ಮಕ್ಕಳನ್ನು ಬಾಲ ಕಾರ್ಮಿಕತೆಯಿಂದ ತಪ್ಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವ : ಹಾಜಿ ಹುಸೇನ್ ಸಾಬ್ ಯಾದವಾಡ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 14- ಬಾಲಕಾರ್ಮಿಕ ಪದ್ಧತಿಯನ್ನು ತೊಲಗಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಗೌರವಾನ್ವಿತ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹಾಜಿ ಹುಸೇನ್ ಸಾಬ್ ಯಾದವಾಡ ಅವರು ಹೇಳಿದರು.
ಸಿರುಗುಪ್ಪ ನಗರದ ಶಾಂತಿನಿಕೇತನ ಪ್ರೌಢಶಾಲಾ ಆವರಣದಲ್ಲಿ ಕರ್ನಾಟಕ ಸರ್ಕಾರ ತಾಲೂಕ ಆಡಳಿತ ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ ಕಾರ್ಮಿಕ ಇಲಾಖೆ ತಾಲೂಕು ಪಂಚಾಯತ್ ಶಿಕ್ಷಣ ಇಲಾಖೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಪೊಲೀಸ್ ಇಲಾಖೆ ಆರೋಗ್ಯ ಇಲಾಖೆ ಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಾ ಮಕ್ಕಳಿಗೆ ಸರ್ಕಾರದ ಎಲ್ಲಾ ಸೌಲಭ್ಯ ಸಿಗುತ್ತವೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂಬುದನ್ನು ಪ್ರತಿಯೊಬ್ಬ ಶಿಕ್ಷಕರು ಅರಿಯಬೇಕು ಶಿಕ್ಷಕರು ಕಲಿಕೆ ಮಾಡುವುದರ ಜೊತೆಗೆ ಮಕ್ಕಳ ಪಾಲಕರ ಮನವೋಲಿಸಿ ಮಕ್ಕಳಿಗೆ ಶಾಲೆಗೆ ಕರೆ ತರುವ ಮಹತ್ವದ ಸಮಾಜ ಸೇವಾ ಕಾರ್ಯ ಶಿಕ್ಷಕರ ವೃಂದ ಮಾಡುವಂತಾಗಬೇಕು ಎಂದು ಅವರು ಸಲಹೆ ನೀಡಿ ಕರೆಕೊಟ್ಟರು.
ಸಿರುಗುಪ್ಪ ವೃತ್ತದ ಕಾರ್ಮಿಕ ನಿರೀಕ್ಷಕರಾದ ಮಂಜುನಾಥ್ ತೊಂಡಿಹಾಳ್ ಅವರು ಸರ್ವರಿಗೂ ಪ್ರತಿಜ್ಞ ವಿಧಿ ಬೋಧಿಸಿದರು ಮುಖ್ಯ ಭಾಷಣಕಾರರಾಗಿ ವಕೀಲರ ತಂಡದ ಹಿರಿಯರಾದ ಸಂಪನ್ಮೂಲ ವ್ಯಕ್ತಿ ಎನ್ ಅಬ್ದುಲ್ ಸಾಬ್ ಅವರು ಬಾಲ ಕಾರ್ಮಿಕ ಪದ್ಧತಿ ಕುರಿತು ಉಪನ್ಯಾಸ ನೀಡಿದರು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ಗುರಪ್ಪ ಸರ್ಕಾರಿ ಸಹಾಯಕ ಅಭಿಯೋಜಕಿ ಶಾರದಾ ಅವರು ಮಾತನಾಡಿದರು ವಕೀಲರ ಸಂಘದ ಅಧ್ಯಕ್ಷ ಮಂಜುನಾಥಗೌಡ ಕಾರ್ಯದರ್ಶಿ ಪ್ಯಾಟೆಗೌಡ ವೆಂಕಟೇಶ ನಾಯಕ ಶಾಂತಿನಿಕೇತನ ಪ್ರೌಢಶಾಲಾ ಅಧ್ಯಕ್ಷ ಕೆ ಕೃಷ್ಣ ಮುಖ್ಯ ಗುರುಗಳು ಹೆಚ್ ಮುರುಳಿದರ ಸಾಮಾಜಿಕ ಕಾರ್ಯಕರ್ತರು ಮೊಹಮ್ಮದ್ ನೌಶಾದ್ ಅಲಿ ಅಬ್ದುಲ್ ನಬಿ ಪ್ರೌಢ ಶಾಲೆಯ ಎಲ್ಲಾ ಶಿಕ್ಷಕ ಶಿಕ್ಷಕಿಯರು ಶಾಲಾ ಮಕ್ಕಳು ಸಿಬ್ಬಂದಿ ವರ್ಗದವರು ಇದ್ದರು.
