2c136fae-be38-4577-97e1-318669006cc9

ವಕ್ಫ್ ಸಂಸ್ಥೆಗಳ ಬೈಲಾ ಅನುಮೋದನೆ ಮಾಡಿಕೊಳ್ಳಲು ಸೂಚನೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 24- ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಸುತ್ತೋಲೆಗಳಲ್ಲಿ ರಾಜ್ಯದ ಎಲ್ಲ ವಕ್ಫ್ ಸಂಸ್ಥೆಗಳ ಬೈಲಾವನ್ನು ಅನುಮೋದನೆ ಮಾಡಿಕೊಳ್ಳಲು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೂಚಿಸಿರುತ್ತಾರೆ, ಆದ ಕಾರಣ ಕೊಪ್ಪಳ ಜಿಲ್ಲೆಯಲ್ಲಿ ಬೈಲಾವನ್ನು ಅನುಮೋದನೆ ಮಾಡಿಕೊಳ್ಳದ ವಕ್ಫ್ ಸಂಸ್ಥೆಗಳು ಬೈಲಾವನ್ನು ಅನುಮೋದನೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಲ್ಲಿ ಗೆಜೆಟ್ ಅಧಿಸೂಚಿತವಾದ ಮತ್ತು ನೋಂದಣಿಯಾದ ಕೊಪ್ಪಳ ಜಿಲ್ಲೆ ವ್ಯಾಪ್ತಿಯ ಎಲ್ಲಾ ವಕ್ಫ್ ಸಂಸ್ಥೆಗಳು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಮಾದರಿ ನಿಯಮಾವಳಿಯ ನಮೂನೆ ನಂ.-42 (ಬೈಲಾ) ವನ್ನು ಅಂಗೀಕರಿಸಿಕೊಳ್ಳುವುದು ಕಡ್ಡಾಯವಾಗಿದೆ.

ಈವರೆಗೂ ಮಾದರಿ ನಿಯಮಾವಳಿಯನ್ನು ಅಂಗೀಕರಿಸಿಕೊಳ್ಳದ ವಕ್ಫ್ ಸಂಸ್ಥೆಯ ಅಧ್ಯಕ್ಷರು/ಕಾರ್ಯದರ್ಶಿಗಳು ತುರ್ತಾಗಿ ಮಾದರಿ ನಿಯಮಾವಳಿ ಬೈಲಾವನ್ನು (ಫಾರ್ಮ್-42) ಅನುಮೋದನೆ ಪಡೆಯಲು ಸಂಬAಧಪಟ್ಟ ದಾಖಲೆಗಳೊಂದಿಗೆ ಜಿಲ್ಲಾ ವಕ್ಫ್ ಕಛೇರಿ, ಮೌಲಾನಾ ಆಜಾದ ಭವನ, ಹೋಸಪೇಟೆ ರಸ್ತೆ, ಕೊಪ್ಪಳ ಕಛೇರಿಗೆ ಶೀಘ್ರ ಭೇಟಿ ನೀಡಿ ಪ್ರಸ್ತಾವನೆಯನ್ನು ಸಲ್ಲಿಸಬೇಕು ಎಂದು ಜಿಲ್ಲಾ ವಕ್ಫ್ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!