3

ನಾಲ್ಕು ಹೊಸ, ಬಸ್‌ಗಳಿಗೆ ಚಾಲನೆ ನೀಡಿದ ಶಾಸಕ ನಾರಾ ಭರತ್ ರೆಡ್ಡಿ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 6- ಕೆಎಸ್‌ಆರ್‌ಟಿಸಿ ವಿವಿಧ ಮಾರ್ಗಗಳಿಗೆ ನೂತನವಾಗಿ ಪ್ರಾರಂಭಿಸಲು ಉದ್ದೇಶಿಸಿದ ನಾಲ್ಕು ಹೊಸ ಬಸ್ಸುಗಳನ್ನು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಇಂದು ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ನಗರದ ಹೊಸ ಬಸ್ ನಿಲ್ದಾಣದಲ್ಲಿ ನಾಲ್ಕು ಬಸ್ಸುಗಳಿಗೆ ಹಸಿರು ನಿಜಾನೆ ತೋರಿಸಿ ನಂತರ ಶಾಸಕ ನಾರಭಾರತ ರೆಡ್ಡಿ ಅವರು ಮಾತನಾಡುತ್ತಾ ರಾಜ್ಯ ಸರ್ಕಾರ ಬಡ ಮತ್ತು ಮಾಧ್ಯಮ ಕುಟುಂಬಗಳಿಗೆ ಅನುಕೂಲಕ್ಕಾಗಿ, ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು ಅದು ಪ್ರತಿ ಅರ್ಹ ಕುಟುಂಬ ಲಬ್ಧಿ ಪಡೆಯಲು ಕರೆ ನೀಡಿದರು.

ಶಾಸಕರು ಬಸ್ ಒಳಗೆ ಅಳವಡಿಸಲಾದ ಆಧುನಿಕ ಸಿಸಿ ಕ್ಯಾಮೆರಾ ಮತ್ತು ಇತರ ಪರಿಕರಗಳನ್ನು ಪರಿಶೀಲಿಸಿದರು.

ಹೀಗಿರುವ ಬೇಡಿಕೆಯಂತೆ ಹೊರ ರಾಜ್ಯಗಳಿಗೆ ಪ್ರಯಾಣಿಕರ ಅನುಕೂಲಕ್ಕಾಗಿ ಬಳ್ಳಾರಿಯಿಂದ ಬಸ್‌ಗಳು ಪ್ರಾರಂಭಿಸಿರುವುದು ಸಂತೋಷದ ವಿಷಯವೆಂದರು. ಗ್ರಾಮೀಣ ಭಾಗಗಳಿಗೆ ಬೇಕಾದ ಬಸ್ಸಿನ ಸೌಲಭ್ಯವನ್ನು ಹೆಚ್ಚಿಸಲು ಅಧಿಕಾರಿಗಳ ಜೊತೆಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಕೆಎಸ್ಆರ್ಟಿಸಿ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!