ಬರ ಪರಿಹಾರ ರೈತರ ಖಾತೆಗೆ ಹಣ ಜಮೆ ಮಾಡಿ ರೈತರ ಒತ್ತಾಯ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 17- ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿಯ ನಿಬಂಧನೆಗಳ ಪ್ರಕಾರ ರೈತರ ಖಾತೆಗೆ ಬರ ಪರಿಹಾರ ಹಣ ಜಮೆ ಮಾಡಬೇಕು ಎಂದು ಒತ್ತಾಯಿಸಿ ಸಿರುಗುಪ್ಪ ತಾಲೂಕಿನ ತಾಳೂರು ಗ್ರಾಮದ ರೈತರು ಸಿರುಗುಪ್ಪ ತಾಲೂಕ ತಹಸಿಲ್ದಾರ್ ಕಚೇರಿಗೆ ತೆರಳಿ ಶಿರಸ್ತೆದಾರ್ ಸಿದ್ದಾರ್ಥ ಕಾರಂಜಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರಮುಖ ರೈತರದ ರಾಘವೇಂದ್ರ ರೆಡ್ಡಿ ಅವರು ಮಾತನಾಡಿ ಸರಕಾರದಿಂದ ಬರ ಪರಿಹಾರದ ಹಣವನ್ನು ರೈತರ ಖಾತೆಗೆ ಜಮೆ ಮಾಡಲಾಗುತ್ತಿದೆ ಆದರೆ ಕೆಲವರಿಗೆ ಮಾತ್ರ ಹಣ ಬಿದ್ದಿದೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿಯ ನಿಬಂಧನೆಗಳನ್ನು ಪಾಲಿಸದೆ ರೈತರ ಖಾತೆಗಳಿಗೆ ಹಣ ಜಮಾ ಮಾಡುತ್ತಿದೆ ಇದರಿಂದಾಗಿ ನಿಜವಾದ ರೈತರಿಗೆ ಅನ್ಯಾಯವಾಗುತ್ತಿದೆ ಆದ್ದರಿಂದ ಸರ್ಕಾರ ಏನ್ ಡಿ ಆರ್ ಎಫ್ ನಿಬಂಧನೆಗಳ ಪ್ರಕಾರ ಪರಿಹಾರ ನೀಡಬೇಕು ಇಲ್ಲದಿದ್ದರೆ ಹೋರಾಟ ಮಾಡುಲಾಗುವುದು ಎಂದು ಎಚ್ಚರಿಸಿದರು.
ರೈತರದ ಪಾಂಡುರಂಗಪ್ಪ, ಶಿವಪ್ಪ, ಕೆ ಸುಧಾಕರ ರೆಡ್ಡಿ, ಈರಣ್ಣ, ಗಂಗಮ್ಮ, ಯಂಕಪ್ಪ, ಕೆ ಪ್ರಹಲ್ಲಾಚಾರ್, ಜಿ ಮಲ್ಲಿಕಾರ್ಜುನ ರೆಡ್ಡಿ, ಬಿ ಮಹಾ ನಂದ ರೆಡ್ಡಿ, ನಾಗರಾಜ, ವೆಂಕಟರಾಮರೆಡ್ಡಿ, ಡಿ ವೆಂಕಟೇಶ್ ಮತ್ತಿತರರು ಇದ್ದರು.
