ಸೇತುವೆ ಮೇಲಿಂದ ರಾಜಸ್ಥಾನದ ಮೂಲದ ಯುವಕ ನದಿಗೆ ಹಾರಿದ ಘಟನೆ ಶವಕ್ಕಾಗಿ ಕಾರ್ಯಾಚರಣೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 16- ತಾಲೂಕು ದೇಶನೂರು ಗ್ರಾಮದ ಸಂಪರ್ಕ ಕಲ್ಪಿಸುವ ತುಂಗಭದ್ರಾ ನದಿಯ ಸೇತುವೆ ಮೇಲಿಂದ ರಾಜಸ್ಥಾನ ಮೂಲದ ಯುವಕ ತುಂಗಭದ್ರಾ ನದಿಗೆ ಹಾರಿದ ಘಟನೆ ಗುರುವಾರ ನಡೆದಿದೆ.
ನದಿಗೆ ಹಾರಿದ ಧನ್ಯಾರಾಂ (20) ಎಂದು ಹೇಳಲಾಗಿದೆ ಗುರುವಾರ 10:00 ಸುಮಾರಿಗೆ ಯುವಕನು ನದಿಗೆ ಹರಿದ್ದಾನೆಂದು ಹೇಳಲಾಗುತ್ತಿದೆ ಆದರೆ ಯುವಕ ನದಿಗೆ ಹಾರಿದ ಬಗ್ಗೆ ಸಾರ್ವಜನಿಕರು ನೋಡಿಲ್ಲವೆಂದು ಹೇಳಲಾಗುತ್ತಿದೆ ಆದರೆ ನದಿ ದಡದಲ್ಲಿ ಯುವಕನಿಗೆ ಸೇರಿದ ಬೈಕ್ ಪತ್ತೆಯಾಗಿದೆ ಯುವಕ ನದಿಗೆ ಹಾರಿದ್ದಾನೆ ಎಂದು ಹೇಳಲಾಗುತ್ತಿದ್ದು ಸ್ಥಳಕ್ಕೆ ತಹಶೀಲ್ದಾರ್ ಹೆಚ್ ವಿಶ್ವನಾಥ ಡಿ ವೈ ಎಸ್ ಪಿ ವೆಂಕಟೇಶ್ ಉಗಿಬಂಡಿ ಸಿಪಿಐ ಹನುಮಂತಪ್ಪ ಪಿಎಸ್ಐ ಪರಶುರಾಮ ಭೇಟಿ ನೀಡಿ ಪರಿಶೀಲನೆ ನಡೆಸಿ ಯುವಕನ ಕುಟುಂಬದ ಸದಸ್ಯರಿಂದ ಮಾಹಿತಿ ಪಡೆದರು.
ರಾಜಸ್ಥಾನ ರಾಜ್ಯದ ಜಿಲ್ಲೆಯವನಾದ ಈ ಯುವಕನು ಕಳೆದ ಐದು ವರ್ಷಗಳಿಂದ ಸಿರುಗುಪ್ಪ ನಗರದ ಬಳ್ಳಾರಿ ರಸ್ತೆಯ ಅಂಗಡಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದನು.
ರಾಜಸ್ಥಾನ ಮೂಲದ ಯುವಕನ ನದಿಗೆ ಹಾರಿದ ಬಗ್ಗೆ ಪ್ರತ್ಯಕ್ಷ ಸಾಕ್ಷಿಗಳು ನೋಡಿಲ್ಲ ಯುವಕನ ಗೆ ಸೇರಿದ ಬೈಕ್ ಸೇತುವೆ ಸಮೀಪ ಪತ್ತೆಯಾಗಿದ್ದು ಯುವಕನ ಶವ ಪತ್ತೆಗಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ನೂರಿತ ಈಜುಗಾರರಿಂದ ಕಾರ್ಯಾಚರಣೆ ಆರಂಭವಾಗಿದೆ ಡಿ ವೈ ಎಸ್ಪಿ ವೆಂಕಟೇಶ್ ಉಗಿಬಂಡಿ ಅವರು ತಿಳಿಸಿದ್ದಾರೆ
