IMG-20240813-WA0009

ನಶಾಮುಕ್ತ ಭಾರತ ಅಭಿಯಾನ : ಮಾಧಕ ವಸ್ತು ಸೇವನೆ ಮಾಡದಂತೆ ವಿದ್ಯಾರ್ಥಿಗಳ ಪ್ರತಿಜ್ಞೆ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 14- ನಗರದ ಕೋಟೂರೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ನಶಾ ಮುಕ್ತ ಭಾರತ ಅಭಿಯಾನದ ಪ್ರಯುಕ್ತ ಮಾಧಕ ವಸ್ತು ಸೇವನೆ ಮಾಡದಿರಲು ವಿದ್ಯಾರ್ಥಿಗಳಿಗೆ ಪ್ರತಿಜ್ಞೆ ಭೋದನೆ ಮಾಡಲಾಯಿತು.

ಕಾಲೇಜಿನ ಪ್ರಾಚಾರ್ಯ ವಿ ಜಿ ಯಾವಗಲ್ ಮಾತನಾಡಿ ಮಾಧಕ ವಸ್ತು ಗಳ ಸೇವನೆ ಮನುಷ್ಯನ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಬದುಕಿಗೆ ಕಂಠಕವಾಗಿದೆ
ದುಶ್ಚಟಗಳು ವ್ಯಕ್ತಿಯ ವೈಯಕ್ತಿಕ ಬದುಕನ್ನು ಹಾಳುಮಾಡುತ್ತದೆ. ವಿದ್ಯಾರ್ಥಿಗಳು ಆರೋಗ್ಯಕರವಾದ ಜೀವನ ಶೈಲಿ ಯನ್ನು ರೂಢೀಸಿಕೋಂಡು ಉತ್ತಮವಾದ ಶಿಕ್ಷಣವನ್ನು ಪಡೆಯಲು ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ಎನ್ ಎಸ್ ಎಸ್ ಕಾರ್ಯಕ್ರಮಧಿಕಾರಿ ಚಂದ್ರಶೇಖರ ಹಂಚಿನಾಳ, ಉನ್ಯಾಸಕರಾದ ಶ್ರೀಮತಿ ಮೀನಾಕ್ಷಿ, ಶ್ರೀಮತಿ ವಿಜಯಲಕ್ಷ್ಮಿ ಹಾಗೂ ಕೃಷ್ಣಕುಮಾರ, ಹುಲುಗಪ್ಪ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!