ಮಹಿಳಾ ಸೌಚಾಲಯ ಗೋಡೆ ಕುಸಿದು ಇಬ್ಬರ ಸಾವು
ಕರುನಾಡ ಬೆಳಗು ಸುದ್ದಿ
ತಾವರಗೇರಾ, 18- ಪಟ್ಟಣದ 5ನೇ ವಾರ್ಡಿನ ಶೀಥಿಲಾವಸ್ಥೆಯಲ್ಲಿದ್ದ ಸಾರ್ವಜನಿಕ ಮಹಿಳಾ ಶೌಚಾಲಯದ ಗೋಡೆ ಕುಸಿದು ಬಿದ್ದು ಇಬ್ಬರು ಸಾವನ್ನಪ್ಪಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಮೃತರನ್ನು ಭಾನು ಬೇಗಂ ಖಾಜಿ, ಉಮಾ ಬಾಯಿ ಬಪ್ಪರಗಿ ಎಂದು ಗುರುತಿಸಲಾಗಿದ್ದು ಮತ್ತೊಬ್ಬ ಮಹಿಳೆಗೆ ಗಾಯಗಳಾಗಿವೆ.
ಕುಸಿದ ಶೌಚಾಲಯವನ್ನು ಯಾರು ಉಪಯೋಗಿಸದಂತೆ ಪಟ್ಟಣ ಪಂಚಾಯತ ನಿಷೇದಿಸಿತ್ತು, ಮಳೆಯಿಂದಾಗಿ ಕಟ್ಟಡ ನೆನೆದಿದ್ದು, ರಾತ್ರಿ ವೇಳೆ ಮಹಿಳೆಯರು ಬಹಿರ್ದೆಸೆಗೆ ಹೋದಾಗ ಗೋಡೆ ಕುಸಿದ ಘಟನೆ ಸಂಭವಿಸಿದೆ, ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ರಾತ್ರಿ ಜಿಲ್ಲಾಧಿಕಾರಿ ನಳೀನ ಅತುಲ್, ಎಸ್.ಪಿ ಯಶೋದಾ ವಂಟಿಗೋಡಿ, ಡಿ. ವಾಯ ಎಸ್ ಪಿ ಸಿದ್ದಲಿಂಗಪ್ಪ ಗೌಡ, ಸಿಪಿಐ ಯಶವಂತ ಬೀಸನಹಳ್ಳಿ, ತಹಶೀಲ್ದಾರ ರವಿ ಎಸ್ ಅಂಗಡಿ, ಪಿಎಸ್‌ಐ ಸುಜಾತಾ ನಾಯಕ, ಗ್ರೇಡ೨ ತಹಶೀಲ್ಧಾರ ಮುರಳಿಧರ, ಪ.ಪಂಚಾಯತ ಮುಖ್ಯಾಧಿಕಾರಿ ನಬಿಸಾಬ ಖುಧ ನ್ನವರ್, ಕಂದಾಯ ನಿರಿಕ್ಷಕ ಶರಣಪ್ಪ ದಾಸರ ಸೇರಿದಂತೆ ಕಂದಾಯ ಇಲಾಖೆ ನೌಕರರು ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಜಿಲ್ಲಾಧಿಕಾರಿಗಳು ಮೃತ ಮಹಿಳೆಯರು ಇಬ್ಬರೂ ಕುಟುಂಬಕ್ಕೆ ಹಾಗು ಗಾಯ ಗೊಂಡವರಿಗೆ ಪರಿಹಾರ ಚೆಕ್ ವಿತರಿಸಿದರು.
