ವ್ಯಕ್ತಿ ಕಾಣೆ : ಪತ್ತೆಗೆ ಸಹಕರಿಸಲು ಮನವಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 10- ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದ ಕಳಕೇಶ್ ತಂದೆ ಶೇಖಪ್ಪ ಬಜಂತ್ರಿ ಎಂಬ ೨೦ ವರ್ಷದ ವ್ಯಕ್ತಿಯು ೨೦೨೩ ಪೆಬ್ರವರಿ ೨೫ ರಿಂದ ಕಾಣೆಯಾಗಿದ್ದು, ಈವರೆಗೂ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: ೩೪/೨೦೨೩ ಕಲಂ ಮನುಷ್ಯ ಕಾಣೆ ಅಡಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ವ್ಯಕ್ತಿಯು ೫.೨ ಅಡಿ ಎತ್ತರವಿದ್ದು, ದುಂಡನೇಯ ಮುಖ, ಸಾದಾಗೆಂಪು ಮೈಬಣ್ಣ, ಸದೃಢ ಮೈಕಟ್ಟು ಹೊಂದಿದ್ದಾರೆ. ಕಾಣೆಯಾದಾಗ ಕಪ್ಪು ಬಣ್ಣದ ಟೀ ಶರ್ಟ ಹಾಗೂ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದರು. ಕನ್ನಡ ಭಾಷೆ ಮಾತನಾಡುತ್ತಾರೆ.
ಈ ಚಹರೆಯ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ದೊರೆತಲ್ಲಿ ಯಲಬುರ್ಗಾ ಪೋಲಿಸ್ ಠಾಣೆ ದೂ.ಸಂ: ೯೪೮೦೮೦೩೭೪೯, ೦೮೫೩೪-೨೨೦೧೩೩ ಅಥವಾ ಕಂಟ್ರೋಲ್ ರೂಂ ಕೊಪ್ಪಳ ದೂ.ಸಂ: ೦೮೫೩೯-೨೨೦೨೨೨ ಗೆ ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದು ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.
