4 ಅಂತರರಾಜ್ಯ ಕುರಿ ಕಳ್ಳರ ಬಂಧನ 8.85 ಲಕ್ಷ ರೂಪಾಯಿಗಳ 67 ಕುರಿ1 ಟಗರು 1 ಬೊಲೊರೋ ವಶ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 13- ತಾಲೂಕು ಹಚ್ಚೋಳ್ಳಿ ಪೊಲೀಸ್ ಠಾಣೆ ಪೊಲೀಸರಿಂದ ನಾಲ್ವರು ಅಂತರ ರಾಜ್ಯ ಕುರಿ ಕಳವು ಆರೋಪಿಗಳನ್ನು ಬಂಧಿಸಿರುವ ಅವರಿಂದ ಅಂದಾಜು8.85 ಲಕ್ಷ ರೂ ಮೊತ್ತದ 67 ಕುರಿ1 ಟಗರು 1 ಬೊಲೊರೋ ವಶಕ್ಕೆ ಪಡೆದಿದ್ದಾರೆ.
ದೊಡ್ಡ ಹನುಮಂತ ಚಿರತ ನರಸಿಂಹ ರಂಗಸ್ವಾಮಿ ಒಡ್ಡೆ ನರಸಿಂಹ ಬಂಧಿತರು ಹಚ್ಚೋಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಚಳ್ಳೆ ಕೂಡ್ಲೂರು ಸಿರುಗುಪ್ಪ ತೆಕ್ಕಲಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಕೋಟೆ ಸಿರಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಂಚಿಗೇರಿಯಲ್ಲಿ ಕುರಿಗಳನ್ನು ಕಳ್ಳತನ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಸಿರುಗುಪ್ಪ ಸರ್ಕಲ್ ಹಚ್ಚೋಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಕುರಿ ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳ ಪತ್ತೆಗಾಗಿ ಸಿರುಗುಪ್ಪ ವೃತ್ತದ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.
ಈ ಮಧ್ಯೆ ಗುಂಪೊಂದು ಕಳ್ಳತನ ಮಾಡಲಾದ ಕುರಿಗಳನ್ನು ಬೊಲೊರೋ ವಾಹನದಲ್ಲಿ ತುಂಬಿಕೊಂಡು ಸಿಂಧನೂರು ಸಂತೆಗೆ ಮಾರಾಟ ಮಾಡಲು ಕೌತಾಳಂ ಕಡೆಯಿಂದ ಹೋಗುತ್ತಿರುವುದಾಗಿ ಪೊಲೀಸರಿಗೆ ಏಪ್ರಿಲ್ 7ರಂದು ಖಚಿತ ಮಾಹಿತಿ ಸಿಕ್ಕಿತ್ತು ಸಂಜೆ 7 ಗಂಟೆ ನಲ್ಲಿ ವತ್ತು ಮುರಣಿ ರಸ್ತೆಯಲ್ಲಿ ಬೊಲೊರೋವನ್ನು ತಡೆದು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು ವಿಚಾರಣೆ ನಡೆಸಿದಾಗ ಕಳ್ಳತನ ಕೃತ್ಯ ಬಯಲಾಗಿದೆ.
