ಕೊಪ್ಪಳ ಪಿಕಾರ್ಡ ಬ್ಯಾಂಕ್ ವಾರ್ಷಿಕ ಸಭೆ
ವಸುಲಾತಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ : ಗವಿಸಿದ್ದಪ್ಪ ಹುಳ್ಳಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 12- ಕೊಪ್ಪಳ ಪಿಕಾರ್ಡ ಬ್ಯಾಂಕ್ ವಸೂಲಾತಿಯನ್ನು 77.81% ಪ್ರಗತಿಯನ್ನ ಸಾಧಿಸುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ ಸದಸ್ಯರ ಸಹಕಾರದಿಂದ ಬ್ಯಾಂಕು ಪ್ರಗತಿದಾಯಕವಾಗಿ ನಡೆಯುತ್ತಿದೆ ಎಂದು ಸಭೆಗೆ ಬ್ಯಾಂಕಿನ ಅಧ್ಯಕ್ಷ ಗವಿಸಿದ್ದಪ್ಪ ಹುಳ್ಳಿ ಹೇಳಿದರು.
ಅವರು ಕೊಪ್ಪಳ ನಗರದಲ್ಲಿ ಜರುಗಿದ ಪ್ರಾಥಮಿಕ ಸಹಕಾರ ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕ ನಿ, ಕೊಪ್ಪಳ ಇದರ ೬೧ನೇ ವರ್ಷದ ವಾರ್ಷಿಕ ಮಹಾ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಬ್ಯಾಂಕು ವಸೂಲಾತಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯಲು ಸಿಬ್ಬಂದಿಗಳು ನಿರಂತರ ಪರಿಶ್ರಮದಿಂದ ಈ ಸಾಧನೆಯಾಗಿದೆ. ಇದು ಸಂತೋಷದ ಸಂಗತಿಯಾಗಿದೆ ಬ್ಯಾಂಕಿನ ಪ್ರಗತಿ ಮರುಪಾವತಿಯಲ್ಲಿ ಅಡಗಿದ್ದು ಗ್ರಾಹಕರು ಸಕಾಲಕ್ಕೆ ಸಾಲ ಮರುಪಾವತಿ ಮಾಡುವಂತೆ ಮನವಿ ಮಾಡಿದರು.
ಮಹಾಸಭೆಯಲ್ಲಿ ಬ್ಯಾಂಕಿನ ವ್ಯೆವಸ್ಥಾಪಕ ಎಂ.ವಿಜಯಕುಮಾರ ಮಾರ್ಚ 31 ಕ್ಕೆ ಇದ್ದಂತೆ ಜಮಾ-ಖರ್ಚು,ಲಾಭ-ಹಾನಿ ತ:ಖ್ತೆ, ಅಢಾವೆ ಪತ್ರಿಕೆ, 2024-25ನೇ ಸಾಲಿನ ಮುಂಗಡ ಆಯ್ಯ-ವ್ಯೆಯ ಗಳನ್ನು ಸರ್ವ ಸದಸ್ಯರ ಸಭೆಯಲ್ಲಿ ಮಂಡಿಸಿ ಸುದೀರ್ಘವಾಗಿ ಚೆರ್ಚಿಸಿ ಅನುಮೋದನೆಯನ್ನು ಪಡೆದರು.
ಸನ್ಮಾನ: ಈ ಸಂದರ್ಭದಲ್ಲಿ ಬ್ಯಾಂಕಿನ ಸಿಬ್ಬಂದಿಗಳಾದ ವ್ಯೆವಸ್ಥಾಪಕ ಎಂ.ವಿಜಯಕುಮಾರ ಹಾಗೂ ಕ್ಷೇತ್ರಾಧಿಕಾರಿ ಎ.ಶರಣಪ್ಪ, ಶ್ರೀಮತಿ ವಿ.ಭಾಗ್ಯಮ್ಮ, ಕರಿಯಪ್ಪ, ಮಹೇಶ, ದೇಸಾಯಿಗೌಡ ಇವರುಳಿಗೆ ಆಡಳಿತ ಮಂಡಳಿಯವರಿAದ ಸನ್ಮಾಸಿ ಗೌರವಿಸಲಾಯಿತು.
ಕಾರ್ಯಕ್ರಮದ ವೇದಿಕೆ ಮೇಲೆ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀಮತಿ ಲಕ್ಷ್ಮೀದೇವಿ ನಿಂಗಜ್ಜ, ನಿರ್ದೇಶಕರಾದ ಮಾರುತಿ ಅಂಗಡಿ, ಗವಿಸಿದ್ದಪ್ಪ ನಂದಾಪೂರು, ಕರೇಕಲ್ಲಪ್ಪ ಮಣ್ಣೂರು, ಪರುಶರಾಮಪ್ಪ ಮತ್ತೂರು, ಹನಮಂತಪ್ಪ ನಾಯಕ, ಶಿವನಗೌಡ ಪಾಟೀಲ, ಅಸಮನಸಾಬ ನದಾಫ, ಶ್ರೀಮತಿ ಪದ್ದವ್ವ ಮತ್ತೂರು, ದ್ಯಾಮವ್ವ ಕೆಂಚಪ್ಪ, ಲಚಮವ್ವ, ಲಮಾಣ ಇತರರು ಉಪಸ್ಥಿತರಿದ್ದರು.
