ಹಕ್ಕು ಪತ್ರ ವಿತರಣೆ ಸಲುವಾಗಿ ಪ್ರತಿಭಟನೆ – ರವಿ ಆಗೋಲಿ
ಕರುನಾಡ ಬೆಳಗು ಸುದ್ದು
ಕೂಕನೂರ, 19- ತಾಲೂಕಿನ ಮಂಗಳೂರು ಗ್ರಾಮದಲ್ಲಿ ಸುಮಾರು 20 ವರ್ಷಗಳಾದರೂ ಸರ್ವೆ ನಂಬರ್ 319 ಎಬಿ ಮತ್ತು 321 ಸರ್ವೇ ನಂಬರ್ ನಲ್ಲಿ 350ಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆಯಾಗಿಲ್ಲ ಮತ್ತು ಅಲ್ಲಿನ ಜನರಿಗೆ ಮೂಲಭೂತ ಸೌಕರ್ಯಗಳ ಕೊರತೆ ಇದು ಅದನ್ನು ಸರಿಪಡಿಸಲು ಇಂದು ಮಂಗಳೂರು ಗ್ರಾಮ ಪಂಚಾಯತ್ ಕಾರ್ಯಾಲಯದ ಆವರಣದಲ್ಲಿ
ಪ್ರತಿಭಟನೇಯನ್ನು ಮಾಡುವ ಮೂಲಕ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿಯನ್ನು ಸಲ್ಲಿಸಲಾಗುವುದು ಎಂದು ಪ್ರತಿಭಟನೆಯ ಉಸ್ತುವಾರಿಗಳಾದ ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರು ರವಿ ನಿಂಗಪ್ಪ ಆಗೋಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
