ಸಾರ್ವಜನಿಕರ ಕುಂದು ಕೊರತೆಗಳ ಆಹ್ವಾಲು ಸ್ವೀಕಾರ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 12- ಸರ್ಕಾರದ ಅಧಿಕಾರಿಗಳು ಪ್ರಾಮಾಣಿಕವಾಗಿ ಮತ್ತು ದಕ್ಷತೆಯಿಂದ ಕಾರ್ಯ ನಿರ್ವಹಿಸುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಬಳ್ಳಾರಿ ವಿಭಾಗದ ಲೋಕಾಯುಕ್ತ ಸಿಪಿಐ ಸಂಗಮೇಶ್ ಅವರು ಹೇಳಿದರು.
ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಸಭಾಭವನದಲ್ಲಿ ಕರ್ನಾಟಕ ಸರ್ಕಾರ ಬಳ್ಳಾರಿ ಕರ್ನಾಟಕ ಲೋಕಾಯುಕ್ತ ಕಂದಾಯ ಇಲಾಖೆ ತಾಲೂಕ ಆಡಳಿತ ಸಹಭಾಗಿತ್ವದಲ್ಲಿ ಅವರು ಸಾರ್ವಜನಿಕರಿಂದ ಕುಂದು ಕೊರತೆಗಳ ಆಹ್ವಾಲು ಸ್ವೀಕರಿಸಿ ಮಾತನಾಡುತ್ತಾ ನಾವೆಲ್ಲ ಜನರ ಸೇವೆಗಾಗಿ ಇರುವುದು ಹೀಗಾಗಿ ಜನರ ಕೆಲಸಗಳನ್ನು ಶಿಸ್ತು ಬದ್ಧವಾಗಿ ಮಾಡಬೇಕು ಸರ್ಕಾರ ಬಡ ಜನರಿಗಾಗಿ ಅವರ ಅನುಕೂಲಕ್ಕಾಗಿ ಸಾಕಷ್ಟು ಯೋಜನೆ ಜಾರಿಗೆ ತಂದಿದೆ ಯೋಜನೆಗಳನ್ನು ಜನರಿಗೆ ತಲುಪಿಸುವ ಉದ್ದೇಶಕ್ಕಾಗಿ ಇಲಾಖೆಗಳನ್ನು ರಚಿಸಿದೆ ಈ ಇಲಾಖೆಗಳಲ್ಲಿನ ಅಧಿಕಾರಿಗಳು ಅವರ ಕೆಲಸವನ್ನು ದೇವರ ಕೆಲಸ ಎಂದು ಭಾವಿಸಿ ಕಾರ್ಯ ನಿರ್ವಹಿಸಬೇಕು ಹೆಚ್ಚು ಸಮಯ ಕಾಯಿಸದೆ ಅವರ ಕೆಲಸ ಮಾಡಿಕೊಡಬೇಕು ಎಂದು ಅವರು ನುಡಿದರು.
ತಹಸಿಲ್ದಾರ್ ಎಚ್ ವಿಶ್ವನಾಥ ಅವರು ಮಾತನಾಡಿ ಸಿರುಗುಪ್ಪ ನಗರದಲ್ಲಿ ಸ್ವಚ್ಛತೆ ಇಲ್ಲದೆ ಸೊಳ್ಳೆಗಳ ಉದ್ಭವವಾಗಿ ಡೆಂಗಿ ಜ್ವರ ಮುಂತಾದ ರೋಗಗಳಿಗೆ ಮಾಡಿಕೊಡುತ್ತದೆ ಈ ಮಲೇರಿಯಾ ಕಾಪಾಡಲು ನಗರ ಸಭೆಯಿಂದ ಔಷಧವನ್ನು ಸಿಂಪಡಿಸಬೇಕು ಸ್ವಚ್ಛತೆ ಕಾಪಾಡಬೇಕು ಎಂದು ನಗರಸಭೆಯವರಿಗೆ ಸೂಚಿಸಿದರು ನಗರಸಭಾ ಪೌರಾಯುಕ್ತ ಎಚ್.ಎನ್.ಗುರುಪ್ರಸಾದ್ ಅವರು ಮಾತನಾಡಿದರು.
ತಾಲೂಕ ಆರೋಗ್ಯ ವೈದ್ಯಾಧಿಕಾರಿ ಡಾ.ಬಿ.ಈರಣ್ಣ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಗುರಪ್ಪ, ತಾಲೂಕ ಪಂಚಾಯತ್ ವ್ಯವಸ್ಥಾಪಕಿ ಸುಜಾತ ಕೋರಿ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಬಾಷಾ, ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ.ಪಾಟೀಲ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಘವೇಂದ್ರ ವರ್ಮಾ, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಎಂ.ಸಿದ್ದಯ್ಯ, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಏ.ಗಾದಿಲಿಂಗಪ್ಪ, ಸಿಡಿಪಿಓಜಿ ಪ್ರದೀಪ್, ಸಾಮಾಜಿಕ ಕಾರ್ಯಕರ್ತ ಎ.ಅಬ್ದುಲ್ ನಬಿ, ಅಬಕಾರಿ ಸಿಪಿಐ ಕೀರ್ತನ, ಜಿಲ್ಲಾ ಪಂಚಾಯತ್ ರಾಜ್ ಇಂಜಿನಿಯರಿAಗ್ ಎಇಇ, ಪೋಲಿಸ್ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ತಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
