ಕಾರ್ಮಿಕರಿಗೆ ಕನಿಷ್ಠ ವೇತನ ನೀಡದ ಗುತ್ತಿಗೆದಾರರ ವಿರುದ್ಧ ದೂರು ದಾಖಲಿಸುವಂತೆ ಆಗ್ರಹ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, ಮ10- ಕುಡತಿನಿ ಬಿಟಿಪಿಎಸ್ ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನ ನೀಡದ ಗುತ್ತಿಗೆದಾರರ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರ ವಿರುದ್ಧ ದೂರು ದಾಖಲಿಸುವಂತೆ ಆಗ್ರಹಿಸಿ, ಕುಡತಿನಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಮತ್ತು ಗುತ್ತಿಗೆ ಕಾರ್ಮಿಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿ.ರಾಜಶೇಖರ್ ನೇತೃತ್ವದಲ್ಲಿ ಪಟ್ಟಣದ ಪೊಲೀಸ್ ಠಾಣೆಯ ಪಿಎಸ್‌ಐ ಶಾಂತಮೂರ್ತಿ ಇವರಿಗೆ ಮನವಿ ಪತ್ರ ಸಲ್ಲಿಸಿದರು.
ನಂತರ ವಿ.ರಾಜಶೇಖರ್ ಮಾತನಾಡಿ, ಗುತ್ತಿಗೆದಾರರು ಕುಡುತಿನಿ ಬಿಟಿಪಿಎಸ್‌ನಲ್ಲಿ ಗುತ್ತಿಗೆದಾರರಾಗಿದ್ದು, ಎಲ್ಲಾ ಗುತ್ತಿಗೆದಾರರಲ್ಲಿ ಸುಮಾರು 650 ನುರಿತ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.
ಸುಮಾರು ವರ್ಷಗಳಿಂದ ಬಿಟಿಪಿಎಸ್‌ನಲ್ಲಿ ದುಡಿಯುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಧೀನದಡಿಯಲ್ಲಿ ಕನಿಷ್ಠ ವೇತನ ಕೂಲಿ ಕಾರ್ಮಿಕರಿಗೆ ನೀಡಬೇಕು. ಪ್ರತಿ ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆ ಕಛೇರಿಯನ್ನು ಸರ್ಕಾರ ಸ್ಥಾಪಿಸಿದೆ. ಕಾರ್ಮಿಕರಿಗೆ ಅನ್ಯಾಯವಾಗದಂತೆ ತಡೆಯಲು ಅವರಿಗೆ ಕನಿಷ್ಠ ವೇತನ ಸಿಗಬೇಕೆಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ತಿಳಿಸಿದರೂ ಸಹ ಬಿಟಿಪಿಎಸ್ ಗುತ್ತಿಗೆದಾರರಿಗೆ ಲೆಕ್ಕಕ್ಕಿಲ್ಲದಂತಾಗಿದೆ. ಮೇಲ್ನೋಟಕ್ಕೆ ಕಾಣುವಂತೆ ಬಿಟಿಪಿಎಸ್‌ನಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದ್ದಾರೆ.
2023ರ ಡಿ.26ರಂದು ಸಹಾಯಕ ಕಾರ್ಮಿಕ ಅಧಿಕಾರಿಗಳು, ಬಳ್ಳಾರಿ ಇಲಾಖೆಯಲ್ಲಿ 64 ಕಾರ್ಮಿಕರಿಗೆ ಸುರೇಶ್ ಎಲೆಕ್ಟಿಕಲ್ ಇವರಿಂದ ನ್ಯಾಯ ಒದಗಿಸಲು ಆದೇಶ ನೀಡಿರುತ್ತಾರೆ. ಪ್ರತಿಯೊಬ್ಬರಿಗೂ ಅನ್ಯಾಯವಾದ ತಾರತಮ್ಯವಾಗಿರುವ ಹಣ ಮೊತ್ತಕ್ಕೆ 21,50,150 ಇದ್ದು, ಪ್ರತಿಯೊಬ್ಬರಿಗೂ ರೂ 30,495 ಬರಬೇಕಾಗಿರುತ್ತದೆ. ಈ ಹಣವು ಕಾರ್ಮಿಕರಿಗೆ ಸಂದಾಯವಾಗಿರುವುದಿಲ್ಲ.
ಕನಿಷ್ಟ 681 ರೂ. ವೇತನ ನೀಡಬೇಕು. ಆದರೆ, ಈಗ ಬರೀ 400 ರೂ.ಗಳ ದಿನಗೂಲಿ ವೇತನ ನೀಡಲಾಗುತ್ತಿದೆ. ಇದರಿಂದ ಕಾರ್ಮಿಕರ ಜೀವನ ಕಷ್ಟಕರವಾಗಿದೆ. ಮಾನ್ಯರೆ ಇನ್ನೂ ಎರಡು ದಿನಗಳೊಳಗಾಗಿ ಬಿಟಿಪಿಎಸ್ ಗುತ್ತಿಗೆದಾರರು, ಅಧಿಕಾರಿಗಳು ಸೇರಿ ಕಾರ್ಮಿಕರಿಗೆ ಕನಿಷ್ಠ ವೇತನ ನೀಡಲು ಒಪ್ಪದಿದ್ದರೆ ನಾವುಗಳು ಇದೇ ಸೆ.11ರ ಬುಧವಾರದಂದು ಕಾರ್ಮಿಕರ ಸಂಘದಲ್ಲಿ ಬಿಟಿಪಿಎಸ್ ಮುಖ್ಯದ್ವಾರ ಬಂದ್ ಮಾಡುವ ಮೂಲಕ ಮುಷ್ಕರ ಮಾಡಲಾಗುವುದು. ಈ ಮುಷ್ಕರದ ಮುಂಚಿತವಾಗಿ ಕಾರ್ಮಿಕರ ಬಹು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ಈ ವೇಳೆ ಸದಸ್ಯ ವೆಂಕಟರಮಣಬಾಬು ಹಾಗೂ ಇತರರು ಇದ್ದರು.
