ವೃದ್ಧೆ ಕಾಣೆ : ಪತ್ತೆಗೆ ಸಹಕರಿಸಲು ಮನವಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 10- ಯಲಬುರ್ಗಾ ತಾಲೂಕಿನ ಸಂಗನಹಾಳ ಗ್ರಾಮದ ಲಕ್ಷ್ಮವ್ವ ಗಂಡ ಹೊನ್ನಪ್ಪ ಶಿದ್ದರೆಡ್ಡಿ ಎಂಬ ೮೦ ವರ್ಷದ ವೃದ್ಧ ಮಹಿಳೆಯು ೨೦೨೩ ಏಪ್ರಿಲ್ ೧೮ ರಿಂದ ಕಾಣೆಯಾಗಿದ್ದು, ಈವರೆಗೂ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: ೪೬/೨೦೨೩ ಕಲಂ ಮನುಷ್ಯ ಕಾಣೆ ಅಡಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ವೃದ್ಧ ಮಹಿಳೆಯು ೫.೩ ಅಡಿ ಎತ್ತರವಿದ್ದು, ದುಂಡನೇಯ ಮುಖ, ಗೋಧಿ ಮೈಬಣ್ಣ, ಸದೃಢ ಮೈಕಟ್ಟು ಹೊಂದಿದ್ದಾರೆ. ಕಾಣೆಯಾದಾಗ ಚಾಕಲೇಟ್ ಬಣ್ಣದ ಸೀರೆ ಹಾಗೂ ಕಪ್ಪು ಬಣ್ಣದ ಜಂಪರ ಧರಿಸಿದ್ದರು. ಕನ್ನಡ ಭಾಷೆ ಮಾತನಾಡುತ್ತಾರೆ.
ಈ ಚಹರೆಯ ವೃದ್ಧೆಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ದೊರೆತಲ್ಲಿ ಯಲಬುರ್ಗಾ ಪೋಲಿಸ್ ಠಾಣೆ ದೂ.ಸಂ: ೯೪೮೦೮೦೩೭೪೯, ೦೮೫೩೪-೨೨೦೧೩೩ ಅಥವಾ ಕಂಟ್ರೋಲ್ ರೂಂ ಕೊಪ್ಪಳ ದೂ.ಸಂ: ೦೮೫೩೯-೨೨೦೨೨೨ ಗೆ ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದು ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.
