ನಗರಸಭೆ ಅಧ್ಯಕ್ಷರಾದವರು ಹಣಕ್ಕಾಗಿ ಪಕ್ಷ ಬದಲಿಸಿದ್ದಾರೆ : ಎಸ್.ಬಿ.ಖಾದ್ರಿ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 5- ನೂತನವಾಗಿ ನಗರಸಭೆ ಅಧ್ಯಕ್ಷ ಆದ ವ್ಯಕ್ತಿ ಕಾಂಗ್ರೆಸ್ ಚಿನ್ಹೆಯ ಮೇಲೆ ಗೆದಿದ್ದು ಹಾಗೂ ಕಾಂಗ್ರೆಸ ಬಿಟ್ಟು ಶಾಸಕ ಗಾಲಿ ಜನಾರ್ಧನರೆಡ್ಡಿ ಜೊತೆ ಹೊದವರು ಹಣಕಾಗಿಯೇ ಹೋಗಿದ್ದು ಬೇರೇನು ಇಲ್ಲ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಕಾಂಗ್ರೆಸ್ ಮುಖಂಡ ಎಸ್.ಬಿ.ಖಾದ್ರಿ ಹೇಳಿದರು.
ನಗರದ ಮಾಜಿ ಸಚಿವ ಇಕ್ಬಾಲ ಅನ್ಸಾರಿಯವರ ನಿವಾಸದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ನಗರಸಭೆ ಅಧ್ಯಕ್ಷ ಮೌಲಾಸಾಬ ರಾಜಕೀಯಕ್ಕೆ ಬಂದಾಗ ಇಕ್ಬಾಲ ಅನ್ಸಾರಿಯವರು ಶಾಲೆ ಓದುತ್ತಿದ್ದರು ಅಂತಹ ಹೇಳಿದ್ದಾರೆ ಅದು ನಿಜ ಆದರೆ ಇಕ್ಬಾಲ ಅನ್ಸಾರಿಯವರು ನಿಮ್ಮನ್ನು ನಗರಸಭೆ ಸದಸ್ಯರನ್ನಾಗಿಸಲು ಬರಬೇಕಾಯಿತು.
ಕಾಂಗ್ರೇಸನಿAದ ಶಾಸಕ ಜನಾರ್ಧನರೆಡ್ಡಿಯವರ ಜೋತೆ ಹೋದವರು ಹಣ ತೆಗೆದುಕೊಂಡಿಲ್ಲ ಅಂತಹ ಮಸಿದಿಯಲ್ಲಿ ಪವಿತ್ರ ಕುರಾಣಮುಟ್ಟಿ ಆಣೆ ಮಾಡಲಿ,ಚನ್ನಮಲ್ಲಿಕಾರ್ಜುನ ಮಠದಲ್ಲಿ(ತಾತನ) ಮಠದಲ್ಲಿ ಬಂದು ಆಣೆ ಮಾಡಲಿ ನೋಡೋಣ ರಾಜಕಾರಣದಲ್ಲಿ ಏನು ಬೇಕಾದರೂ ಆಗುತ್ತದೆ. ಸಾಚಾಗಳಂತೆ ಮಾತನಾಡಬಾರದು ಇನ್ನೂಬ್ಬರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಬೇಕು.
ಬಿಜೆಪಿಯಿಂದ ಗೆದ್ದು ಬಂದ ನಗರಸಭೆ ಸದಸ್ಯರುಗಳು ನುಂಗಲು ಆಗದೇ ಉಗಳು ಆಗಲಾರದ ಸ್ಥಿತಿಯಲ್ಲಿ ಇದ್ದಾರೆ ಮಾಜಿ ಸಚಿವ ಇಕ್ಬಾಲ ಅನ್ಸಾರಿಯವರ ರಾಜಕೀಯ ಚಾಣಾಕ್ಷ ಇದ್ದಾರೆ ಬೇರೆ ಕಡೆ ಹೋದವರನ್ನು ಕರೆ ತಂದರೆ ಗಂಗಾವತಿ ನಗರದ ರಾಜಕಾರಣ ಹೋಲಸು ಆಗುತ್ತದೆ ಎನ್ನುವ ದೃಷ್ಠೀಯಿಂದ ಸುಮ್ಮನ್ನೇ ಇದ್ದಾರೆ.
ಗಂಗಾವತಿ ನಗರ ಬ್ಲಾಕ ಕಾಂಗ್ರೆಸ ಅಧ್ಯಕ್ಷ ಶ್ಯಾಮಿದ ಮನಿಯಾರ ಎಲ್ಲವನ್ನು ಅನ್ಸಾರಿಯವರಿಂದ ಅನುಭವಿಸಿ ಈಗ ನಾಟಕವಾಡುತ್ತಿದ್ದಾರೆ ಎಲ್ಲರಿಗೂ ತಿಳಿದ ವಿಷಯವಾಗಿದೆ. ನಗರಸಭೆ ಅಧ್ಯಕ್ಷರು ಕಾಂಗ್ರೇಸ ಪಕ್ಷದಿಂದ ಗೆದ್ದು ಬಂದವರೆ, ನಗರಸಭೆಯ ವಿರೋಧ ಪಕ್ಷದ ನಾಯಕರು ಕಾಂಗ್ರೇಸನವರೇ ಎಂತಹ ವಿರ್ಪಯಾಸ ಜನರು ಎಲ್ಲವನ್ನು ಅವಲೋಕಸುತ್ತಿದ್ದಾರೆ ಒಂಭತ್ತು ಜನ ನಗರಸಭೆ ಸದಸ್ಯರು ಎಂಎಲ್ಎ ಚುನಾವಣೆಯ ಸಮಯದಲ್ಲಿಯೇ ಜನಾರ್ಧನರೆಡ್ಡಿಯವರ ಕೆಆರ್ಪಿಪಿ ಪಾರ್ಟಿ ಕಡೆ ವಾಲಿದವರು ಇವರಿಗೆ ಹೇಳುವುದು ಏನು ಉಳಿದಿಲ್ಲ ಮುಂಬರುವ ದಿನದಲ್ಲಿ ಕಾಲವೇ ಉತ್ತರಿಸುತ್ತದೆ ಎಂದರು.
ಮುಖಂಡ ಯಮನಪ್ಪ ವಿಠಲಾಪೂರ, ನಗರಸಭೆ ಸದಸ್ಯ ಮನೋಹರಸ್ವಾಮಿ ಮುದೇನೂರ, ಎಫ್.ರಾಘವೇಂದ್ರ, ಖಾಸಿಮಸಾಬ ಗದ್ವಾಲ, ರಾಮು ಕಿರಿಕಿರಿ, ಕಾಸಿಮಸಾಬ ಮುದ್ದಾಬಳ್ಳಿ, ನಗರಸಭೆ ನಾಮನಿದೇರ್ಶನ ಸದಸ್ಯ ಉಮರಸಾಬ, ಜಿಲ್ಲಾ ಕಾಂಗ್ರೆಸ ಜುಬೇರ, ಕೆಸರಹಟ್ಟಿ ವಿಎಸ್ ಮಾಲಿಪಾಟೀಲ, ಸನ್ನಿಕ, ರಾಮಣ್ಣ ಬಳ್ಳಾರಿ ಮುಂತಾದವರು ಉಪಸ್ಥಿತರಿದ್ದರು.
