ತೆಲಂಗಾಣ ಮೂಲದ ವ್ಯಕ್ತಿ ಕಾಣೆ : ಪ್ರಕರಣ ದಾಖಲು
ಕರುನಾಡ ಬೆಳಗು ಸುದ್ದಿ
ವಿಜಯನಗರ, 26- ಹೊಸಪೇಟೆಯ ಡಿ.ಎನ್.ಕೆರೆ ಗ್ರಾಮದ ಬಳಿಯ ಕಂಪನಿಗೆ ನೀರಿನ ಪೈಪ್‌ಲೈನ್ ಅಳವಡಿಸುವ ಕಾಮಗಾರಿಯ ಕೂಲಿ ಕೆಲಸಕ್ಕೆ ಬಂದಿದ್ದ ತೆಲಂಗಾಣ ರಾಜ್ಯದ 44 ವಯಸ್ಸಿನ ವಡ್ಡೆ ಮಲ್ಲೇಶ್ ಅವರು ಕಾಣೆಯಾದ ಬಗ್ಗೆ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯು ಗುನ್ನೆ ನಂ: 96/2024ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ವಡ್ಡೆ ಮಲ್ಲೇಶ ತೆಲಂಗಾಣ ರಾಜ್ಯದ ವಾಸಿಯಾಗಿದ್ದು ಕೂಲಿ ಕೆಲಸ ಮಾಡುತ್ತಿದ್ದನು. ತನ್ನ ಗಂಡನಿಗೆ ಪರಿಚಯ ಇರುವ ದಂಡ್ಲ ಸ್ವಾಮಿ ಮತ್ತು ರಮೇಶ್ ಎನ್ನುವವರೊಂದಿಗೆ ಕರ್ನಾಟಕ ರಾಜ್ಯದ ವಿಜಯನಗರ ಜಿಲ್ಲೆಯ ಹೊಸಪೇಟೆಯ ಡಿ.ಎನ್.ಕೆರೆ ಗ್ರಾಮದ ಬಳಿಯ ಕಂಪನಿಗೆ ನೀರಿನ ಪೈಪ್‌ಲೈನ್ ಅಳವಡಿಸುವ ಕಾಮಗಾರಿಯ ಕೂಲಿ ಕೆಲಸಕ್ಕೆ ಕರೆದುಕೊಂಡು ಬಂದಿದ್ದು 7-8-2024ರಂದು ಬೆಳಗಿನ ಜಾವ 04-30ರ ಸುಮಾರಿಗೆ ಎಲ್ಲಿಗೋ ಹೋಗಿ ಕಾಣೆಯಾಗಿದ್ದು, ಅಕ್ಕ ಪಕ್ಕ ಊರುಗಳಲ್ಲಿ ಹಾಗೂ ಆಂಧ್ರದ ತಮ್ಮ ಸಂಬAಧಿಕರ ಊರುಗಳಲ್ಲಿ ಹುಡುಕಾಡಿದರು ಪತ್ತೆಯಾಗಿರುವುದಿಲ್ಲ ಎಂದು ವಡ್ಡೆ ಮಲ್ಲೇಶ್ ಅವರ ಪತ್ನಿ ವಿ.ರಾಮುಲಮ್ಮ ಅವರು ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಚಹರೆ : ವ್ಯಕ್ತಿಯು ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ದುಂಡನೆಯ ಮುಖಹೊಂದಿದ್ದು, 163 ಚ.ಸೆಂ ಎತ್ತರ ಇರುತ್ತಾನೆ. ಬಿಳಿ ಬಣ್ಣದ ಅಂಗಿ ಹಾಗೂ ನೀಲಿ ಬಣ್ಣದ ಲುಂಗಿಯನ್ನು ಧರಿಸಿರುತ್ತಾನೆ. ತೆಲುಗು ಮಾತನಾಡುತ್ತಾನೆ.
ಈ ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯ ಪಿಎಸ್ ದೂ.ಸಂ: 08394-244030, ಎಸ್‌ಡಿಪಿಒ ದೂ.ಸಂ: 08397-238477, ಡಿಪಿಒ ದೂ.ಸಂ: 08391-220333ಗೆ ತಿಳಿಸಿ ಎಂದು ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯ ತನಿಖಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
