 15 ರೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ 22.5ರೂ ಮೆಕ್ಕೆಜೋಳ ಸಾಮಾನ್ಯ 20 ರೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ 30 ರೂ, ರಿಯಾಯಿತಿ ನೀಡಲಾಗುತ್ತದೆ.
