ಸಸಿಮಠ ಕುಟುಂಬದ ನವ ವಧು ವರರಿಂದ ಮತದಾನ ಜಾಗೃತಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 22- ಭಾಗ್ಯನಗರ ಪಟ್ಟಣದ ಸಸಿಮಠ ಕುಟುಂಬದ ಸಿದಾರ್ಥಸ್ವಾಮಿ ಹಾಗು ರೋಹಿಣಿ ಇವರ ವಿವಾಹ ಸಮಾರಂಭವು ಭಾಗ್ಯನಗರದ ಕಠಾರೆ ಕಲ್ಯಾಣ ಮಂಟಪದಲ್ಲಿ ಹಾಲ್ ನಲ್ಲಿ ಜರುಗಿತು.
ಮೇ-7ರಂದು ಲೋಕಸಭಾ ಚುನಾವಣೆ ಜರುಗಲಿರುವ ಪ್ರಯುಕ್ತ ಕೊಪ್ಪಳ ತಾಲೂಕ ಸ್ವೀಪ್ ಸಮಿತಿಯಿಂದ ವಿವಾಹ ಸಮಾಂಭದಲ್ಲಿ ಹಾಜರಿದ್ದ ನವ ವಧು-ವರರು ವೇದಿಕೆಯಲ್ಲಿ ನಮ್ಮ ಮತ, ನಮ್ಮ ಹಕ್ಕು, ಪ್ರತಿ ಮತ ಅತ್ಯಮೂಲ್ಯ ತಪ್ಪದೇ ಮತದಾನ ಮಾಡಿ, ನನ್ನ ಮತ ಮಾರಾಟಕ್ಕಿಲ್ಲ, ಮತ ಚಲಾಯಿಸೋಣ ಪ್ರಜಾಪ್ರಭುತ್ವ ಗಟ್ಟಿಗೊಳಿಸೊಣ ಇತ್ಯಾದಿ ಸ್ಲೋಗನ್ ಗಳನ್ನು ಒಳಗೊಂಡ ಬಟಿಂಗ್ಸ್ ಮೂಲಕ ನವ ವಧು-ವರರು ಮತದಾನ ಜಾಗೃತಿ ಮೂಡಿಸಿದ್ದು ಕಾರ್ಯಕ್ರಮದಲ್ಲಿ ಹಾಜರಿದ್ದವರಿಗೆ ಖುಷಿ ನೀಡಿತು.
ಕಾರ್ಯಕ್ರಮದಲ್ಲಿ ತಾಲೂಕ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ದುಂಡಪ್ಪ ತುರಾದಿ ಹಾಗು ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಹಾಗು ಜಿಲ್ಲಾ ಪಂಚಾಯತಿ ಸಹಾಯಕ ಕಾರ್ಯದರ್ಶಿ ಶಿವಪ್ಪ ಸುಬೆದಾರ್ ರವರು ನವ ವಧು ವರರಿಗೆ ಅಕ್ಷತೆ ಹಾಕುವದರ ಮೂಲಕ ಶುಭ ಆರೈಸಿದರು.ಕಡ್ಡಾಯವಾಗಿ ಮೇ-7ರಂದು ತಪ್ಪದೇ ಮತ ಚಲಾಯಿಸಿರೆಂದು ಸಸಿಮಠ ಕುಟುಂಬದವರಿಗೆ ಹಾಗು ಹಾಜರಿದ್ದವರಿಗೆ ಕರೆ ನೀಡಿದರು.
ಸೆಲ್ಪಿ ಸ್ಟ್ಯಾಂಡ್ ನಲ್ಲಿ ಪೊಟೊ ತೆಗೆಸಿಕೊಂಡು ವಧು ವರರು : ತಾಲೂಕ ಪಂಚಾಯತಿ ವತಿಯಿಂದ ಸಿದ್ದಪಡಿಸಲಾದ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಸೆಲ್ಪಿ ಸ್ಟ್ಯಾಂಡ್ ನಲ್ಲಿ ನವ ವಧು ವರರು ಮತದಾನ ಮಾಡುವ ಕುರಿತು ಪೊಟೊ ತೆಗೆಸಿಕೊಂಡರು.
ಜಿಲ್ಲಾ ಪಂಚಾಯತ ಆಡಳಿತ ಸಹಾಯಕ ನಿರ್ದೇಶಕರಾದ ಎಸ್.ಆರ್.ಪೂಜಾರ, ತಾಲೂಕ ಪಂಚಾಯತಿಯ ಯೋಜನಾಧಿಕಾರಿ ರಾಜೇಸಾಬ ನದಾಫ್, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ತಾಲೂಕ ಸ್ವೀಪ್ ಸಮಿತಿಯ ಸದಸ್ಯರಾದ ಬಸವರಾಜ ಬಳಿಗಾರ, ದೇವರಾಜ ಪತ್ತಾರ, ಜಿಲ್ಲಾ ಪಂಚಾಯತ ಸಿಬ್ಬಂದಿಗಳು, ಪಂಚಾಯತ ಅಭಿವೃದ್ದಿ ಅಧಿಕಾರಿಗಳು, ತಾಲೂಕ ಪಂಚಾಯತಿ ಸಿಬ್ಬಂದಿಗಳು ಹಾಗು ಇನ್ನಿತರರು ಹಾಜರಿದ್ದರು.
