1

ನಗರದ ಅಭಿವೃದ್ದಿಗಾಗಿ ನಗರುತ್ಥಾನ : ಶಾಸಕ ಜನಾರ್ಧನರೆಡ್ಡಿ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 5- ಸಂಗಾಪೂರ ಗ್ರಾಮ ಪಂಚಾಯತಿ ವ್ಯಾಪಿಯ ಸಾಯಿನಗರದಿಂದ ಕಡೆಬಾಗಿಲುವರೆಗೆ ೫ಕಿಮಿ ರಸ್ತೆ ಕಾಮಗಾರಿಗಾಗಿ ೨೦ ಕೋಟಿ ಅನುದಾನ ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯಿAದ ಮಂಜೂರುರಾಗಿದೆ ಎಂದು ಶಾಸಕ ಗಾಲಿ ಜನಾರ್ಧನರೆಡ್ಡಿ ಹೇಳಿದರು.

ಅವರು ತಾಲೂಕಿನ ಸಂಗಾಪೂರ ಗ್ರಾಮ ಪಂಚಾಯತಿ ವ್ಯಾಪಿಯ ಸಾಯಿನಗರದಿಂದ ಕಡೆಬಾಗಿಲು ರಸ್ತೆ ಕಾಮಗಾರಿ ಭೂಮಿ ಪೂಜೆ ನೇರವೇರಿಸಿ ಮಾತನಾಡಿ ಈಗಾಗಲೇ ಅಂಜನಾದ್ರಿ ಅಭಿವೃದ್ದಿಯ ಪರ್ವ ಪ್ರಾರಂಭವಾಗಿದೆ. ಈಗ ಸಾಯಿನಗರದಿಂದ ಕಡೆಬಾಗಿಲುವರೆಗೆ ೫೦ ಅಡಿ ರಸ್ತೆ ಕಾಮಗಾರಿ ಪ್ರಾರಂಭಿಸಿದ್ದವೆ. ಡಾಂಬರಿಕರಣ ಸೇರಿ ಎರಡು ಕಡೆಯಲ್ಲೂ ಸೇರಿ ೩೦ ಅಡಿ ಇದ್ದ ರಸ್ತೆ ೫೦ ಅಡಿಯವರೆಗೆ ಮಾಡಲಾಗುವುದು. ಹೆಚ್ಚಿನ ಅನುದಾನದಲ್ಲಿ ಸಾಯಿನಗರದಿಂದ ಅಂಜನಾದ್ರಿ ಹಾಗೂ ತಿರುಮಲಾಪೂರ ರಸ್ತೆಯ ಎರಡುಬದಿಯಲ್ಲಿ ವಿದ್ಯುತ ದೀಪಗಳ ಅಳವಡಿಸಲಾಗುವುದು.

ಪಾದಚಾರಿಗಳಿಗೆ,ಹನುಮಮಾಲಾ ಧಾರಿಗಳಿಗೆ ರಾತ್ರಿ ಹೋತ್ತಿನಲ್ಲೂ ಹೋಗಲು ಅನೂಕೂಲವಾಗುತ್ತದೆ. ಚಿಕ್ಕರಾಂಪೂರದಿಂದ ಸಂಗಾಪೂರವರೆಗೆ ರಸ್ತೆ ನಿರ್ಮಾಣಕ್ಕಾಗಿ ೬.ಕೋಟಿ ಅನುದಾನ ಬಿಡುಗಡೆಗೋಳಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಿಡಬ್ಲೂಡಿ ಸಚಿವ ಸತಿಶ ಜಾರಕಿಹೊಳಿಯವರೆಗೆ ಧನ್ಯವಾದ ಅರ್ಪಿಸುತ್ತನೆ.

ಅಚ್ಚುಕಟ್ಟಾದ ರಸ್ತೆ ಕಾಮಗಾರಿಯಾಗುತ್ತದೆ. ಕಲಬುರ್ಗಿ ಡೋಲಿ ಕನ್ಸಟೇಕ್ಸನವರು ನಿರ್ಮಿಸುತ್ತಾರೆ. ಲೋಕೋಪಯೋಗಿ ಇಲಾಖೆ ಎಇಇ ವಿಶ್ವನಾಥರವರು ಮುರ್ತುವಜಿವಹಿಸಿ ಕೆಲಸ ನಿರ್ವಹಿಸುತ್ತಿದ್ದಾರೆ.

ನಗರದ ಅಭಿವೃದ್ದಿಗಾಗಿ ೪೫.ಕೋಟಿ ರೂ. ನಗರದ ಎಲ್ಲಾ ವಾರ್ಡುಗಳ ಹಾಗೂ ಮುಖ್ಯ ರಸ್ತೆಯ ಕಾಮಗಾರಿಯು ನಗರುತ್ಥಾನ ಯೋಜನೆಯಡಿ ೪೫.ಕೋಟಿ ಅನುದಾನ ಮಂಜೂರಾಗಿದೆ ಶೀಘ್ರದಲ್ಲಿಯೇ ಕೆಲಸ ಪ್ರಾರಂಭಿಸಲಾಗುವುದು ನಗರದ ಸರ್ವರೂ ಸಹಕರಿಸಬೇಕು.

ಸಾರ್ವಜನಿಕರಿಗೆ ಮಾತು ಕೊಟ್ಟಂತೆ ಕೆಲಸ ಮಾಡಿ ತೋರಿಸುತ್ತನೆ ಸಮಯ ಹಿಡಿಯುತ್ತದೆ ಎಲ್ಲರೂ ಕೈಜೊಡಿಸಿಬೇಕು.

ಈಗಾಗಲೇ ನಗರದ ಅಭಿವೃದ್ದಿಗಾಗಿ ನಗರಸಭೆ ಪೌರಾಯುಕ್ತರಾದಿಯಾಗಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ೫೦೦.ಕೋಟಿ ಅನುದಾನ ಕೆಕೆಆರ್.ಡಿಬಿ ಮಂಜೂರುಗೋಳಿಸಲು ತಿಳಿಸಿದ್ದವೆ ಎಂದರು.

ನಗರಸಭೆ ಅಧ್ಯಕ್ಷ ಮೌಲಾಸಾಬ ಮಾತನಾಡಿ ಶಾಸಕ ಗಾಲಿ ಜನಾರ್ಧನರೆಡ್ಡಿಯವರು ನುಡಿದಂತೆ ನಡೆಯುತ್ತಿದ್ದಾರೆ. ಅಭಿವೃದ್ದಿ ಕೆಲಸಗಳು ನಿರಂತರವಾಗಿ ನಡೆಯುತ್ತವೆ ಎಂದರು.

ಆನೆಗೊಂದಿ ಮುಖಂಡ ಟಿಜಿಬಾಬು ಮಾತನಾಡಿ ಶಾಸಕ ಗಾಲಿ ಜನಾರ್ಧನರೆಡ್ಡಿಯವರು ರಾಣಾ ಪ್ರತಾಪ ವೃತ್ತದಿಂದ ಜುಲೈ ನಗರದ ಇಂದಿರಾಗಾAಧಿ ವೃತ್ತದವರೆಗೆ ರಸ್ತೆ ಕಾಮಗಾರಿ ವಿಶಿಷ್ಠ ರೀತಿಯಲ್ಲಿ ಮಾಡಿದ್ದಾರೆ ರಸ್ತೆಯಲ್ಲಿ ವಾಹನಗಳು ಬಿಡುವುದನ್ನು ಸಾರ್ವಜನಿಕ ಬಂದಗೊಳಿಸಲು ಮುಂದಾಗಬೇಕಾಗಿದೆ ಸರ್ವರೂ ಸಹಕರಿಸಿ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಪಾರ್ವತಮ್ಮ ದುರುಗೇಶ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ವಿರುಪಾಕ್ಷಪ್ಪ ಸಿಂಘನಾಳ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಚನ್ನಪ್ಪ ಮಳಗಿ ವಕೀಲ, ಸದಸ್ಯ ಹೆಮಣ್ಣ, ಮುಖಂಡರಾದ ಡಿಕೆ ಆಗೋಲಿ, ಜಿಪಂ ಮಾಜಿ ಸದಸ್ಯ ಸಿದ್ದರಾಮಸ್ವಾಮಿ, ಡೋಲಿ ಕಂಪನಿಯ ಅರುಣಕುಮಾರ, ಅಮರಜ್ಯೋತಿ ನರಸಪ್ಪ, ಅಲಿಖಾನ, ರಾಮಕೃಷ್ಣ, ಸಿಂಘನಾಳ ಪಂಪಾಪತಿ, ವಿಜಯಶ್ರೀ ಸಂದಿಪ ಸಿಂದೆ, ಕೊಲ್ಲಿ ರಾಧ, ಗೀತಾ ಚೌದರಿ, ಲಲಿತಾ ನಾಗರಾಜ, ಸೈಯದ ಅಲಿ, ಯಮನೂರ ಚೌಡ್ಕಿ ಹಾಗೂ ನಗರಸಭೆ ಸದಸ್ಯರುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!