14-1

ನೀಟ್ ಪ್ರವೇಶ ಪರೀಕ್ಷೆಯಲ್ಲಿ ಅವ್ಯವಹಾರ ಸಿಬಿಐ ತನಿಖೆಗೆ ಒತ್ತಾಯ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 14- ನೀಟ್ ಪ್ರವೇಶ ಪರೀಕ್ಷೆಯಲ್ಲಿ-ಅವ್ಯವಹಾರ-ಸಿಬಿಐ ತನಿಖೆಗೆಗೋಳಪಡಿಸಬೇಕು ಎಂದು ಲ್ಲಿ ಸರಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಹೇಳಿದರು.

ಅವರು ನಗರದ ಸ್ಥಳಿಯ ಹೋಟಲ್ ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಕೇಂದ್ರ ಸರಕಾರ ಬಿಜೆಪಿ ಪಕ್ಷವೇ ನೇರ ಹೋಣೆಯಾಗಿದೆ. ನೀಟ್ ಪರಿಕ್ಷೆ ಒಟ್ಟಾರೆ ಕ್ಯಾನ್ಸಲ್ ಮಾಡಬೇಕು. ಸಿಇಟಿ ಪರಿಕ್ಷೆ ಮೂಲಕವೇ ವಿದ್ಯಾರ್ಥಿಗಳಿಗೆ ಭವಿಷವಿದೆ. ಹರಿಯಾಣ,ಬಿಹಾರ,ಮಹಾರಾಷ್ಠ ಮುಂತಾದ ರಾಜ್ಯಗಳಲ್ಲಿ ಒಂದೇ ರೂಮಿನಲ್ಲಿ ನಿಟ್ ಪರಿಕ್ಷೆ ಬರೆದ ವಿದ್ಯಾರ್ಥಿಗಳು 720ಕ್ಕೂ 720 ಅಂಕಗಳನ್ನು ಪಡೆದು ರ‍್ಯಾಂಕ ಪಡೆಯುತ್ತಾರೆ ಬಾರಿ ಅವ್ಯವಹಾರ ನಡದಿದೆ ಕೂಡಲೇ ನ್ಯಾಯಾಲಯವು ಮಧ್ಯಸ್ಥೀಕೆ ವಹಿಸಿ ಕೇಂದ್ರ ಸರಕಾರ ಸಿಬಿಐ ತನಿಖೆ ಮಾಡುವಂತೆ ಆದೇಶಿಸಬೇಕು.

ಕರ್ನಾಟಕ ರಾಜ್ಯ ಒಂದರಲ್ಲಿಯೇ 1ಲಕ್ಷ 50 ಸಾವಿರ ವಿದ್ಯಾರ್ಥಿಗಳ ನಿಟ್ ಪರಿಕೆ ಬರೆದು ನಿರಾಶೆಗೋಳಗಾಗಿದ್ದಾರೆ. 15556 ವಿದ್ಯಾರ್ಥಿಗಳ ಮರು ನಿಟ್ ಪರಿಕ್ಷೆಗೆ ನ್ಯಾಯಾಲಯ ಆದೇಶಿದೆ. ಒಟ್ಟಾರೆ ನಿಟ್ ಪರಿಕ್ಷೆ ಮಾಡುವುದು ಬೇಡ. ಸರಕಾರ ಸುರ್ಪದಿಯಲ್ಲಿ ಇರುವ ತರಬೇತಿ ಸಂಸ್ಥೇ ಎನ್.ಟಿ.ಎ ಮೂಲಕ ವ್ಯವಹಾರಕ್ಕೆ ಮುಂದಾಗಿದೆ. ಈಮೋದಲು ಸಿಇಟಿ ಪರಿಕ್ಷೆ ಮೂಲಕ ರಾಜ್ಯದ ವಿದ್ಯಾರ್ಥೀಗಳಿಗೆ ಸದುಪಯೋಗವಾಗಿದೆ.

ವೈದ್ಯಕೀಯ ಶಿಕ್ಷಣ ವ್ಯಾಪಾರವಾಗಿದ್ದು, ವೈದ್ಯಕೀಯ ಶಿಕ್ಷಣ ಪಡೆಯುವುದು ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಕಡು ಕಷ್ಟವಾಗಿದೆ. ಹಗಲಿರುಳು ತಮ್ಮ ಪರಿಶ್ರಮ ಹಾಕಿ ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ನೀಟ್ ಪರೀಕ್ಷೆಯ ಹಗರಣವು ಶಿಕ್ಷಣ ಕ್ಷೇತ್ರದ ಅತ್ಯಂತ ದೊಡ್ಡ ಹಗರಣ ವಾಗಿದೆ. ಜೂನ್ ೪ ರಂದು ಪ್ರಕಟಗೊಂಡ ನೀಟ್ ಪರೀಕ್ಷಾ ಫಲಿತಾಂಶದ ಪಾರದರ್ಶಕತೆಯ ಕುರಿತು ದೇಶವ್ಯಾಪಿ ವಿದ್ಯಾರ್ಥಿಗಳು ಹಾಗೂ ಪಾಲಕರು ಹಲವಾರು ಪ್ರಶ್ನೆಗಳನ್ನು ಎತ್ತಿದ್ದಾರೆ.

ಯುಜಿಸಿ ಪರೀಕ್ಷಾ ಮಾರ್ಗಸೂಚಿ ಅನ್ವಯ ಅಂಕಗಳನ್ನು ನೀಡಿದ್ದಲ್ಲಿ ವಿದ್ಯಾರ್ಥಿಗಳು ಪಡೆಯಬಹುದಾದ ಅಂಕಗಳೊAದಿಗೆ, ಪ್ರಸ್ತುತ ಒಂದಿಷ್ಟು ವಿದ್ಯಾರ್ಥಿಗಳು ಪಡೆದಿರುವ ಅಂಕಗಳು ಹೊಂದಿಕೆಯಾಗುತ್ತಿಲ್ಲ. ಕೆಲವು ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅಂಕ ನೀಡಿರುವುದಾಗಿ ಎನ್ ಟಿಎ ಸಮಜಾಯಿಸಿ ನೀಡಿದೆ. ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಸಮಾನ ಅಂಕಗಳನ್ನು ಗಳಿಸಿದ್ದಾರೆ. ಇದರೊಂದಿಗೆ, ಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದವು ಅಥವಾ ಈ ಕುರಿತು ಸಮರ್ಪಕ ತನಿಖೆ ನಡೆಸಲಾಗಿಲ್ಲ ಎಂದರು.

ಈ ಸಂರ್ಭದಲ್ಲಿ ಜಿಲ್ಲಾ ಪ0ಚಾಯತ ಮಾಜಿ ಸದಸ್ಯ ಅಮರೇಶ ಗೋನಾಳ, ತಾಪಂ ಮಾಜಿ ಸದಸ್ಯ ಫಕಿರಪ್ಪ,ಕಲ್ಗುಡಿ ಪ್ರಸಾದ,ಗ್ರಾಪಂ ಮಾಜಿ ಸದಸ್ಯ ಸುರೇಶ ಮುಂತಾದವರು ಉಪಸ್ಥೀತರಿದ್ದರು.

 

Leave a Reply

Your email address will not be published. Required fields are marked *

error: Content is protected !!