ಸ್ವತಂತ್ರ ದಿನಾಚರಣೆ ಅಂಗವಾಗಿ, ಬಿಜೆಪಿಯಿಂದ ಸಸಿ ನೆಡುವ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 16- ದೇಶದ 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇಂದು ಕೌಲ್ ಬಜಾರ್ ಬಿಜೆಪಿ ಮಂಡಲ ವತಿಯಿಂದ ಮಂಡಲದ ಕಚೇರಿಯಲ್ಲಿ ರಾಷ್ಟ್ರಧ್ವಜಾರೋಹಣ, ಸ್ವಚ್ಛ ಭಾರತ್ ಅಭಿಯಾನ ಮತ್ತು, ಶ್ರೀ ಪೂರ್ವ ಪವನ್ ಸ್ಕೂಲ್ ಆವರಣದಲ್ಲಿ ಸಸಿ ನೀಡುವ ಕಾರ್ಯಕ್ರಮ ಮಾಡಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾ ಉಪಾಧ್ಯಕ್ಷರಾದ ಓಬಳೇಶ್ ಮಾತನಾಡುತ್ತಾ ಪ್ರತಿಯೊಬ್ಬರು ದೇಶಭಕ್ತಿಯನ್ನು ಹೊಂದಿರಬೇಕೆಂದು, ದೇಶ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಜಿ ಹಲವಾರು ಕಾರ್ಯಕ್ರಮಗಳು ಮಾಡುತ್ತಿರುವುದು ಯುವ ಪೀಳಿಗೆಗೆ ಆದರ್ಶನಿಯ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷರಾದ ವಿ ನಾಗರಾಜ್ ರೆಡ್ಡಿ ಅವರು ಮಾತನಾಡುತ್ತಾ ಸಣ್ಣ ಮಕ್ಕಳಲ್ಲಿ ಮತ್ತು ಯುವತಿಯಲ್ಲಿ ದೇಶಭಕ್ತಿ ಮತ್ತು ದೇಶದ ಮೇಲೆ ಪ್ರೇಮ ಕಲ್ಪಿಸಲು ನಾವು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು. ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಜಿ ಪ್ರಪಂಚಕ್ಕೆ ಮಾದರಿಯಾದ ನಾಯಕ ಎಂದು ಹೇಳಿದರು.
ಈ ಸಂದರ್ಭವಾಗಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ರಾಷ್ಟ್ರಧ್ವಜವನ್ನು ಕೈಯಲ್ಲಿಟ್ಟುಕೊಂಡು ರ್ಯಾಲಿ ನಡೆಸಿದರು. ಸ್ಕೂಲ್ ನಲ್ಲಿ ಮಕ್ಕಳಿಗೆ ಸಿಹಿ ಮತ್ತು ಹಣ್ಣುಗಲು ಹಂಚಲಾಯಿತು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಸದಸ್ಯ ಎಂ ಗೋವಿಂದರಾಜು ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರಾಜೇಶ್ ಮತ್ತು ಅವಿನಾಶ್, ಬಿಜೆಪಿ ಮೋರ್ಚಾ ಅಧ್ಯಕ್ಷರು ಉಪಾಧ್ಯಕ್ಷರು ಪದಾಧಿಕಾರಿಗಳು ರಾಜ್ಯ ಪದಾಧಿಕಾರಿಗಳು ಹಲವಾರು ಮಂದಿ ಕಾರ್ಯಕರ್ತರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.
