ಶಾಂತಿಯುತವಾಗಿ ಯುಗಾದಿ-ರಂಜಾನ ಹಬ್ಬ ಆಚರಿಸಿ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 7- ಶಾಂತಿಯುತವಾಗಿ ಯುಗಾದಿ-ರಂಜಾನ ಹಬ್ಬ ಆಚರಿಸಲು ಸರ್ವರೂ ಕೈ ಜೋಡಿಸಿ ಎಂದು ಪೋಲಿಸ ಉಪ ವಿಭಾಗಧಿಕಾರಿ ಸಿದ್ದಲಿಂಗಪ್ಪ ಗೌಡ ಮಾಲಿಪಾಟೀಲ ಹೇಳಿದರು.
ಅವರು -ನಗರದ ಪೋಲಿಸಠಾಣೆಯಲ್ಲಿ ರಂಜಾನಹಬ್ಬ ಹಾಗೂ ಯುಗಾದಿ ಹಬ್ಬದ ಶಾಂತಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿ ಈಗಾಗಲೇ ಪೋಲಿಸ ಇಲಾಖೆಯಿಂದ ಸೂಕ್ತ ಬಂದೋಬಸ್ತಗಾಗಿ ವ್ಯವಸ್ಥೇ ಮಾಡಲಾಗಿದೆ.
ರಂಜಾನ ಹಬ್ಬದ ಸಮಯದಲ್ಲಿ ಈದ್ಗಾಮೈದಾನ ಪ್ರಾರ್ಥನೆ ತೆರಳುವರ ಸಲುವಾಗಿ ಸಂಚಾರಿ ಪೋಲಿಸ ಠಾಣೆ ಹಾಗೂ ನಗರ ಪೋಲಿಸ ಠಾಣೆಯಿಂದ ವ್ಯವಸ್ಥೇ ಮಾಡಲಾಗಿದೆ.
ನಗರಸಭೆ ಹಾಗೂ ತಹಶಿಲದಾರ ಇಲಾಖೆ ಗಮನಕ್ಕೆ ರಂಜಾನ ಹಬ್ಬದ ನಿಮಿತ್ಯ ಕಿರಾಣಿ ಅಂಗಡಿ ಹಾಗೂ ಬಟ್ಟೆ ಅಂಗಡಿಗಳಿಗೆ ರಾತ್ರಿ ಸಮಯದಲ್ಲಿ ವ್ಯಾಪಾರ ಮಾಡಲು ಸಮಯ ವಿಸ್ತರಿಸಲು ತಿಳಿಸಿದ್ದಾರೆ. ಇದರ ಬಗ್ಗೆ ಎರಡು ಇಲಾಖೆಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ನಗರಸಭೆ ವ್ಯವಸ್ಥಾಪಕ ಷಣಮುಖಪ್ಪ ಐಲಿ ಮಾತನಾಡಿದರು.
ಗ್ರೇಡ್ -2 ತಹಶೀಲ್ದಾರ ಮಹಾಂತಗೌಡ,ನಗರ ಪೋಲಿಸಠಾಣೆ ಪಿಐ ವಾಸುಕುಮಾರ ಭಾಗವಹಿಸಿದ್ದರು.
ನಗರಸಭೆ ಮಾಜಿ ಅಧ್ಯಕ್ಷರುಗಳಾದ ಶ್ಯಾಮಿದ ಮನಿಯಾರ,ಹನುಮಂತಪ್ಪ ನಾಯಕ ಜೋಗದ,ಮುಖಂಡರಾದ ಎಸ್.ಬಿ.ಖಾದ್ರಿ,ಜೋಗದ ನಾರಾಯಣಪ್ಪ ನಾಯಕ,ಜಿಲಾನಿ ಖಾದ್ರಿ,ಶೇಖ ಇಲಿಯಾಸಬಾಬಾ,ಅಲ್ತಾಫ ಹುಸೇನ ಖಾದ್ರಿ ಅನಿಸಿಕೆ ವ್ಯಕ್ತಪಡಿಸಿದರು.
ಪಿಎಸ್ ಐಗಳಾದ ಹೆಚ್ ಬಸವರಾಜ, ವಿರುಪಾಕ್ಷಪ್ಪ,ಬಸವರಾಜ ಜಿಕೆನಗರಸಭೆ ಸದಸ್ಯರುಗಳಾದ ವಾಸು ದೇವ ನವಲಿ,ಪರಶುರಾಮ ಮಡ್ಡೇರ.ಮೌಲಾಸಾಬ,ಮುಖಂಡರುಗಳಾದ ಹುಲಗೇಶ ದೇವರಮನಿ,ದುರುಗಪ್ಪ ದಳಪತಿ,ಬಸವರಾಜ ಮ್ಯಾಗಳಮನಿ,ಲಕ್ಷಣ ನಾಯಕ ಉಪಸ್ಥೀತರಿದ್ದರು.
ಶ್ರೀನಿವಾಸ ನಾಯಕ ನಿರೂಪಿಸಿದರು.ರಮೇಶ ಎಸ್.ಬಿ ಸ್ವಾಗತಿಸಿದರು,ಮಹೇಶ ವಂದಿಸಿದರು.
