
ಪರಿಸರ ಸಂರಕ್ಷಣೆಯಿಂದ ಮನುಷ್ಯ ಕುಲ ರಕ್ಷಣೆ ಸಾದ್ಯ : ಡಾ.ವೈ.ಜೆ. ಶಿರವಾರ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 29- ಸರಕಾರಿ ಆಯುರ್ವೇದ ಚಿಕಿತ್ಸಾಲಯ, ಆಯುಷ್ಮಾನ ಆರೋಗ್ಯ ಮಂದಿರ ಕಾಮನೂರ, ತಾ/ಜಿ:ಕೊಪ್ಪಳದಲ್ಲಿ ದಿನಾಂಕ 28-06-2024ರಂದು ಪರಿಸರ ದಿನಾಚರಣೆಯನ್ನು ಸಸಿಯನ್ನು ನೆಟ್ಟು, 300ಸಸಿಗಳನ್ನು ಸಾರ್ವಜನಿಕರಿಗೆ ವಿತರಿಸುವ ಮೂಲಕ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಆಯುಷ ಅಧಿಕಾರಿಗಳಾದ ಡಾ. ಪರವತಗೌಡಾ ಹಿರೆಗೌಡರ ಅವರು ವಹಿಸಿಕೊಂಡೂ ಸಸಿಗೆ ನೀರು ಎರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪ್ರಾಸ್ಥಾವಿಕ ನುಡಿಗಳನ್ನಾಡಿದ ಡಾ. Y. J ಶಿರವಾರ ಹಿರಿಯ ವೈದ್ಯರು ಹಾಗು ನಿಕಟಪೂರ್ವ ಜಿಲ್ಲಾ ಆಯುಷ ಅಧಿಕಾರಿಗಳು ಇವರು ಈ ಕಾರ್ಯಕ್ರಮದ ಮುಖ್ಯ ಉದ್ದೇಶವನ್ನು ತಿಳಿಸುತ್ತಾ, ಈ ಹಿಂದೆ ಎಂದು ಕಾಣದಷ್ಟು ಬೇಸಿಗೆಯಲ್ಲಿ ಹೆಚ್ಚಿನ ಉಷ್ಣಾಂಶವನ್ನು ಈ ಸರ್ತಿ ನೋಡಬೇಕಾಯಿತು ಹಾಗು ಸಹಿಸಿಕೊಳ್ಳುವಂತಾಯಿತು. ಇದಕ್ಕೆಲ್ಲಾ ಪರಿಹಾರವೆಂದರೆ ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟು ಬೇಳಸವುದೊಂದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಜಿಲ್ಲಾ ಆಯುಷ ಅಧಿಕಾರಗಳಾದ ಡಾ. ಪರವತಗೌಡಾ ಹಿರೆಗೌಡರ ಅವರು ಮಾತನಾಡುತ್ತಾ ಪರಿಸರ ದಿನಾಚರಣೆ ಅಂದರೆ ಬೆಳಿಗ್ಗೆ ಗಿಡ ನೆಟ್ಟು, ಮಧ್ಯಾಹ್ನ ಅನುವಷ್ಟರಲ್ಲಿ ಆಡು ತಿಂದು ಅದೆ ಆಡನ್ನು ರಾತ್ರಿ ಮನುಷ್ಯ ತಿನ್ನೊದು ಅಲ್ಲ… ನೆಟ್ಟ ಗಿಡಗಳನ್ನು ಮನೆಯ ಚಿಕ್ಕ ಮಗುವಿನಂತೆ ಕಾಳಜಿವಹಿಸಿ ಬೆಳೆಸಬೇಕು. ಇದೆ ನಾವು ನಮ್ಮ ಮುಂದಿನ ಪಿಳಿಗೆಗೆ ಕೊಡುವ ಅಮೂಲ್ಯವಾದ ಆಸ್ತಿ. ಉಸಿರಿದ್ದರೆ ಬದುಕು, ಆ ಉಸಿರಿಗೆ ಉಸಿರು ನೀಡುವುದು ಮರ, ಮರಗಳನ್ನು ನೆಟ್ಟು ಪೋಷಿಸಿದರೆ ಜೀವನ, ಮರಗಳನ್ನು ಕಡೆಯುತ್ತಿದ್ದರೆ ಮರಣ. ಆದರಿಂದ ಇಂದು ಇಲ್ಲಿ ವಿತರಿಸುತ್ತಿರುವ ಪ್ರತಿಯೊಂದು ಸಸಿಯನ್ನು ನೆಟ್ಟು ಪೋಷಿಸಿ ಆರೋಗ್ಯವಂತರಾಗೊಣ ಎಂದು ಹೇಳಿದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದಂತ ಶಂಕರ ಹರಟಿ ಸಹಶಿಕ್ಷಕರು ಸ.ಹಿ.ಪ್ರಾ. ಶಾಲೆ ಕಾಮನೂರ, ಶೈಲಜಾ ಪಾಟಿಲ LHV. ಪ್ರಥಮಿಕ ಆರೋಗ್ಯ ಕೇಂದ್ರ ಇರಕಲಗಡಾ, ಬಾಳಪ್ಪ ಗ್ರಾಮ ಪಂಚಾಯತ್ ಸದಸ್ಯರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಡಾ. ಶಹಬಾಜ ಗುತ್ತಿ ತಜ್ಞ ವೈದ್ಯರು ಸರಕಾರಿ ಆಯುರ್ವೇದ ಆಸ್ಪತ್ರೆ ಗಿಣಗೆರ, ಡಾ. ಸರ್ವಮಂಗಳಾ ಹೋಮಿಯೋಪತಿ ವೈದ್ಯರು ಜಿಲ್ಲಾ ಸರಕಾರಿ ಆಸ್ಪತ್ರೆ ಕೊಪ್ಪಳ, ಶ್ರೀಮತಿ ಸಿದ್ದಮ್ಮ ಬಂಗಾರಿ ಗ್ರಾಮ ಪಂಚಾಯತಿ ಸದಸ್ಯರು ಲೇಬಗೇರಿ, ಈರಮ್ಮ ಮಾಯಿ ಗ್ರಾಮದ ಹಿರಿಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪರಿಸರವನ್ನು ಬೆಳೆಸಿ ರಕ್ಷಿಸುವ ಮಹದಾಸೆಯನ್ನು ಹೊತ್ತ ಡಾ. ಕವಿತಾ ಎಚ. ಎಫ್(ಹ್ಯಾಟಿ) ವೈದ್ಯಾಧಿಕಾರಿ ಸರಕಾರಿ ಆಯುರ್ವೇದ ಚಿಕಿತ್ಸಾಲಯ ಆಯುಷ್ಮಾನ ಆರೋಗ್ಯ ಮಂದಿರ ಕಾಮನೂರ ಈ ಕಾರ್ಯವನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಸರ್ವರಿಗು ಸ್ವಾಗತವನ್ನು ಕೋರಿ ತಮ್ಮ ಇಚ್ಚೆಯನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ರೇಶ್ಮಾ ಹಾಗೂ ಕಳಕೇಶ ಕುಮಾರ ಯೋಗ ತರಬೇತಿದಾರರು ನೆಡೆಸಿಕೊಟ್ಟರು.