ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ, ಹಿಂದೂ ಮಹಾ ಗಣಪತಿ ಉತ್ಸವ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 6- ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಹಿಂದೂ ಮಹಾ ಗಣಪತಿ ಉತ್ಸವವನ್ನು ಇದೇ ತಿಂಗಳು ೭ನೇ ತಾರೀಖಿನಿಂದ ೧೩ನೇ ತಾರೀಖಿನವರೆಗೂ ಡಾಕ್ಟರ್ ರಾಜಕುಮಾರ್ ರಸ್ತೆಯಲ್ಲಿರುವ ಸೆಂಟೇನರಿ ಹಾಲ್ ನಲ್ಲಿ ಅದ್ದೂರಿಯಿಂದ ಆಚರಿಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ಗೌರವಾಧ್ಯಕ್ಷರು ಕೋಲಾರ ರಾಧಾಕೃಷ್ಣ, ಅಧ್ಯಕ್ಷರು ಮುರಾರಿ ಜನರಲ್ ಸ್ಟೋರ್ಸ್ ಮುರಾರಿ, ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಪಾಟೀಲ್ ಸಿದ್ದಾರೆಡ್ಡಿ ಒಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಉತ್ಸವ ಅಂಗವಾಗಿ ಏಳು ದಿನಗಳ ಕಾಲ ಪ್ರತಿದಿನ ಸಾಯಂಕಾಲ ಗಣೇಶನಿಗೆ ವಿಶೇಷ ಪೂಜಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಭರತನಾಟ್ಯ, ಸಂಗೀತ, ಭಜನೆ, ಪುಸ್ತಕ ಪ್ರದರ್ಶನ ಕಾರ್ಯಕ್ರಮಗಳನ್ನು ನಡೆಸುವುದರ ಜೊತೆಗೆ ೧೩ನೇ ತಾರೀಕು ಶುಕ್ರವಾರ ಸಾಯಂಕಾಲ 4:00ಗೆ ಬೃಹತ್ ಸೋಬ ಯಾತ್ರೆಯನ್ನು ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ವಿಜಯವಾಂತಕ್ಕೆ ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
