WhatsApp Image 2024-06-05 at 5.30.19 PM

ವಿಶ್ವ ಪರಿಸರ ದಿನ ಬಿ.ಎಂ.ಎಂ ಕಂಪನಿಯಿಂದ ಸಸಿ ನೆಡುವ ಕಾರ್ಯಕ್ರಮ

ಕರುನಾಡ ಬೆಳಗು ಸುದ್ದಿ

ಮರಿಯಮ್ಮನಹಳ್ಳಿ, 5- ವಿಶ್ವ ಪರಿಸರ ದಿನ ಅಂಗವಾಗಿ ಡನಾಪುರ ಗ್ರಾಮದ ವ್ಯಾಪ್ತಿಯಲ್ಲಿರುವ ಬಿ.ಎಂ.ಎಂ ಇಸ್ಪಾತ್ ಲಿಮಿಟೆಡ್ ಕಂಪನಿಯಿಂದ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಸಂಸ್ಥೆಯ ಉಪಾಧ್ಯಕ್ಷರಾದ ಮನೀಶ್ ಡಿ ವರ್ಣೀಕರ್ ಈ ಸಂಧರ್ಭದಲ್ಲಿ ಸಸಿ ನೆಟ್ಟು ಮಾತನಾಡಿದ ರವರು ಕಾರ್ಖಾನೆಗೆ ಸಂಭಂದಿಸಿದ 3,500 ಎಕರೆ ಭೂಮಿ ಇದೆ ನಿಯಮಗಳ ಪ್ರಕಾರ ಅದರಲ್ಲಿ ಶೇಖಡ 33 ರಷ್ಟು ಭಾಗ ಗಿಡಗಳನ್ನು ಬೆಳಸುವುದಕ್ಕಾಗಿ ಮಿಸಲಿರಿಸಬೇಕೆನ್ನುವುದಿದೆ. ಅದರಂತೆ ನಾವು ಕಂಪನಿಯಿಂದ ಪ್ರತೀ ವರ್ಷ ವಿಶ್ವ ಪರಿಸರ ದಿನದಂದು ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ಕಳೆದ ವರ್ಷ 40,000ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದೇವೆ. ಈ ವರ್ಷ50,000ಸಾವಿರಕ್ಕೂ ಹೆಚ್ಚು ಮತ್ತು ಮಳೆ ಸರಿಯಾಗಿ ಬಂದು ಸಾದ್ಯವಾದರೆ 100,000 ಲಕ್ಷದವರೆಗೂ ಗಿಡಗಳನ್ನು ನೆಡಬೇಕೆಂದಿದ್ದೇವೆ. ಈ ಬಾರಿ ಶಾಲೆಗಳಲ್ಲಿಯೂ ಗಿಡನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಗಿಡಗಳನ್ನೇನೋ ನೆಡುತ್ತೀರ ಆದರೆ ನಂತರ ದಿನಗಳಲ್ಲಿ ಅವುಗಳ ಲಾಲನೆ ಪಾಲನೆ ಮಾಡುವುದಿಲ್ಲ ಎನ್ನುವುದು ಜನರ ಪ್ರಶ್ನೆಯಾಗಿದೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ಸರಿಯಾದ ಸಮಯಕ್ಕೆ ಅವುಗಳ ನಿರ್ವಹಣೆ ಮಾಡುತ್ತಿದ್ದೇವೆ ನಮ್ಮ ದಾಖಲೆಗಳ ಪ್ರಕಾರ 98%ಶೇಕಡ ಯಶಸ್ವಿಯಾಗಿದೆ ಎಂದು ತಿಳಿದಿದೆ. ಅಂತಹ ಸಮಸ್ಯೆ ಕಂಡು ಬಂದರೆ ಸರಿಪಡಿಸಲಾಗುವುದು. ನಮ್ಮ ಕಂಪನಿಯ ಉದ್ಯೋಗಿಗಳ ಹುಟ್ಟುಹಬ್ಬದ ದಿನದಂದು ಅವರ ಕೈಯಿಂದ ಒಂದು ಸಸಿ ನೆಡುವ ಕಾರ್ಯಕ್ರಮ ಮಾಡುತ್ತಾ ಬರಲಾಗಿದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಬಿಎಂಎಂ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ವಿಮಲ್ ಸಿಂಗ್, ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಮುಖ್ಯ ಹಣಕಾಸು ಅಧಿಕಾರಿಗಳು ವಿವಿವಿ ರಾಜು, ಪರಿಸರ ಅಧಿಕಾರಿ ನಾಗವಾಸು, ಮುಖ್ಯ ವೈದ್ಯಾಧಿಕಾರಿ ಪಿ ವಿಜಯ ವೆಂಕಟೇಶ್ ಡಿ ಬಿ ನಾಯ್ಕ್, ಪಿ.ಆರ್.ಒ ಗಿರೀಶ್, ಸೇರಿದಂತೆ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ಸಂಸ್ಥೆಯ ಸಿಬ್ಬಂಧಿಗಳು ಬಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!