ರೇಣುಕಾಚಾರ್ಯರ ಜಯಂತಿ ಆಚರಣೆ
ಕರುನಾಡ ಬೆಳಗು ಸುದ್ದಿ
ಕುಕನೂರ, 22- ತಾಲೂಕಿನ ಮಂಗಳೂರು ಗ್ರಾಮದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಅರಳಲೇ ಹಿರೇಮಠದಲ್ಲಿ ಪೂಜ್ಯರ ಸನ್ನಿಧಾನದಲ್ಲಿ ಡಾ.ಮಹದೇವ ಮಹಾಸ್ವಾಮಿಗಳು ಮತ್ತು ಹಿರೇ ಮಲ್ಲಿಕೇರಿ ಪೂಜ್ಯರ ಕೃಪಾಶೀರ್ವಾದದಿಂದ ಶ್ರೀ ರೇಣುಕಾಚಾರ್ಯರ ಜಯಂತಿಯನ್ನು ಗೌರವಿತವಾಗಿ ನಮಸ್ಕಾರ ಮಾಡಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ರೇಣುಕಾಚಾರ್ಯರ ಹಾಗೂ ಬಸವಾದಿ ಶಿವಶರಣರ ನಾಮಸ್ಮರಣೆ ಮಾಡಿ ಅವರಿಗೆ ಭಕ್ತಿ ಭಾವದಿಂದ ನಮಸ್ಕಾರಗಳನ್ನು ಸಲ್ಲಿಸಿದರು.
ಕೊಟ್ರಪ್ಪ ತೋಟದˌಶಂಕರಗೌಡ್ರˌವಿಶ್ವನಾಥ ಮರಿಬಸಪ್ಪನವರ ಮಾತನಾಡಿದರು.
ತೋಟಯ್ಯಸ್ವಾಮಿ ತಳಕಲ್ˌರೇವಣಸಿದ್ದಯ್ಯ ಅರಳಲೆಹಿರೇಮಠˌಚನ್ನವೀರಯ್ಯ ಹಿರೇಮಠˌವೀರಣ್ಣ ಉಮಚಗಿˌಬಸವರಾಜ ಯಲಬುರ್ಗಿˌಗುರುರಾಜ ಇಲಕಲ್ˌಮೈಲಾರಪ್ಪ ಹ್ಯಾಟಿˌ ಮುತ್ತು ತಳವಾರˌ ಮೊದಲಾದ ಭಕ್ತರು ಉಪಸ್ಥಿತರಿದ್ದರು.
