WhatsApp Image 2024-04-25 at 2.35.29 PM

ಮನೆಯಿಂದಲೇ ಮತ ಚಲಾಯಿಸಿದ 85 ವರ್ಷದ ಹಿರಿಯ ನಾಗರಿಕರು, ವಿಕಲಚೇತನರು

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 25- ಲೋಕಸಭಾ ಸಾರ್ವತ್ರಿಕ ಚುನಾವಣೆ ಮೇ-7ರಂದು ಜರುಗಲಿದ್ದು ಪ್ರಯುಕ್ತ ತಾಲೂಕಿನಲ್ಲಿ ವಿವಿಧ ಬೂತ್ ಮಟ್ಟದಲ್ಲಿ ನೊಂದಣಿ ಮಾಡಿಕೊಂಡ 85 ವರ್ಷ ಮೇಲ್ಪಟ್ಟದ ಹಿರಿಯ ನಾಗರೀಕರು ಹಾಗು ವಿಕಲಚೇತನರು ಮನೆಗೆ ಬಂದ ಚುನಾವಣೆಯ ಸಿಬ್ಬಂದಿಯೊಂದಿಗೆ ಮೊದಲನೇ ದಿನದಂದು ಖುಷಿಯಿಂದ ಮತ ಚಲಾಯಿಸಿದರು.

ಕೊಪ್ಪಳ ತಾಲೂಕಿನ ಮನೆಯಿಂದಲೇ ಮತ ಚಲಾಯಿಸಿದ ಹಲಗೇರಿ ಗ್ರಾಮದ ಹಿರಿಯ ಮತದಾರ ಶಿವಾನಂದಪ್ಪ ಚಂಡೂರು ಮಾತನಾಡಿ 85 ವರ್ಷದ ಹಿರಿಯ ನಾಗರೀಕರು ಹಾಗು ವಿಕಲಚೇತನರಿಗೆ ಮತಗಟ್ಟೆಗೆ ಹೋಗಿ ಚಲಾಯಿಸಲು ಸಾಧ್ಯವಾಗುವದಿಲ್ಲ. ಚುನಾವಣೆ ಸಿಬ್ಬಂದಿಗಳು ಮನೆ ಬಾಗಲಿಗೆ ಬಂದು ಮತ ಚಲಾಯಿಸಲು ಅವಕಾಶ ನೀಡಿರುವ ಚುನಾವಣೆ ಆಯೋಗದ ಕ್ರಮದ ಕುರಿತು ಖುಷಿಪಟ್ಟರು.

ದೇಶದಲ್ಲಿ ಸುಭದ್ರ ಸರ್ಕಾರ ನಿರ್ಮಾಣದಲ್ಲಿ ಪ್ರತಿ ಮತವು ಕೂಡಾ ಅಮೂಲ್ಯವಾದದ್ದು. ಚುನಾವಣೆ ಆಯೋಗದ ಈ ರೀತಿಯ ಕ್ರಮದಿಂದ ಹಿರಿಯ ನಾಗರೀಕರು ಹಾಗು ವಿಶೇಷಚೇತನರು ಮತದಾನದಿಂದ ವಂಚಿತರಾಗುವದಕ್ಕೆ ಕಡಿವಾಣ ಹಾಕಿದಂತಾಗುತ್ತದೆ ಎಂದರು.

ಅತೀಯಾದ ಬಿಸಿಲು ಇರುವದರಿಂದ ಹಿರಿಯ ನಾಗರೀಕರು ಹಾಗು ವಿಶೇಷಚೇತನರು ಮನೆಯಿಂದ ಮತ ಚಲಾವಣೆಗೆ ಅವಕಾಶ ಕಲ್ಪಿಸಿರುವದು ಶ್ಲಾಘನೀಯವಾಗಿದೆ ಎಂದರು. ನಾನು ಮತದಾನ ಮಾಡಿದ್ದೇನೆ, ತಪ್ಪದೇ ನೀವು ಕೂಡಾ ಮತ ಚಲಾಯಿಸಿರೆಂದು ಕರೆ ನೀಡಿದರು.

ಮತ ಚಲಾಯಿಸಿದ ನಂತರ ತಮ್ಮ ಅನಿಸಿಕೆಯನ್ನು ಹಂಚಿಕೊಂಡ ಶಿವಾನಂದಪ್ಪ ಇವರ ಜೊತೆಗೆ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ದುಂಡಪ್ಪ ತುರಾದಿ, ತಾಲೂಕ ಸ್ವೀಪ್‌ ನೋಡಲ್‌ ಅಧಿಕಾರಿ ಹನಮಂತಪ್ಪ, ಹಲಗೇರಿ ಪಂಚಾಯತ ಅಭಿವೃದ್ದಿ ಅಧಿಕಾರಿ ಅಶೋಕ ರಾಂಪುರ, ಜಿಲ್ಲಾ ಎಸ್‌ಬಿಎಂ ಐಇಸಿ ಸಂಯೋಜಕ ಮಾರುತಿ ನಾಯಕರ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ,ಕಾರ್ಯದರ್ಶಿ ದೊಡ್ಡನಗೌಡ ಪಾಟೀಲ್‌ ಹಾಗು ಕುಟುಂಬದ ಸದಸ್ಯರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!