Koppal Brand Logo

ಹಿರೇಬೆಣಕಲ್‌ನಲ್ಲಿ ಪಾರಂಪರಿಕೆ ನಡಿಗೆ, ಪ್ರವಾಸೋದ್ಯಮ ಜಾಗೃತಿ ಕಾರ್ಯಕ್ರಮ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 24- ವಿಶ್ವ ಪರಂಪರೆ ಸಮಿತಿಯ 46ನೇ ಅಧಿವೇಶನದ ಭಾಗವಾಗಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಹಿರೇಬೆಣಕಲ್ ಮೆಗಾಲಿಥಿಕ್ ಸೈಟ್‌ನಲ್ಲಿ ಪಾರಂಪರಿಕೆ ನಡಿಗೆ (ಹೆರಿಟೇಜ್ ವಾಕ್) ಮತ್ತು ಪ್ರವಾಸೋದ್ಯಮ ಜಾಗೃತಿ ಕಾರ್ಯಕ್ರಮವನ್ನು ಜುಲೈ 25ರಂದು ಬೆಳಿಗ್ಗೆ 8 ರಿಂದ 10 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಾದ ಡಿ.ನಾಗರಾಜ ಅವರು ತಿಳಿಸಿದ್ದಾರೆ.

ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯ, ಬೆಂಗಳೂರು ಕಚೇರಿ ಹಾಗೂ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ಎ.ಎಸ್.ಐ ಹಂಪಿ ವೃತ್ತ, ಕಿಷ್ಕಿಂದ ಯುತ್ ಟ್ರೆಕ್ಕಿಂಗ್ ಕ್ಲಬ್ & ಲೈವ್ ವಿತ್ ಹ್ಯೂಮ್ಯಾನಿಟಿ ಟ್ರಸ್ಟ್ ಇವರ ಸಹಯೋಗದಲ್ಲಿ ಹಿರೇಬೆಣಕಲ್ ಮೆಗಾಲಿಥಿಕ್ ಸೈಟ್‌ನಲ್ಲಿ ಆಯೋಜಿಸುತ್ತಿರುವ ಹೆರಿಟೇಜ್ ವಾಕ್ ಮತ್ತು ಪ್ರವಾಸೋದ್ಯಮ ಜಾಗೃತಿ ಕಾರ್ಯಕ್ರಮವು ವಿಶ್ವ ಪರಂಪರೆ ಸಮಿತಿಯ 46ನೇ ಅಧಿವೇಶನದ ಭಾಗವಾಗಿದೆ.

ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿರುವ ಹಿರೇಬೆಣಕಲ್ ಮೆಗಾಲಿಥಿಕ್ ಸೈಟ್ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿದೆ. ಇದು ಮೆಗಾಲಿಥಿಕ್ ಅವಧಿಗೆ ಹಿಂದಿನ ವಿಶಾಲವಾದ ಸಮಾಧಿ ಸಂಕೀರ್ಣವಾಗಿದೆ. ಇದು 20 ಹೆಕ್ಟೇರ್‌ಗಳಲ್ಲಿ ಹರಡಿದ್ದು, ಕಲ್ಲಿನ ರಚನೆಗಳ ಮೂರು ವಿಭಿನ್ನ ಸಮೂಹಗಳನ್ನು ಒಳಗೊಂಡಿದೆ. ಹೆರಿಟೇಜ್ ವಾಕ್ ಭಾಗವಹಿಸುವವರಿಗೆ ಈ ಆಕರ್ಷಕ ಪುರಾತತ್ವ ಶಾಸ್ತ್ರದ ಸ್ಥಳವನ್ನು ಅನ್ವೇಷಿಸಲು ಮತ್ತು ಅದರ ಶ್ರೀಮಂತ ಇತಿಹಾಸದ ಬಗ್ಗೆ ತಿಳಿದುಕೊಳ್ಳಲು ಅಸಾಧಾರಣ ಅವಕಾಶವನ್ನು ಒದಗಿಸುತ್ತದೆ.

ಪ್ರವಾಸೋದ್ಯಮ ಸಚಿವಾಲಯವು ಭಾರತದ ವೈವಿಧ್ಯಮಯ ಪರಂಪರೆಯ ಅರಿವು ಮತ್ತು ಮೆಚ್ಚುಗೆಯನ್ನು ಉತ್ತೇಜಿಸಲು ಬದ್ಧವಾಗಿದೆ. ಈ ಕಾರ್ಯಕ್ರಮವು ಹಿರೇಬೆಣಕಲ್ ಮೆಗಾಲಿಥಿಕ್ ಸೈಟ್‌ನ ಮಹತ್ವ ಮತ್ತು ಯುನೆಸ್ಕೋ ವಿಶ್ವ ಪರಂಪರೆಯ ತಾಣದ ಶಾಸನಕ್ಕೆ ಅದರ ಸಾಮರ್ಥ್ಯದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ.

ಈ ಸಂಬಂಧವಾಗಿ, ಪ್ರವಾಸೋದ್ಯಮ ಮಂತ್ರಾಲಯ ಭಾರತ ಸರ್ಕಾರ, ಬೆಂಗಳೂರು ರವರು ಜು.25ರಂದು ಬೆಳಿಗ್ಗೆ 8 ರಿಂದ 10 ಗಂಟೆಯವರೆಗೆ ಯುನೆಸ್ಕೋ ವಿಶ್ವ ಪರಂಪರೆಯ ತಾಣದ ತಾತ್ಕಾಲಿಕ ಪಟ್ಟಿಯಲ್ಲಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಮೆಗಾಲಿಥಿಕ್ ಹಿರೇಬೆಣಕಲ್ ಬೆಟ್ಟದಲ್ಲಿ ಹೆರಿಟೇಜ್ ವಾಕ್ ಮತ್ತು ಪ್ರವಾಸೋದ್ಯಮ ಜಾಗೃತಿ ಕಾರ್ಯಕ್ರಮ ಮತ್ತು ಪಾರಂಪರಿಕ ನಡಿಗೆ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ರಾಮ್ ಎಲ್ ಅರಸಿದ್ದಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಅರ್ಸಲಾನ್, ಹಂಪಿ ಪುರಾತತ್ವ ಇಲಾಖೆಯ ಉಪ ಅಧೀಕ್ಷಕರಾದ ಸಿ.ಬರಣಿಧರನ್, ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯ, ಬೆಂಗಳೂರು ಕಚೇರಿಯ ಪ್ರವಾಸೋದ್ಯಮ ಮಾಹಿತಿ ಅಧಿಕಾರಿಗಳಾದ ಚಂದ್ರಾ ನಾಯಕ್ ಹಾಗೂ ಗಂಗಾವತಿ ತಹಶೀಲ್ದಾರರಾದ ಯು.ನಾಗರಾಜ್ ಅವರು ಪಾಲ್ಗೊಳ್ಳುವರು ಎಂದು ಕೊಪ್ಪಳ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!