ಗ್ರಾ.ಪಂ. ಸದಸ್ಯರ ಸಮಸ್ಯೆಗಳು ಪರಿಷ್ಕರಿಸಲು ಮುಖ್ಯಮಂತ್ರಿಗಳಿಗೆ ಮನವಿ
ಕರುನಾಡ ಬೆಳಗು ಸುದ್ದಿ
ಔಿಜಯನಗರ, 16- ಕರ್ನಾಟಕ ರಾಜ್ಯದ ಗ್ರಾಮ ಪಂಚಾಯಿತಿ ಸದಸ್ಯರ ಸಮಸ್ಯೆಗಳು ಪರಿಷ್ಕರಿಸಲು, ಕರ್ನಾಟಕ ರಾಜ್ಯ ಸರ್ಕಾರ ಕೂಡಲೇ ಕ್ರಮ ವಹಿಸಬೇಕೆಂದು, ಕರ್ನಾಟಕ ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟದ, ವಿಜಯನಗರ ಜಿಲ್ಲಾ ಗ್ರಾಮ ಪಂಚಾಯತಿ ಸದಸ್ಯರ ಜಿಲ್ಲಾಧ್ಯಕ್ಷರು, ಸಣ್ಣಕ್ಕಿ ಲಕ್ಷ್ಮಣ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ತುಂಗಭದ್ರ ಡ್ಯಾಮ್ ಪರಿಸ್ಥಿತಿಯ ವೀಕ್ಷಣೆಗಾಗಿ ಜಿಲ್ಲೆಗೆ ಭೇಟಿ ನೀಡಿದ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗಿಣಿಗೇರಿ ಸಮೀಪದ ಏರ್ಪೋರ್ಟ್ ಹತ್ತಿರ ಭೇಟಿ ಮಾಡಿ ಮನವಿ ಪತ್ರ ನೀಡಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರು ಸಣ್ಣಕ್ಕಿ ಲಕ್ಷ್ಮಣ್ ಅವರು ಮಾತನಾಡುತ್ತಾ ಈಗಾಗಲೇ ತಮ್ಮ ಒಕ್ಕೂಟದಿಂದ ಹಲವಾರು ಬಾರಿ ಮುಖ್ಯಮಂತ್ರಿಗಳು ಸಂಬಂಧಪಟ್ಟ ಇಲಾಖೆಗಳ ಸಚಿವರಿಗೆ ಹಲವಾರು ಬಾರಿ ಮನವಿ ಪತ್ರ ಸಲ್ಲಿಸಲಾಗಿದೆ ಎಂದರು.
ಗ್ರಾಮೀಣ ಅಭಿವೃದ್ಧಿ ಖಾತೆ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಭೇಟಿ ಮಾಡಿ 28 ಸಮಸ್ಯೆಗಳನ್ನು ವಿವರಿಸಿದಾಗ ಬೆಂಗಳೂರಲ್ಲಿ ಸಚಿವರು ತಾವು ಕೂಡ ಕೆಳಮಟ್ಟ ದಿಂದ ಬೆಳೆದ ನಾಯಕರಂದು ಸದಸ್ಯರ ಸಮಸ್ಯೆಗಳು ತಮಗೆ ತಿಳಿಯುತ್ತದೆ ಎಂದು ಕೂಡಲೇ ಸಮಸ್ಯೆಗಳ ಪರಿಷ್ಕಾರಕ್ಕೆ ಕ್ರಮ ವಹಿಸಲಾಗುವುದು ಎಂದು ಆಶ್ವಾಸನೆ ನೀಡಿರುವ ವಿಷಯವನ್ನು ಮುಖ್ಯಮಂತ್ರಿಗಳಿಗೆ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಕೂಡ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ನಾವು ಹೋರಾಟವನ್ನು ಕೈಗೆತ್ತಿಕೊಂಡಾಗ ತಾವು ಮತ್ತು ತಮ್ಮ ಸಚಿವರು ಆಸ್ವಾಸನೆ ನೀಡುವದು, ಏನು ಕ್ರಮ ವಹಿಸದೇ ಇರುವದು ಬೇಸರ ಮಾಡುತ್ತದೆ ಎಂದು ತಿಳಿಸಿದರು. ಇನ್ನು ಮುಂದಾದರೂ ಮುಖ್ಯಮಂತ್ರಿಗಳು ಮತ್ತು ಸಂಬಂಧಪಟ್ಟ ಸಚಿವರು ಈ 28 ಸಮಸ್ಯೆಗಳ ಜೊತೆಗೆ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರ ಗೌರವ ವೇತನವನ್ನು ಹೆಚ್ಚಿಸಲು ಒತ್ತಾಯಿಸುತ್ತಿರುವದಾಗಿ ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಸಣ್ಣಕ್ಕಿ ಲಕ್ಷ್ಮಣ್ ಅವರು ವಿವರಿಸಿದ್ದರು.
ಮಹಿಳೆಯರ ರಕ್ಷಣೆಗಾಗಿ ಪ್ರತ್ಯೇಕ ಕಾಲ್ ಸೆಂಟರ್ ವ್ಯವಸ್ಥೆ ಮಾಡಿ : ಅಧ್ಯಕ್ಷ ಸಣ್ಣಕ್ಕೆ ಲಕ್ಷ್ಮಣ್ ಒತ್ತಾಯ ದೇಶಾದ್ಯಂತ ಇಂದಿನ ದಿನಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ಕಿರಿಕುಳ ಹೆಚ್ಚುತ್ತಿರುವುದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕೆಂದು. ರಾಜ್ಯದ ಮಹಿಳೆಯರು ಮತ್ತು ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರ ರಕ್ಷಣೆಗಾಗಿ ಪ್ರತ್ಯೇಕ ಕಾಲ್ ಸೆಂಟರ್ ಅನ್ನು ವ್ಯವಸ್ಥೆ ಮಾಡಬೇಕೆಂದು ಈ ಸಂದರ್ಭದಲ್ಲಿ ಅಧ್ಯಕ್ಷ ಸಣ್ಣಕ್ಕೆ ಲಕ್ಷ್ಮಣ ಅವರು ಒತ್ತಾಯ ಮಾಡಿದರು.
