WhatsApp Image 2024-07-14 at 4.34.30 PM

ಬಳ್ಳಾರಿ ಸಿಂಧನೂರಿಗೆ ರೈಲ್ವೆ ಯೋಜನೆಗೆ ಕೇಂದ್ರದಿಂದ ಅನುದಾನ ಘೋಷಿಸಲು ಮನವಿ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 14- ಸಿರುಗುಪ್ಪ ಮಾರ್ಗವಾಗಿ ಬಳ್ಳಾರಿ ಸಿಂಧನೂರುಗೆ ನೂತನ ರೈಲ್ವೆ ಮಾರ್ಗದ ಕಾಮಗಾರಿಗೆ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಅನುದಾನ ಘೋಷಿಸಬೇಕು ಎಂದು ರಾಷ್ಟ್ರೀಯ ಸಾಕ್ಷರತಾ ಸದಸ್ಯ ಜನಾಭಿಪ್ರಾಯ ಮುಖಂಡ ಎ ಅಬ್ದುಲ್ ನಬಿ ಅವರು ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸತ್ ರಾಜಶೇಖರ್ ಹಿಟ್ನಾಳ್ ಅವರಿಗೆ ಮನವಿ ಪತ್ರ ವಿನಂತಿಸಿ ಬರೆದುಕೊಂಡಿದ್ದಾರೆ.

ಸಿರುಗುಪ್ಪ ಮಾರ್ಗವಾಗಿ ಬಳ್ಳಾರಿ ಸಿಂಧನೂರು ನೂತನ ರೈಲ್ವೆ ಯೋಜನೆ ಕುರಿತು ಜುಲೈ 23ರಂದು ನಡೆಯುವ ಕೇಂದ್ರದ ಅಧಿವೇಶನ ಬಜೆಟ್ ನಲ್ಲಿ ಸದರಿ ರೈಲ್ವೆ ಯೋಜನೆಗೆ ಅನುಮೋದನೆ ನೀಡುವುದಲ್ಲದೆ ಅಗತ್ಯ ಅನುದಾನ ಮಂಜೂರು ಗೊಳಿಸಿ ಮುಂದಿನ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಕೇಂದ್ರ ಮತ್ತು ರಾಜ್ಯ ರೈಲ್ವೆ ಸಚಿವರಿಗೆ ಮತ್ತು ಪ್ರಧಾನ ಮಂತ್ರಿಗಳಿಗೆ ಒತ್ತಡ ಹೇರಬೇಕು ಎಂದು ಅಬ್ದುಲ್ ನಬಿಯವರು ರಾಜಶೇಖರ ಹಿಟ್ನಾಳ್ ಅವರಿಗೆ ವಿನಂತಿಸಿ ಮನವಿ ಮಾಡಿ ಕೊಂಡ ಅವರು ಬಳ್ಳಾರಿ ಸಿರುಗುಪ್ಪ ಸಿಂಧನೂರಿಗೆ ಈ ರೈಲ್ವೆ ಮಾರ್ಗದ ಸರ್ವೆ ಮುಗಿದಿದೆ ಈಗ ಅದಕ್ಕೆ ಹಣ ಮೀಸಲು ಪಿಟ್ಟ ಕೇಂದ್ರ ರೈಲ್ವೆ ಸಚಿವರಿಗೆ ಈ ಮಾರ್ಗವನ್ನು ಕಾರ್ಯರೂಪಕ್ಕೆ ತರುವಂತೆ ಒತ್ತಾಯಿಸಬೇಕು ಎಂದು ಅಬ್ದುಲ್ ನಬಿ ಅವರು ರಾಜಶೇಖರ್ ಹಿಟ್ನಾಳ್ ಅವರಿಗೆ ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ .

Leave a Reply

Your email address will not be published. Required fields are marked *

error: Content is protected !!