12Ylb01

ಹಿರೇವಂಕಲಕುಂಟಾ : ವಿದ್ಯಾರ್ಥಿಗಳ ನಿರ್ವಾಹಕರ ನಡುವೆ ಚಕಾಮುಖಿ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 12- ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ ಕನಕದಾಸರ ವೃತ್ತದ ಹತ್ತಿರ ತಾವರಗೇರಾಯಿಂದ ಕೊಪ್ಪಳಕ್ಕೆ ತೆರಳುವ ಬಸ್ ನಿರ್ವಾಹಾಕರ ಮತ್ತು ವಿದ್ಯಾರ್ಥಿಗಳ ನಡುವೆ ಶುಕ್ರವಾರ ಪರಸ್ಪರ ಮಾತಿನ ಚಕಾಮುಖಿ ನಡೆಯಿತು.

ಬೆಳಗ್ಗೆ 6 ಗಂಟೆಗೆ ತಾವರಗೇರಾ ಪಟ್ಟಣದಿಂದ ಬಸ್ ಹಿರೇವಂಕಲಕುಂಟಾ ಮಾರ್ಗವಾಗಿ ಕೊಪ್ಪಳ ಜಿಲ್ಲಾ ಕೇಂದ್ರಕ್ಕೆ ತೆರಳುವ ಬಸ್‌ಗೆ ನಿತ್ಯವೂ ನೂರಾರು ವಿದ್ಯಾರ್ಥಿಗಳು ಕಾಲೇಜಿಗೆ ತೆರಳುತ್ತಿದ್ದಾರೆ. ಬೆಳಗಿನ ಸಮಯದಲ್ಲಿ ಪ್ರತಿಯೊಂದು ಹಳ್ಳಿಯಿಂದ ೩೦ಕ್ಕೂ ಅಧಿಕ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗು ಬರುವುದು ಮಾಡುತ್ತಿದ್ದ ಹಿನ್ನೆಲೆ ಇಕ್ಕಟ್ಟಿನಲ್ಲಿ ಜೋತು ಬಿದ್ದು ಬಸ್ ನಲ್ಲಿ ಪ್ರಯಾಣ ಮಾಡುವಂತಾಗಿದೆ.

ವೇಗವಾಗಿ ಚಾಲಕ ಬಸ್ ಓಡುಸುತ್ತಿದ್ದು ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ನಡುವೆ ಬಿರುಸಿನ ವಾಕ್ಸಮರ ಜರುಗಿತು. ನಂತರ ನಿತ್ಯವೂ ಶಾಲಾ ವಿದ್ಯಾರ್ಥಿಗಳು ಪ್ರಯಾಣಿಕರು ಸಂಚಾರ ಮಾಡುವ ಬಸ್‌ನಲ್ಲಿ ಈ ಪರಿಸ್ಥಿತಿ ಕಾಣಿಸುತ್ತಿದ್ದು, ಕಂಡಕ್ಟರ್ ಹಾಗೂ ವಿದ್ಯಾರ್ಥಿಗಳು ನಿತ್ಯವೂ ತೊಂದರೆ ಎದುರಿಸುವಂತಾಗಿದೆ. ಅತಿ ವೇಗವಾಗಿ ವಾಹನ ಓಡಾಡುತ್ತಿದ್ದು, ಹಾಗೂ ನಿರ್ವಾಹಕರು ಟಿಕೆಟ್ ನೀಡಲು ತಿಕ್ಕಾಟದಿಂದ ಟಿಕೆಟ್ ನೀಡಲು ಹರಸಾಹಸ ಪಡುವಂತಾಗಿದೆ. ಹೀಗಾಗಿ ಜಿಲ್ಲಾ ಕೇಂದ್ರದಿಂದ ಈ ಮಾರ್ಗವಾಗಿ ಹೆಚ್ಚುವರಿಯಾಗಿ ಬಸ್ ಸಂಚರಿಸಲು ಅನುಕೂಲ ಮಾಡಿಕೊಡಬೇಕು.

ಅಲ್ಲದೇ ವಿದ್ಯಾರ್ಥಿಗಳು ಮತ್ತು ನಿರ್ವಾಹಕರ ನಡುವೆ ಯಾವುದೇ ಸಂಘರ್ಷವಾಗದಂತೆ ನಯ ವಿನಯತೆಯಿಂದ ನಡೆಯಬೇಕು ಎನ್ನುವುದು ಪ್ರಯಾಣಿಕರು ದೂರಿದ್ದಾರೆ.

Leave a Reply

Your email address will not be published. Required fields are marked *

error: Content is protected !!