ಕುಟುಂಬ ಸಮೇತ ಮತ ಹಕ್ಕನ್ನು ಚಲಾಯಿಸಿದ ಅಭ್ಯರ್ಥಿ ಪ್ರತಾಪ್ ರೆಡ್ಡಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 3- ವಿಧಾನ ಪರಿಷತ್ತಿನ ಈಶಾನ್ಯ ಪದವೀಧರ ಕ್ಷೇತ್ರ ಮತದಾನ ಅಂಗವಾಗಿ, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ನಾರಾ ಪ್ರತಾಪ್ ರೆಡ್ಡಿ ಅವರು ಕುಟುಂಬ ಸಮೇತವಾಗಿ ಮತಗಟ್ಟೆಗೆ ಭೇಟಿ ನೀಡಿ ಮತ ಹಕ್ಕನ್ನು ಚಲಾಯಿಸಿದರು.
ನಗರದ ಗಾಂಧಿನಗರ ವ್ಯಾಪ್ತಿಯಲ್ಲಿ ಇರುವ ಬಾಲ ಭಾರತಿ ಹೈ ಸ್ಕೂಲ್ ನಲ್ಲಿ ವ್ಯವಸ್ಥೆ ಮಾಡಿರುವ ಮತಗಟ್ಟೆ ಕೇಂದ್ರಕ್ಕೆ ತಮ್ಮ ಪತ್ನಿ ಶೈಲಜಾ ಮತ್ತು ಕುಟುಂಬ ಸದಸ್ಯರೊಂದಿಗೆ ಬಂದು ಮತ ಹಕ್ಕನ್ನು ಚಲಾಯಿಸಿದರು.
