ಹರಪನಹಳ್ಳಿ ಮೂಲದ ವ್ಯಕ್ತಿ ಕಾಣೆ : ಪ್ರಕರಣ ದಾಖಲು
ಕರುನಾಡ ಬೆಳಗು ಸುದ್ದಿ
ವಿಜಯನಗರ, 26- ಹರಪನಹಳ್ಳಿ ತಾಲೂಕಿನ ಕನಕನಬಸಾಪುರ ಗ್ರಾಮದ ಗಂಗಾಧರ ಟಿ.ಎಂ (34) ಎಂಬಾತನು 06-03-2017 ರಂದು ಕಾಣೆಯಾಗಿದ್ದು, ಆದರೆ ಇದುವರೆಗೆ ಪತ್ತೆಯಾಗಿರುವುದಿಲ್ಲ. ಈ ವ್ಯಕ್ತಿಯ ಪತ್ತೆ ಸಲುವಾಗಿ ಪ್ರಕಟಣೆ ಹೊರಡಿಸಲಾಗಿದೆ.
ಈ ವ್ಯಕ್ತಿಯು ಕಾಣೆಯಾದ ಬಗ್ಗೆ 18-07-2023ರಂದು ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ (ಗುನ್ನೆ ನಂ:147/2023) ಪ್ರಕರಣ ದಾಖಲಾಗಿರುತ್ತದೆ.
ದಾವಣಗೆರೆಗೆ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವನು ವಾಪಸು ಬಂದಿರುವುದಿಲ್ಲ. ವಿವಿಧ ಕಡೆ ಹುಡುಕಾಡಿದರು ಪತ್ತೆಯಾಗಿರುವುದಿಲ್ಲ. ಇಂದಲ್ಲಾ ನಾಳೆ ಬರಬಹುದು ಎಂದು ಸುಮ್ಮನಾಗಿದ್ದೆವು. ದೂರು ಕೊಡಲು ತಡವಾಗಿದೆ. ಪರ‍್ಯಾದಿದಾರರು ಮಗನ ಎಲ್‌ಐಸಿ ಹಣವನ್ನು ಬಿಡಿಸಿಕೊಳ್ಳುವ ಸಲುವಾಗಿ ನೀಡಿದ ದೂರನ್ನು ದಾಖಲಿಸಿ ಮಗನ ಪತ್ತೆ ಮಾಡಿಕೊಡಿ ಎನ್ನುವ ದೂರು ಸ್ವೀಕರಿಸಿ ಪತ್ತೆ ಕಾರ್ಯಕೈಗೊಳ್ಳಲಾಗಿದೆ.
ಚಹರೆ: ಕಾಣೆಯಾದ ಟಿ.ಎಂ ಗಂಗಾಧರ (35) ಅವರು 5.4 ಅಡಿ ಎತ್ತರ, ಗೋಧಿ ಬಣ್ಣ, ಸಾಧಾರಣ ಮೈ ಕಟ್ಟು, ಕೋಲು ಮುಖ ಹೊಂದಿರುತ್ತಾರೆ. ಹಳದಿ ಬಣ್ಣದ ಅಂಗಿ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ.
ಕನ್ನಡ ಭಾಷೆ ಮಾತನಾಡುತ್ತಾನೆ. ಈ ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಹರಪನಹಳ್ಳಿ ಪೊಲೀಸ್ ನಿರೀಕ್ಷಕರ ದೂರವಾಣಿ ಸಂಖ್ಯೆ: 9480805776, ಪೊಲೀಸ್ ಕಂಟ್ರೋಲ್ ರೂಮ್ ನಂಬರ್: 9480805700 ಹರಪನಹಳ್ಳಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 8277981350 ಗೆ ಸಂಪರ್ಕಿಸಿ ಎಂದು ಹರಪನಹಳ್ಳಿ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
