WhatsApp Image 2024-06-21 at 1.29.08 PM

ಪ್ರತಿ ನಿತ್ಯ ಯೋಗ ಮಾಡುವುದರಿಂದ ಆರೋಗ್ಯವಾಗಿ ಬದುಕಬಹುದು : ಡಾ. ಮಂಜುನಾಥ 

ಕರುನಾಡ ಬೆಳಗು ಸುದ್ದಿ

ಕುಕನೂರ, 21- ಇಡೀ ಜಗತ್ತಿಗೆ ಯೋಗವನ್ನು ಪರಿಚಯಿಸಿದ ಹೆಮ್ಮೆ ಭಾರತದ್ದು. ಇಂದಿನ ಒತ್ತಡದ ಬದುಕಿನ ದಿನಮಾನಗಳಲ್ಲಿ ಯೋಗವು ಒಂದು ಪರಿಣಾಮಕಾರಿ ಚಿಕಿತ್ಸೆ ಆಗಿದೆ. ಇದು ದೈಹಿಕ, ಮಾನಸಿಕ ಹಾಗೂ ಭೌತಿಕ ಬೆಳವಣಿಗೆಗೆ ಸಹಾಯವಾಗಿದ್ದು ಪ್ರತಿದಿನ ಯೋಗ ಮಾಡುತಿದ್ದರೆ ನಿವು ಆರೋಗ್ಯವಾಗಿ ಬದುಕಬಹುದೆಂದು ತಾಲೂಕಾ ವೈದ್ಯಾಧಿಕಾರಿ ಮಂಜುನಾಥ ಬ್ಯಾಲಹುಣಸಿ ಅಭಿಪ್ರಾಯಾಪಟ್ಟರು.

ಅವರು ಪಟ್ಟಣದ ವಿದ್ಯಾಶ್ರೀ ಶಿಕ್ಷಣ ಸಂಸ್ಥೆ ಹಾಗೂ ಶ್ರೀ ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ನಡೆದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವದರ ಮೂಲಕ ಉದ್ಘಾಟಿಸಿ ಮಾತನಾಡುತಿದ್ದರು.

ಯೋಗ ಬರೀ ದಿನಾಚರಣೆಗೆ ಮಾತ್ರ ಸೀಮಿತವಾಗದೇ ಪ್ರತಿದಿನದ ಬದುಕಿನ ಒಂದು ಭಾಗವಾಗಬೇಕು. ಅದಕ್ಕಾಗಿ ಶ್ರೀ ಪತಂಜಲಿ ಶಿಕ್ಷಣ ಸಮಿತಿ ದಿನನಿತ್ಯ ಉಚಿತವಾಗಿ ತರಗತಿಗಳನ್ನು ನಡೆಸುತ್ತಿದೆ. ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಮಿತಿಯ ಕೊಪ್ಪಳ ಜಿಲ್ಲಾ ಸಂಚಾಲಕ ಚಿದಾನಂದ ಪತ್ತಾರ ಕರೆ ನೀಡಿದರು.

ಕೃಷ್ಣ ವಿದ್ಯಾಪತಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ವಿದ್ಯಾಶ್ರೀ ಆಡಳಿತ ಮಂಡಳಿ ನಿರ್ದೇಶಕ ವೀರಯ್ಯ ಉಳ್ಳಾಗಡ್ಡಿ, ಡಾ.ಜಂಬಣ್ಣ ಅಂಗಡಿ, ಡಾ.ಮಮತಾ ಇಲಕಲ್, ಗವಿಸಿದ್ದಪ್ಪ ಕರಮುಡಿ, ಸಿದ್ಧಾರೂಢ ಬಣ್ಣದಭಾವಿ, ಯಶೋದಾ, ಶಾರದಾ ಆರೇರ, ಪ್ರಭು ವಕ್ಕಳದ, ಖಾಜಾಸಾಬ, ಶಿವಯ್ಯ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!